ದೀಪಿಕಾ ಬೆಂಬಲಕ್ಕೆ ನಿಂತ ದೇಶಭಕ್ತರನ್ನು ಕಟು ಮಾತುಗಳಿಂದ ಟೀಕೆ ಮಾಡಿದ ಶಿವಸೇನೆ ! ಕೆರಳಿದ ದೇಶಭಕ್ತರು ನೀಡಿದ ಉತ್ತರ ಮಾತ್ರ ಅದ್ಭುತ !

ದೀಪಿಕಾ ಬೆಂಬಲಕ್ಕೆ ನಿಂತ ದೇಶಭಕ್ತರನ್ನು ಕಟು ಮಾತುಗಳಿಂದ ಟೀಕೆ ಮಾಡಿದ ಶಿವಸೇನೆ ! ಕೆರಳಿದ ದೇಶಭಕ್ತರು ನೀಡಿದ ಉತ್ತರ ಮಾತ್ರ ಅದ್ಭುತ !

ನಮಸ್ಕಾರ ಸ್ನೇಹಿತರೇ, ದೀಪಿಕಾ ಪಡುಕೋಣೆ ರವರು ತುಕ್ದೆ ಗ್ಯಾಂಗಿನ ಕಾಲೇಜಿನ ವಿದ್ಯಾರ್ಥಿಗಳ ಗುಂಪಿನ ಪರವಾಗಿ ನಿಂತು ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣ ದೀಪಿಕಾ ಪಡುಕೋಣೆ ರವರ ಚಪಕ್ ಸಿನಿಮಾವನ್ನು ತಿರಸ್ಕರಿಸು ವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರು ಧ್ವನಿಯೆತ್ತಿದ್ದರು.

ಕೇವಲ ಅಭಿಯಾನ ಆರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 5.5 ಲಕ್ಷಕ್ಕೂ ಹೆಚ್ಚು ಟ್ವೀಟುಗಳು ದೀಪಿಕಾ ಸಿನಿಮಾ ವನ್ನು ನೋಡದಂತೆ ಟ್ವಿಟರ್ನಲ್ಲಿ ಪೋಸ್ಟ್ ಆಗಿದ್ದವು. ಇದರ ಬೆನ್ನಲ್ಲೇ ನಾವು ದೀಪಿಕಾ ಪಡುಕೋಣೆ ರವರನ್ನು ಸಪೋರ್ಟ್ ಮಾಡುತ್ತೇವೆ ಎಂಬ ಟ್ರೆಂಡಿಂಗ್ ಕೂಡ ಆರಂಭವಾಗಿತ್ತು, ಕಲಬುರ್ಗಿ ಸೇರಿದಂತೆ ಹಲವಾರು ಕಡೆ ಯುವ ಕಾಂಗ್ರೆಸ್ಸಿಗರು ಸಂಪೂರ್ಣ ಥಿಯೇಟರ್ ಗಳನ್ನು ಸಿನಿಮಾಗೆ ಬೆಂಬಲ ಸೂಚಿಸಲು ಬುಕ್ ಮಾಡಿದ್ದರು. ಇದರ ಬೆನ್ನಲ್ಲೇ ಶಿವಸೇನಾ ಪಕ್ಷವು ದೀಪಿಕಾ ಪಡುಕೋಣೆ ಅವರ ಬೆಂಬಲಕ್ಕೆ ನಿಂತು, ಈ ರೀತಿ ದೀಪಿಕಾ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಕರೆ ನೀಡುವ ಮನಸ್ಥಿತಿ ತಾಲಿಬಾನಿ ಮನಸ್ಥಿತಿಯ ಪ್ರತಿಫಲನ ಎಂದು ಕಟು ಶಬ್ದಗಳಿಂದ ಟೀಕೆ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಕಳೆದ ಮೂರು ವರ್ಷಗಳ ಹಿಂದೆ 2017ರಲ್ಲಿ ದೀಪಿಕಾ ಪಡುಕೋಣೆ ರವರ ಪದ್ಮಾವತ್ ಸಿನಿಮಾ ಬಿಡುಗಡೆಯಾದಾಗ ಶಿವಸೇನಾ ಪಕ್ಷವು ಚಿತ್ರದ ನಿರ್ದೇಶಕರ ಪ್ರತಿಮೆಯನ್ನು ಸುಟ್ಟು ಹಾಕಿ ಚಿತ್ರದ ಮೇಲೆ ಇಡೀ ದೇಶದಲ್ಲಿ ಸಂಪೂರ್ಣ ನಿಷೇಧವನ್ನು ಹೇರುವಂತೆ ಒತ್ತಾಯ ಮಾಡಿದ್ದ ವಿಚಾರವನ್ನು ಶಿವಸೇನಾ ಪಕ್ಷ ಮರೆತಂತೆ ಕಾಣುತ್ತಿದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಮಹಾರಾಷ್ಟ್ರದಲ್ಲಿ ಪ್ರದರ್ಶನ ಮಾಡದಂತೆ ತಡೆಯಲಾಗುತ್ತಿದೆ, ಸಾಲದು ಎಂಬಂತೆ, ಮಣಿರತ್ನಂ ಅವರ ಬಾಂಬೆ, ಕರಣ್ ಜೋಹರ್ ಅವರ ಮೈ ನೇಮ್ ಇಸ್ ಖಾನ್ ಹಾಗೂ ಅಮೀರ್ ಖಾನ್ ರವರ ಪಿಕೆ ಸೇರಿದಂತೆ ಹಲವಾರು ಚಿತ್ರಗಳನ್ನು ನಿಷೇಧಿಸುವಂತೆ ಸಾರ್ವಜನಿಕ ಆಸ್ತಿಯ ಮೇಲೆ ಪ್ರಹಾರ ಮಾಡಿ ಧ್ವಂಸ ಮಾಡಿದ್ದನ್ನೂ ನೆನಪಿಸಿದ್ದಾರೆ.