ಬಿಗ್ ಬ್ರೇಕಿಂಗ್: ರಾಜೀನಾಮೆ ಬೆದರಿಕೆ ಹಾಕಿದ ಶ್ರೀ ರಾಮುಲು ಯಾಕೆ ಗೊತ್ತಾ?

ಬಿಗ್ ಬ್ರೇಕಿಂಗ್: ರಾಜೀನಾಮೆ ಬೆದರಿಕೆ ಹಾಕಿದ ಶ್ರೀ ರಾಮುಲು ಯಾಕೆ ಗೊತ್ತಾ?

ಇದೀಗ ಮೈತ್ರಿ ಸರ್ಕಾರವು ಅಧಿಕಾರದ ಆಸೆಗೆ ಉರುಳಿದ ಮೇಲೆ ಅದ್ಯಾಗೋ ಬಿಜೆಪಿ ಪಕ್ಷವು ಉಪ ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಗಳಿಸಿಕೊಂಡು, ಮುಂದಿನ 3.5 ವರ್ಷಗಳ ಕಾಲ ಅಧಿಕಾರ ನಡೆಸುವ ಸುವರ್ಣಾವಕಾಶ ಪಡೆದುಕೊಂಡಿದೆ. ಆದರೆ ಮೈತ್ರಿ ಸರ್ಕಾರದಂತೆಯೇ ಬಿಜೆಪಿ ಪಕ್ಷದಲ್ಲಿ ಇದೀಗ ರಾಜಕೀಯೇತರ ವಿಷಯಗಳಿಂದ ಬಿಜೆಪಿ ಪಕ್ಷದ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಶಿಸ್ತಿನ ಪಕ್ಷ ಎಂದೇ ಹೆಸರು ಪಡೆದುಕೊಂಡಿರುವ ಬಿಜೆಪಿ ಪಕ್ಷದಲ್ಲಿ ಇತರ ಪಕ್ಷಗಳಿಗೆ ಹೋಲಿಸಿದರೇ ಆಂತರಿಕೆ ಕಚ್ಚಾಟ ಕಡಿಮೆ. ಆದರೆ ಇದೀಗ ರಾಜಕೀಯೇತರ ವಿಷಯದಲ್ಲಿ ಬಿಜೆಪಿ ಪಕ್ಷದಲ್ಲಿ ರಾಜೀನಾಮೆ ಪರ್ವ ಆರಂಭವಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಸದಾ ಪಕ್ಷ ನಿಷ್ಠರಾಗಿ ಕೆಲಸ ಮಾಡಿ, ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದೇ ಹೋದರೂ, ಪಕ್ಷದ ಮೇಲೆ ಯಾವುದೇ ಒತ್ತಡ ಏರದೇ ತಮಗೆ ನೀಡಿದ ಆರೋಗ್ಯ ಖಾತೆಯಲ್ಲಿ ಗಮನೀಯ ಕೆಲಸಗಳನ್ನು ಮಾಡುತ್ತಿರುವ ಶ್ರೀ ರಾಮುಲು ರವರು, ಇದೀಗ ರಾಜೀನಾಮೆ ಎಚ್ಚರಿಕೆಯನ್ನು ಬಹಿರಂಗವಾಗಿ ನೀಡಿದ್ದಾರೆ. ಅಷ್ಟಕ್ಕೂ ಶ್ರೀ ರಾಮುಲು ರವರ ಈ ಅಸಮಾಧಾನದ ಈ ನಡೆಗೆ ಕಾರಣವೇನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಇದೀಗ ಬಿಜೆಪಿ ಸರ್ಕಾರಕ್ಕೆ ಸವಾಲಾಗಿರುವುದು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ. ಹೌದು, ವಾಲ್ಮೀಕಿ ಸಮುದಾಯದ ಸ್ವಾಮೀಜಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಹಾಗೂ ಸಮುದಾಯಕ್ಕೆ ಒಂದು ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಬೇಡಿಕೆಯಿಟ್ಟಿದ್ದರು. ಇದರ ಕುರಿತು ಮಾತನಾಡಿರುವ ಶ್ರೀರಾಮುಲು ರವರು, ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೂ ಪರವಾಗಿಲ್ಲ, ನಮ್ಮದೇ ಸಮುದಾಯದ ರಮೇಶ್ ಜಾರಕಿಹೊಳಿ ರವರಿಗೆ ನೀಡಿ, ಇಲ್ಲವಾದಲ್ಲಿ ನಾನು ಸ್ವಾಮೀಜಿ ಹೇಳಿದಂತೆ ರಾಜೀನಾಮೆ ನೀಡಲು ಸಿದ್ದ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಇದೇ ವಿಷಯದ ಕುರಿತು 15 ಶಾಸಕರು ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ.