ಐಪಿಎಲ್ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡದ ಆಟಗಾರನಿಗೆ ಬ್ಯಾನ್ ಸಾಧ್ಯತೆ !! ಯಾರು ಮತ್ತು ಯಾಕೆ ಗೊತ್ತಾ??

ಇದೀಗ ಇನ್ನು ಐಪಿಎಲ್ ಗೆ ಹಲವು ತಿಂಗಳು ಇದ್ದರೂ ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್ ಕುರಿತು ಟ್ರೆಂಡಿಂಗ್ ಆರಂಭ ಮಾಡಿದ್ದಾರೆ. ಐಪಿಎಲ್ ಹರಾಜು ಮುಗಿದ ಬಳಿಕ ಪ್ರತಿಯೊಂದು ತಂಡಗಳು ತಮ್ಮದೇ ಆದ ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿವೆ. ಒಂದೆಡೆ ಮಾಲೀಕರು ಅಳೆದು ತೂಗಿ ತಂಡಗಳನ್ನು ಆಯ್ಕೆ ಮಾಡಿದ್ದರೇ, ಅಭಿಮಾನಿಗಳು ಕೂಡ ತಮ್ಮದೇ ದೃಷ್ಟಿ ಕೋನದಲ್ಲಿ ಲೆಕ್ಕಾಚಾರಗಳನ್ನು ಹಾಕಿಕೊಂಡು ಐಪಿಎಲ್ ಗೆ ಆರಂಭಿಕ ಕಿಚ್ಚು ಹಚ್ಚುತ್ತಿದ್ದಾರೆ.

ಅದರಂತೆ ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೆಕೆಆರ್ ತಂಡವು ಕೂಡ ಬಲಿಷ್ಠ ತಂಡವನ್ನು ಕಟ್ಟಲು ತನ್ನದೇ ಆದ ಲೆಕ್ಕಾಚಾರಗಳನ್ನು ಮಾಡಿಕೊಂಡು ಆಟಗಾರರ ಖರೀದಿ ನಡೆಸಿತ್ತು. ಹೀಗೆ ಖರೀದಿ ಮಾಡಿದ ಆಟಗಾರರಲ್ಲಿ ಹಲವರ ಗಮನ ಸೆಳೆದಿದ್ದು 20 ಲಕ್ಷಕ್ಕೆ ಬಿಕಾರಿಯಾದ ಪ್ರವೀಣ್ ತಾಂಬೆ. 48 ವರ್ಷದ ಆಟಗಾರನಿಗೆ ಯಾವ ತಂಡಗಳು ಆಸಕ್ತಿ ತೋರದೇ ಇದ್ದರೂ ಕೆಕೆಆರ್ ತಂಡ ಒಲವು ತೋರಿ ಇವರನ್ನು ಖರೀದಿ ಮಾಡಿತ್ತು. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಪ್ರವೀಣ್ ತಾಂಬೆ ರವರು ಇನ್ನು ಮುಂದೆ ಐಪಿಎಲ್ ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇವರ ವಿರುದ್ಧ ಬಿಸಿಸಿಐ ಸಂಸ್ಥೆಯು ಕಿಡಿ ಕಾರಿದ್ದು ಐಪಿಎಲ್ ನಿಂದ ಬ್ಯಾನ್ ಮಾಡಲಾಗುವುದು ಎಂಬ ಸುದ್ದಿ ಕೇಳಿಬರುತ್ತಿದೆ. ಯಾಕೆ ಗೊತ್ತಾ? ತಿಳಿಯಲು ಕೆಳಗಡೆ ಓದಿ

ಕಳೆದ ನಾಲ್ಕೈದು ವರ್ಷಗಳಿಂದ ಐಪಿಎಲ್ ಆಡುತ್ತಿರುವ ಪ್ರವೀಣ್ ತಾಂಬೆ ರವರು, ಕಾಪರ್ ಲೆಗ್ ಬ್ರೇಕ್ ಬೌಲಿಂಗ್ ನಲ್ಲಿ ಪ್ರಸಿದ್ದರು. ಆದರೆ ಇದೀಗ ಇವರು ಬಿಸಿಸಿಐ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ವಿದೇಶಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪ್ರವೀಣ್ ರವರು ಐಪಿಎಲ್ ಹರಾಜಿಗೆ ಆಯ್ಕೆಯಾಗಿದ್ದರು. ಆದರೆ ಬಿಸಿಸಿಐ ಸಂಸ್ಥೆಯ ಕಾನೂನಿನ ಅನ್ವಯ ಭಾರತೀಯ ಕ್ರಿಕೆಟ್ ಆಟಗಾರರು ಬೇರೆ ವಿದೇಶಿ ಟೂರ್ನಿಗಳಲ್ಲಿ ಆಡುವ ಹಾಗೇ ಇಲ್ಲ. ಒಂದು ವೇಳೆ ಆಡಬೇಕು ಎಂದರೂ, ಒಂದು ಪ್ರೋಸೆಸ್ ನ ಮೂಲಕ ಅನುಮತಿ ಪಡೆದುಕೊಂಡು ಆಡಬೇಕು. ಆದರೆ ಈ ನಿಯಮಗಳನ್ನು ಪ್ರವೀಣ್ ತಾಂಬೆ ರವರು ಗಾಳಿಗೆ ತೂರಿದ್ದಾರೆ ಎನ್ನಲಾಗಿದೆ. ಆದರಿಂದ ಇವರನ್ನು ಇದೀಗ ಐಪಿಎಲ್ ಟೂರ್ನಿಯಿಂದ ನಿಷೇಧಗೊಳಿಸಲಾಗುವುದು ಎನ್ನುವ ಮಾಹಿತಿ ಕೇಳಿಬಂದಿದೆ.

Post Author: Ravi Yadav