ಬಿಗ್ ಬ್ರೇಕಿಂಗ್: ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಬಿಗ್ ಶಾಕ್ ! ನಳಿನ್ ಮಾಡಲು ಹೊರಟಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ರಾಜ್ಯದಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಸದ್ದು ಮಾಡತೊಡಗಿದೆ. ರಾಜಕೀಯ ನಾಯಕರು ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೇರಳ ರಾಜ್ಯವು ಕೂಡ ಇದರಲ್ಲಿ ಭಾಗಿಯಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ.

ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಕೇರಳ ಸರ್ಕಾರ ಕೂಡ ಗೋಲಿಬಾರ್ ಘಟನೆಗೆ ಪರಿಹಾರ ಘೋಷಿಸಿದೆ. ಲಕ್ಷಾಂತರ ರೂ ಪರಿಹಾರ ಘೋಷಿಸುವ ಮೂಲಕ ಕೇರಳ ಸದ್ದು ಮಾಡಿತ್ತು. ಒಂದೆಡೇ ರಾಜ್ಯ ಸರ್ಕಾರದ ಮೇಲೆ ಹಾಗೂ ಪೊಲೀಸ್ ಇಲಾಖೆಯ ಮೇಲೆ ವಿಪಕ್ಷಗಳ ನಾಯಕರು ಮುಗಿಬಿದ್ದು, ರಾಜ್ಯ ಸರ್ಕಾರ ಕುಮ್ಮಕ್ಕು ನೀಡಿದೆ ಎಂದು ಆರೋಪ ಮಾಡಿದ್ದರೇ, ಬಿಜೆಪಿ ಪಕ್ಷ ಕಾಂಗ್ರೆಸ್ ಹಾಗೂ ಕೆಲವು ನಾಯಕರ ಹೇಳಿಕೆಯಿಂದ ಹೀಗೆ ನಡೆಯುತು ಎಂದು ಆರೋಪ ಮಾಡಿದೆ. ಇದರ ಬೆನ್ನಲ್ಲೇ ಈಗಾಗಲೇ ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಈ ಘಟನೆಯಲ್ಲಿ ಭಾಗಿಯಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು.

ಇದರ ಕುರಿತು ಇದೀಗ ಮಾತನಾಡಿರುವ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ರವರು, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಪೌರತ್ವ ತಿದ್ದು ಪಡಿ ಮಸೂದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗೆ ನೇರ ಕಾರಣ. ಆದ ಕಾರಣದಿಂದ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ಚಿಂತನೆ ಮಾಡಲಾಗಿದೆ, ಹಲವಾರು ವರ್ಷಗಳಿಂದಲೂ ನಿಷೇದಕ್ಕೆ ಒತ್ತಾಯ ಕೇಳಿಬಂದಿದೆ, ಆದ ಕಾರಣ ಮುಖ್ಯಮಂತ್ರಿ ಬಿ ಸ್ ಯಡಿಯೂರಪ್ಪನವರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಾರಿ ತಲ್ಲಣ ಸೃಸ್ಟಿಸಿದ್ದು, ಪರ ವಿರೋಧದ ಹೇಳಿಕೆಗಳು ಕೇಳಿಬಂದಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav