ಉದ್ದವ್ ಠಾಕ್ರೆ ಗೆ ಮರ್ಮಾಘಾತ ! ಬಿಜೆಪಿ ಫುಲ್ ಖುಷ್ ! ಬಿಟ್ಟು ಮೊದಲ ವಿಕೆಟ್ ! ! ನಡೆದದ್ದೇನು ಗೊತ್ತಾ??

ಉದ್ದವ್ ಠಾಕ್ರೆ ಗೆ ಮರ್ಮಾಘಾತ ! ಬಿಜೆಪಿ ಫುಲ್ ಖುಷ್ ! ಬಿಟ್ಟು ಮೊದಲ ವಿಕೆಟ್ ! ! ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಜೆಪಿ ಪಕ್ಷದ ಸಖ್ಯ ತೊರೆದುಕೊಂಡು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಮೈತ್ರಿ ಸರ್ಕಾರ ರಚಿಸಿದ ನಂತರ ಈ ಮಹಾ ವಿಕಾಸ್ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದರು. ಕರ್ನಾಟಕದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಉದಾಹರಣೆ ಕೂಡ ನೀಡಿದ್ದರು.

ಸಿದ್ದಾಂತಕ್ಕೆ ವಿರುದ್ದವಾಗಿ ಕೇವಲ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡ ಯಾವುದೇ ಸರ್ಕಾರವಾಗಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಅಭಿಪ್ರಾಯವು ಎಲ್ಲೆಡೆ ಕೇಳಿ ಬಂದಿತ್ತು. ಯಾಕೆಂದರೆ ಸಿದ್ಧಾಂತಗಳನ್ನು ಪಕ್ಕಕ್ಕೆ ಇಟ್ಟು ಅಧಿಕಾರಕ್ಕೆ ಏರಿದ ಯಾರೊಬ್ಬರು ಅಧಿಕಾರ ಸಿಗದೇ ಹೋದರೆ ಸುಮ್ಮನೆ ಕೂರುವುದಿಲ್ಲ ಎಂಬ ಬಲವಾದ ಅಭಿಪ್ರಾಯಗಳು ಕೇಳಿ ಬಂದಿದ್ದವು. ಇದೀಗ ಈ ಎಲ್ಲಾ ಲೆಕ್ಕಾಚಾರ ಗಳಿಗೆ ತಕ್ಕಂತೆ ಮಹಾ ವಿಕಾಸ್ ಮೈತ್ರಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಂದು ಕೊಂಡಂತೆ ಸಂಪುಟ ವಿಸ್ತರಣೆ ಬಳಿಕ ಮೂರು ಪಕ್ಷಗಳಲ್ಲಿ ಭಿನ್ನಾಭಿಪ್ರಾಯದ ಮಾತುಗಳು ಕೇಳಿಬಂದಿವೆ.

ಈ ಭಿನ್ನಾಭಿಪ್ರಾಯಗಳ ನಡುವೆ ಎನ್ಸಿಪಿ ಪಕ್ಷದ ಪ್ರಮುಖ ಶಾಸಕ ಪ್ರಕಾಶ್ ಸೋಲಂಕೆ  ರವರು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಕಾಶ್ ಸೋಲಂಕೆ  ರವರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ ಪ್ರಕಾಶ್ ಸೋಲಂಕೆ  ರವರು ರವರಿಗೆ ಯಾವುದೇ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಇದರಿಂದ ಅಸಮಾಧಾನ ಗೊಂಡಿರುವ ಪ್ರಕಾಶ್ ಸೋಲಂಕೆ  ರವರು ಇಂದು ಮಧ್ಯಾಹ್ನ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇನ್ನು ಈ ರಾಜೀನಾಮೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಉಬ್ಬೇರಿಸಿದ್ದಾರೆ. ಈ ಮುನ್ನ ಮಾಧ್ಯಮಗಳಿಗೆ ನಾನು ಸಚಿವ ಸ್ಥಾನದ ಬಲವಾದ ಆಕಾಂಕ್ಷಿ ಎಂದು ಹೇಳಿದ್ದನ್ನು ನಾವು ಇಲ್ಲಿ ನೆನೆಯಬಹುದು.