ಗೆದ್ದು ಬೀಗಿದ ರಾಷ್ಟ್ರೀಯತೆ ! ಕಂಡು ಕೇಳರಿಯದ ರೀತಿ ಸೋಲನ್ನು ಕಂಡ ದೀಪಿಕಾ ! ಅಸಲಿಗೆ ಪಾಟ್ನಾದಲ್ಲಿ ನಡೆದದ್ದೇನು ಗೊತ್ತಾ??

ದೀಪಿಕಾ ಪಡುಕೋಣೆ ರವರು ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿ ಕೊಂಡಿದ್ದರು. ಆದರೆ ಈ ಬಾರಿ ಜೆಎನ್ಯು ಕಾಲೇಜಿಗೆ ಹೋಗುವ ಮೂಲಕ ಜನರ ರಾಷ್ಟ್ರೀಯತೆಯನ್ನು ಕೆದಕಿದ ಕಾರಣ ಪಾಟ್ನಾದಲ್ಲಿ ದೀಪಿಕಾ ರವರಿಗೆ ಬಾರಿ ಮುಜುಗರವಾಗುವ ಅಂತಹ ಘಟನೆ ನಡೆದಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಹಲವಾರು ವರ್ಷಗಳಿಂದ ದೀಪಿಕಾ ಪಡುಕೋಣೆ ರವರು ಬಾಲಿವುಡ್ನ ಖ್ಯಾತ ನಟಿಯರ ಸಾಲಿನಲ್ಲಿ ಇದ್ದರು. ದೀಪಿಕಾ ಪಡುಕೋಣೆ ರವರ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಹಲವಾರು ಜನ ಮುಂಗಡ ಟಿಕೆಟ್ ಗಳನ್ನು ಬುಕ್ ಮಾಡಿಕೊಂಡು ತಮ್ಮ ಸೀಟನ್ನು ಕಾಯ್ದಿರಿಸಿ ಕೊಂಡು ಮೊದಲ ದಿನವೇ ಚಿತ್ರ ನೋಡಲು ತುದಿಗಾಲಲ್ಲಿ ಕಾದು ನಿಂತಿರುತ್ತಿದ್ದರು. ಆದರೆ ಜೆಎನ್ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಕಾರಣಕ್ಕಾಗಿ ದುಬಾರಿ ಬೆಲೆ ತೆತ್ತಿದ್ದಾರೆ. ಒಂದೆಡೆ ಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಓಪನಿಂಗ್ ಕಲೆಕ್ಷನ್ ದಾಖಲಾಗಿರುವ ಸುದ್ದಿಯಾದರೆ ಮತ್ತೊಂದೆಡೆ ಪಾಟ್ನಾದ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ನಲ್ಲಿ ನಡೆದ ಘಟನೆ ದೀಪಿಕಾ ರವರಿಗೆ ಶಾಕ್ ನೀಡಿರುವುದು ಸುಳ್ಳಲ್ಲ.

ಒಂದು ಕಡೆ ರಾಷ್ಟ್ರೀಯತೆ ಮೆರೆದಿರುವ Tanhaji ಚಿತ್ರ ಆಫೀಸ್ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಸಂದರ್ಭದಲ್ಲಿ ಮತ್ತೊಂದೆಡೆ ಪಾಟ್ನಾ ನಗರದಲ್ಲಿ ಬಿಡುಗಡೆಯಾದ ಮೊದಲ ದಿನದ ಶೋನಲ್ಲಿ ಕೇವಲ ಮೂರು ಜನರು ಮಾತ್ರ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ಗೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ದೀಪಿಕಾ ಪಡುಕೋಣೆ ರವರ ಚಿತ್ರ ಈ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾದಾಗ ಜನ ಕಿಕ್ಕಿರಿದು ತುಂಬುತ್ತಿದ್ದರು ಎಂದು ಮಲ್ಟಿಪ್ಲೆಕ್ಸ್ ಮಾಲೀಕರು ತಿಳಿಸಿದ್ದಾರೆ. ಮೊದಲ ದಿನದ ಶೋನಲ್ಲಿ ಕೇವಲ ಮೂರು ಜನ ಭಾಗವಹಿಸಿದ್ದು ಬೇಸರವಾಗಿದೆ ಎಂದು ಚಿತ್ರತಂಡ ಕೂಡ ಅಭಿಪ್ರಾಯ ಪಟ್ಟಿದ್ದು, ಎಲ್ಲೆಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಆದರೂ ಚಿತ್ರ ನೋಡಲು ಬಹಳ ಕಡಿಮೆ ಜನ ಬರುತ್ತಿದ್ದಾರೆ ಎಂದು ದುಃಖ ತೋಡಿಕೊಂಡಿದೆ. ಮಾಲೀಕರ ಪ್ರಕಾರ ರಾಷ್ಟ್ರೀಯತೆಯ ಜೊತೆ ದೀಪಿಕಾ ಪಡುಕೋಣೆ ರವರು ವಿವಾದ ಸೃಷ್ಟಿಸಿ ಕೊಂಡ ಕಾರಣ ಎಲ್ಲರೂ Tanhaji ಚಿತ್ರದ ಕಡೆ ವಾಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Post Author: Ravi Yadav