ಡಿಕೆಶಿಗೆ ಕೊನೆ ಕ್ಷಣದಲ್ಲಿ ಗುದ್ದು ನೀಡಲು ಮುಂದಾದ ಸಿದ್ದು, ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಡಿ ಕೆ ಶಿವಕುಮಾರ್ ರವರು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರುತ್ತಾರೆ ಎಂಬ ಬಲವಾದ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸೋನಿಯಾ ಗಾಂಧಿ ರವರು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿ ಕೆ ಶಿವಕುಮಾರ್ ರವರಿಗೆ ನೀಡುವುದು ಬಹೆತೇಕ ಖಚಿತಪಡಿಸಿದ್ದಾರೆ ಎಂದರೂ ಅಧಿಕೃತ ಆದೇಶ ಮಾತ್ರ ಹೊರಬಿದ್ದಿಲ್ಲ.

ಇದರ ಬೆನ್ನಲ್ಲೇ, ಮೊದಲಿಂದಲೂ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಡುವೆ ಪಕ್ಷದಲ್ಲಿ ಹಿಡಿತ ಸಾಧಿಸುವ ವಿಚಾರದಲ್ಲಿ ಆಂತರಿಕ ಕಿತ್ತಾಟ ಇದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದೇ ಕಾರಣಕ್ಕಾಗಿ ಒಂದು ವೇಳೆ ಡಿ ಕೆ ಶಿವಕುಮಾರ್ ರವರಿಗೆ ಸೋನಿಯಾ ಗಾಂಧಿ ರವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದರೇ ಪಕ್ಷದಲ್ಲಿ ಹಿಡಿತ ಕೈ ತಪ್ಪುತ್ತದೆ ಎನ್ನುವ ಭೀತಿಯಿಂದ ಸಿದ್ದರಾಮಯ್ಯ ನವರು ಮತ್ತೊಮ್ಮೆ ಡಿ ಕೆ ಶಿವಕುಮಾರ್ ರವರ ಕನಸಿಗೆ ಅಡ್ಡಗಾಲಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಇದೀಗ ಹೊಸ ರಾಜಕೀಯ ದಾಳ ಉರುಳಿಸಿರುವ ಸಿದ್ದರಾಮಯ್ಯ ರವರು ರಾಜ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವ ಲಿಂಗಾಯತರ ಮತಗಳ ಮೇಲೆ ಕಣ್ಣು ಹಿಡಬೇಕು, ಬಿ ಸ್ ಯಡಿಯೂರಪ್ಪ ನವರ ನಂತರ ಲಿಂಗಾಯತ ಮತಗಳ ಮೇಲೆ ನಮಗೆ ಹಿಡಿತ ಸಿಗಬೇಕು ಎಂದರೇ ಎಂಬಿ ಪಾಟೀಲ್ ರವರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ನಾನದ ರೇಸ್ ಗೆ ಸೇರಿಸಿದ್ದಾರೆ. ಹೈ ಕಮಾಂಡ್ ಮುಂದೆ ಲಿಂಗಾಯತರ ಮತಗಳನ್ನು ಕಾಂಗ್ರೆಸ್ ಪಡೆಯುವುದು ಅನಿವಾರ್ಯ, ಅದೇ ಕಾರಣಕ್ಕಾಗಿ ಇವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಡ ಹೇರಿ ಪರೋಕ್ಷವಾಗಿ ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಸಿದ್ದರಾಮಯ್ಯ ರವರ ಪ್ಲಾನ್ ಎಂಬ ಮಾಹಿತಿ ಸಿಕ್ಕಿದೆ.

Post Author: Ravi Yadav