ಮೋದಿಯ 2020ರ ಭವಿಷ್ಯ ಕೇಳಿದರೆ ವಿರೋಧಿಗಳಿಗೆ ನಡುಕ ಖಚಿತ ! ಅಷ್ಟಕ್ಕೂ ಅಮ್ಮಣ್ಣಾಯ ಹೇಳಿದ್ದೇನು ಗೊತ್ತಾ??

ಮೋದಿಯ 2020ರ ಭವಿಷ್ಯ ಕೇಳಿದರೆ ವಿರೋಧಿಗಳಿಗೆ ನಡುಕ ಖಚಿತ ! ಅಷ್ಟಕ್ಕೂ ಅಮ್ಮಣ್ಣಾಯ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಹೊಸ ವರ್ಷದ ಆರಂಭದಲ್ಲಿ ಖ್ಯಾತ ಜ್ಯೋತಿಷಿಗಳು ದೇಶದ ಮುಂದಿನ ಸ್ಥಿತಿಗತಿ ಹಾಗೂ ರಾಜಕೀಯ ನಾಯಕರ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಇದೀಗ ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ರವರು ನರೇಂದ್ರ ಮೋದಿರವರ ಈ ವರ್ಷದ ಭವಿಷ್ಯ ಹೇಳಿದ್ದಾರೆ. ಈ ವರ್ಷದ ಭವಿಷ್ಯದಲ್ಲಿ ವಿರೋಧಿಗಳಿಗೆ ನಡುಕ ಹುಟ್ಟಿಸುವುದು ಮತ್ತಷ್ಟು ಖಚಿತ ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಇವರ ಭವಿಷ್ಯ ಸತ್ಯ ವಾಗಿದ್ದ ಕಾರಣ ಈ ಭಾರಿ ಕುತೂಹಲ ಕೆರಳಿಸಿದೆ.

ನರೇಂದ್ರ ಮೋದಿರವರ ಜಾತಕದ ಪ್ರಕಾರ ಇವರು ಹಿಂದೇಟು ಹಾಕುವ ಮನುಷ್ಯ ಅಲ್ಲ, ಯಾವುದಾದರೂ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡರೇ ಯಾವುದೇ ಕಾರಣಕ್ಕೂ ಹಿಂದೆ ಬರುವ ಮಾತೇ ಇಲ್ಲ. ಅದರಲ್ಲಿಯೂ ಮೋದಿ ರವರ ನಿರ್ಧಾರಗಳನ್ನು ವಿರೋಧಿಸಿ ಕೆರಳಿಸಿದರೇ ಕಾನೂನು ಮತ್ತಷ್ಟು ಕಠಿಣವಾಗಲಿದೆ. ನರೇಂದ್ರ ಮೋದಿ ರವರು ದೇಶದ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು ಶಾಸನ ಮಾಡುವ ವ್ಯಕ್ತಿ, ಒಂದು ವೇಳೆ ಅವರಿಗೆ ಯಾರಾದರೂ ಅಡ್ಡಗಾಲು ಹಾಕಲು ಪ್ರಯತ್ನಪಟ್ಟರೇ ಮತ್ತಷ್ಟು ಕಠಿಣವಾದ ಶಾಸನಗಳು ಹೊರ ಬೀಳುತ್ತವೆ. ಸುಖಾಸುಮ್ಮನೆ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸುವವರಿಗೆ ಈ ವರ್ಷ ತಕ್ಕ ಶಾಸ್ತಿ ಮಾಡಲಿದ್ದಾರೆ. ನರೇಂದ್ರ ಮೋದಿ ರವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ, ಆಲೋಚನೆ ಮಾಡಿ ಕ್ರಮ ತೆಗೆದುಕೊಳ್ಳುತ್ತಾರೆ.

ಅಷ್ಟೇ ಅಲ್ಲದೆ ಮೋದಿರವರ ಜಾತಕದಲ್ಲಿ ಈ ವರ್ಷ ಚಂದ್ರ ದೆಸೆ, ಕುಜ ಹಾಗೂ ಶುಕ್ರ ಗ್ರಹಗಳು ಶತ್ರುಗಳಾಗಿರುತ್ತವೆ. ದೇಶಕ್ಕೆ ಹಾಗೂ ದೇಶದ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೇ ನರೇಂದ್ರ ಮೋದಿ ರವರು ಕೆರಳುತ್ತಾರೆ, ಹೀಗೆ ಮಾಡಿದವರಿಗೆ ಉಳಿಗಾಲ ಇಲ್ಲ. ಮೋದಿರವರು ಮತ್ತಷ್ಟು ತಮ್ಮ ಚಾಣಕ್ಯ ತನದಿಂದ ವಿರೋಧ ಮಾಡಿದಷ್ಟು ಪ್ರಬಲವಾಗುತ್ತಾರೆ, ಮೋದಿ ರವರಿಗೆ ಅಖಂಡ ಸಾಮ್ರಾಜ್ಯದ ಯೋಗವಿದೆ. ಯಾರೇ ಆಗಲಿ ನರೇಂದ್ರ ಮೋದಿ ಅವರನ್ನು ಕೇವಲ ಪ್ರಶ್ನೆ ಮಾಡಬಹುದು, ಆದರೆ ಸೋಲಿಸಲು ಮಾತ್ರ ಸಾಧ್ಯವಿಲ್ಲ. ಇನ್ನು ಮುಂದೆ ವಿದೇಶಗಳು ಭಾರತದ ವಿರೋಧ ಪಕ್ಷಗಳ ಜತೆ ಕೈಜೋಡಿಸುತ್ತವೆ, ಬಹುತೇಕ ಪರ ದೇಶಗಳ ಮೋದಿರವರ ವಿರುದ್ಧ ಹಾಗೂ ಭಾರತದ ವಿರುದ್ಧ ನಿಲ್ಲುತ್ತಾರೆ, ಆದರೆ ಯಾವುದೇ ಕಾರಣಕ್ಕೂ ಮೋದಿ ಅವರನ್ನೇ ಆಗಲಿ ಅಥವಾ ಭಾರತವನ್ನು ಆಗಲಿ ಸೋಲಿಸಲು ಸಾಧ್ಯವೇ ಇಲ್ಲ. ರಾಹು-ಕೇತುಗಳು ಮೋದಿರವರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ, ಆದರೆ ತಮ್ಮ ಕೂಲಂಕುಶವಾದ ಪರಿಶೀಲನಾ ಗುಣದಿಂದ ಮೋದಿರವರು ಎಲ್ಲವನ್ನೂ ನಿಭಾಯಿಸುತ್ತಾರೆ. ಈ ವರ್ಷ ಹಿಂಸಾಚಾರದ ಸಾಧ್ಯತೆ ಕೂಡ ಕಾಣುತ್ತಿದೆ, 2020ರಲ್ಲಿ ಸಿಹಿ ಹಾಗೂ ಕಹಿ ಎರಡು ದೊರೆಯಲಿದೆ, ಮುಂದಿನ ವರ್ಷ ಮೋದಿ ಅವರ ಆಡಳಿತದಲ್ಲಿ ಸಂಪೂರ್ಣ ಸಿಹಿ ಸಿಗಲಿದೆ. ಆದ ಕಾರಣದಿಂದ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಎಂದಿದ್ದಾರೆ.