ವಿಜಯೇಂದ್ರ ರವರ ಕುರಿತು ಮಹತ್ವದ ಸುಳಿವು ನೀಡಿದ ರೇಣುಕಾಚಾರ್ಯ ! ವಿಪಕ್ಷಗಳಿಗೆ ಟಾಂಗ್ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗೆ ವಿಜಯೇಂದ್ರ ರವರು ಬಾರಿ ಸದ್ದು ಮಾಡುತ್ತಿದ್ದಾರೆ. ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿ ಹೈ ಕಮಾಂಡ್ ಬಳಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಿರುವ ವಿಜಯೇಂದ್ರ ರವರನ್ನು ಟೀಕಿಸುವ ಬರದಲ್ಲಿ ವಿಪಕ್ಷಗಳು ಸರ್ಕಾರದ ಅಧಿಕಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಇದೀಗ ಈ ಎಲ್ಲಾ ಆರೋಪಗಳಿಗೆ ಬಿಜೆಪಿ ಪಕ್ಷದ ಹಿರಿಯ ನಾಯಕ ರೇಣುಕಾಚಾರ್ಯ ರವರು, ಪ್ರತಿಕ್ರಿಯೆ ನೀಡಿದ್ದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ರೇಣುಕಾಚಾರ್ಯರವರು, ಸದ್ಯ ರಾಜಕೀಯದಲ್ಲಿ ಜನತೆಯು ಯುವ ನಾಯಕರನ್ನು ಎದುರು ನೋಡುತ್ತಿದ್ದಾರೆ. ಸರ್ಕಾರದ ವಿಷಯದಲ್ಲಿ ವಿಜಯೇಂದ್ರ ರವರು ಇಲ್ಲಿಯವರೆಗೂ ಹಸ್ತಕ್ಷೇಪ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ. ತಮಗೆ ನೀಡಿರುವ ಯಾವುದೇ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುವುದಿಲ್ಲ. ಇನ್ನು ಹೇಳುವುದಾದರೇ, ವಿಜಯೇಂದ್ರ ರವರು ನನ್ನ ಸಹೋದರನಿದ್ದಂತೆ, ಸದ್ಯ ಪಕ್ಷದಲ್ಲಿ ವಿಜಯೇಂದ್ರ ರವರು, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದಲೇ, ಪಕ್ಷದ ನಿರ್ಧಾರಗಳ ವಿಚಾರವಾಗಿ ಸಕ್ರಿಯರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಮಾತನ್ನು ಮುಂದುವರೆಸಿದ ರೇಣುಕಾಚಾರ್ಯ ರವರು, ಬಿಜೆಪಿ ಪಕ್ಷದಲ್ಲಿ ಮೂಲ ಬಿಜೆಪಿ ಹಾಗೂ ವಲಸಿಗ ಬಿಜೆಪಿ ನಾಯಕರು ಎಂದು ವಿಭಜನೆ ನಡೆಸುವ ಗುಂಪು ಇಲ್ಲ. ಎಲ್ಲರೂ ಪಕ್ಷದ ಸಿದ್ದಂತವನ್ನು ಒಪ್ಪಿಕೊಂಡು ಪಕ್ಷ ಸೇರಿದ್ದಾರೆ, ಅವರೆಲ್ಲರೂ ನಮ್ಮವರೇ ಎಂದು ಹೇಳಿದರು. ಇನ್ನು ಸಚಿವ ಸ್ಥಾನದ ಬಗ್ಗೆ ಪ್ರಶ್ನೆ ಮಾಡಿದಾಗ ಯಾರೇ ಆಗಲಿ ಪಕ್ಷದ ಮೇಲೆ ಒತ್ತಡ ಏರಬಾರದು, ನಾನು ಕೂಡ ಸಚಿವನಾಗಬೇಕು ಎಂಬ ಆಕಾಂಕ್ಷೆ ಹೊಂದಿದ್ದೇನೆ, ಆದರೆ ಬೀದಿಯಲ್ಲಿ ನಿಂತು ಮಾತನಾಡಿದರೇ ಸಚಿವ ಸ್ಥಾನ ಸಿಗುತ್ತದೆ ಎಂಬುದು ಮೂರ್ಖತನ ಎಂದಿದ್ದಾರೆ.

Post Author: Ravi Yadav