ವಾಯುಸೇನೆ ಮತ್ತಷ್ಟು ಬಲಿಷ್ಠ ! ನಡೆಯಿತು ಐತಿಹಾಸಿಕ ಒಪ್ಪಂದ ! ಮಾಧ್ಯಮಗಳೇ ನಿಮಗೆ ಇದು ಕಾಣಿಸುತ್ತಿಲ್ಲವೇ? ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಸೇನೆಯು ಎಲ್ಲ ವಿಭಾಗಗಳಲ್ಲಿಯೂ ದಿನೇದಿನೇ ಬಲಿಷ್ಠವಾಗುತ್ತಾ ಸಾಗುತ್ತಿದೆ. ಇದೀಗ ಭಾರತೀಯ ವಾಯುಪಡೆಯ ದಶಕಗಳ ಕನಸು ನನಸಾಗುವ ಸಮಯ ಎದುರಾಗಿದ್ದು ದೇಶಿಯವಾಗಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.

ಆದರೆ ಇಲ್ಲಿ ವಿಪರ್ಯಾಸವೆಂದರೇ, ದಿನದ 24 ಗಂಟೆಯೂ ನ್ಯೂಸ್ ಪ್ರಸಾರ ಮಾಡುವ ಯಾವ ಮಾಧ್ಯಮಗಳಿಗೂ ಈ ಸುದ್ದಿ ಕಾಣಿಸುತ್ತಿಲ್ಲ. ನಮ್ಮ ಸೇನೆ ಬಲಿಷ್ಠವಾಗುತ್ತದೆ ಎಂದರೆ ನಮಗೆ ಅದು ಹೆಮ್ಮೆಯ ವಿಷಯ, ಆದರೆ ಮಾಧ್ಯಮಗಳು ಟಿಆರ್ಪಿ ಹಿಂದೆ ಬಿದ್ದು ಈ ಸುದ್ದಿಗಳನ್ನು ಹೆಡ್ಲೈನ್ಸ್ ನಲ್ಲಿ ಬಿಡಿ ಯಾವುದೋ ಮೂಲೆಯಲ್ಲಿ ಕೂಡ ಪ್ರಸಾರ ಮಾಡುತ್ತಿಲ್ಲ. ಅದೇನೇ ಆಗಲಿ ಇದೀಗ ಭಾರತೀಯ ವಾಯುಪಡೆಯು ಹಾಗೂ ಎಚ್ಎಎಲ್ ಕಂಪನಿಯ ನಡುವೆ ಮಹತ್ವದ ಒಪ್ಪಂದ ನಡೆದಿದೆ. ಈ ಒಪ್ಪಂದದ ಸಂಪೂರ್ಣ ವಿವರಗಳು ಕೆಳಗಡೆ ಇವೆ.

ಇದೀಗ ಭಾರತೀಯ ವಾಯುಪಡೆಗೆ ಅಗತ್ಯವಾಗಿರುವ ತೇಜಸ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಕೇಂದ್ರ ಸರ್ಕಾರ HAL ಕದ ತಟ್ಟಿದ್ದು, ಬರೋಬ್ಬರಿ 83 ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಭಾರತದ ವಿಚಾರದಲ್ಲಿ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಅತಿದೊಡ್ಡ ದೇಶಿಯ ಮಿಲಿಟರಿ ಒಪ್ಪಂದವಾಗಿದೆ. 36 ರಫೆಲ್ ವಿಮಾನಗಳ ಜೊತೆ 83 ತೇಜಸ್ ವಿಮಾನಗಳು ಸೇರಿಕೊಂಡರೆ ಭಾರತೀಯ ವಾಯುಪಡೆ ಶತ್ರು ರಾಷ್ಟ್ರಗಳನ್ನು ಕ್ಷಣಮಾತ್ರದಲ್ಲಿ ಮುಗಿಸಿಬಿಡಲು ಇವೆ. ಈ ಒಪ್ಪಂದಕ್ಕಾಗಿ ಮೊದಲು ಎಚ್ಎಎಲ್ ಕಂಪನಿಯು 56,500 ಕೋಟಿ ಬೇಡಿಕೆ ಇಟ್ಟಿತ್ತು, ಆದರೆ ವಾಯು ಸೇನೆಯ ಜೊತೆ ಮಾತುಕತೆಯ ನಂತರ ಕೇವಲ 39 ಸಾವಿರ ಕೋಟಿ ಗಳಿಗೆ ಒಪ್ಪಂದ ಅಂತಿಮಗೊಂಡಿದ್ದು ಉಳಿದ 17 ಸಾವಿರ ಕೋಟಿಗಳನ್ನು ಇತರ ಬೆಳವಣಿಗೆಗೆ ಬಳಸಲಾಗುವುದು ಎಂದು ವಾಯು ಸೇನೆ ತಿಳಿಸಿದೆ.

ಈ ಯೋಜನೆಯ ಮೂಲಕ ದೇಶಿಯವಾಗಿ ರಕ್ಷಣಾ ಉತ್ಪಾದನೆಗೆ ಮಹತ್ವ ದೊರೆಯಲಿದ್ದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಈ ಯುದ್ಧ ವಿಮಾನಗಳು ತಯಾರಾಗಲಿದ್ದು, ಉದ್ಯೋಗ ಸೃಷ್ಟಿಯ ಜೊತೆ ಭಾರತೀಯ ವಾಯುಪಡೆಗೆ ಆನೆಬಲ ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ.

Post Author: Ravi Yadav