ದೀದಿ ಪ್ರತಿಭಟನೆಗೆ ಪ್ರೇರೇಪಿಸುತ್ತಿದ್ದರೆ ಮತ್ತೊಂದೆಡೆ ಅದೇ ಪಕ್ಷದ ಸಂಸದೆ ಮಾಡಿದ್ದೇನು ಗೊತ್ತಾ? ಮತ್ತೊಮ್ಮೆ ಮನಗೆದ್ದ ನುಸ್ರತ್ !

ನಮಸ್ಕಾರ ನಮಸ್ಕಾರ ಸ್ನೇಹಿತರೇ, ಇದೀಗ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಹಲವಾರು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ವಿಪರ್ಯಾಸವೆಂದರೇ ಪ್ರತಿಭಟನೆಗಳನ್ನು ಶಾಂತಿಯುತವಾಗಿ ನಡೆಸಿ ಎಂದು ಮನವಿ ಮಾಡಬೇಕಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವರೇ ಅಶಾಂತಿ ಸ್ಥಾಪಿಸುವ ಪ್ರೇರಣೆಯನ್ನು ಎಲ್ಲರಿಗೂ ನೀಡುತ್ತಿದ್ದಾರೆ. ಆದರೆ ಅದೇ ಪಕ್ಷದ ಸಂಸದೆ ನುಸ್ರತ್ ಜಹಾನ್ ತಮ್ಮ ನಡೆಯಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಸದೆಯಾದ ಕ್ಷಣದಿಂದಲೂ ಭಾರಿ ಸದ್ದು ಮಾಡುತ್ತಿರುವ ನುಸ್ರತ್ ಜಹಾನ್ ರವರು ಮೊದಲಿನಿಂದಲೂ ಮಮತಾ ಬ್ಯಾನರ್ಜಿ ಅವರ ನಡೆಗಳಿಗೆ ಅಷ್ಟಾಗಿ ಬೆಂಬಲ ಸೂಚಿಸದೆ ಟಿಎಂಸಿ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಾರಿಯೂ ಕೂಡ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಪ್ರತಿಭಟನೆಗೆ ಹಾಜರಾಗಬೇಕು ಎಂದು ಮಮತಾ ಬ್ಯಾನರ್ಜಿ ಅವರು ಕರೆ ನೀಡಿದ ಬೆನ್ನಲ್ಲೆ ಕಡ್ಡಾಯವಾಗಿ ಹಾಜರಾಗಬೇಕಿದ್ದ ಕಾರಣ ಪ್ರತಿಭಟನೆಗೆ ತೆರಳಿ ಮಮತಾ ಬ್ಯಾನರ್ಜಿ ರವರನ್ನು ಮುಖ ತೋರಿಸಿ ವಾಪಸಾಗಿದ್ದರು. ಹಲವಾರು ಜನರು ಇವರ ವಿರುದ್ಧ ಇದೇ ಕಾರಣಕ್ಕಾಗಿ ಕಿಡಿಕಾರಿದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನುಸ್ರತ್ ಜಹಾನ್ ರವರು ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಮತ್ತೊಮ್ಮೆ ಜನರ ಮನ ಗೆದ್ದಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ??

ಇದೀಗ ನುಸ್ರತ್ ಜಹಾನ್ ರವರು ಬಂಗಾಳದ ಬೀದಿ ಬೀದಿಗಳಲ್ಲಿ ತಿರುಗಿ ನಿರಾಶ್ರಿತರಾಗಿ ಬದುಕುತ್ತಿರುವ ಸಾವಿರಾರು ಜನರಿಗೆ ಕಂಬಳಿ, ಚಾಪೆ ಸೇರಿದಂತೆ ಚಳಿಗಾಲಕ್ಕೆ ಅಗತ್ಯವಾದ ಉಡುಪುಗಳನ್ನು ವಿತರಣೆ ಮಾಡುತ್ತಿದ್ದಾರೆ. ತಮ್ಮ ಪತಿಯ ಜೊತೆಗೆ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿರುವ ಸಂಸದೆ ನೂರಾರು ಜನರಿಗೆ ಸಹಾಯವಾಗುವಂತಹ ಕೆಲಸ ಮಾಡುತ್ತಿದ್ದಾರೆ. ಇದೇ ಸುದ್ದಿಯನ್ನು ಬರೆದುಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನುಸ್ರತ್ ಜಹಾನ್ ರವರು ಪ್ರತಿ ಹಬ್ಬವು ತನ್ನೊಂದಿಗೆ ಸಂತೋಷವನ್ನು ತರುತ್ತದೆ. ನಿಮ್ಮ ಪ್ರೀತಿಯೊಂದಿಗೆ ಎಲ್ಲರನ್ನೂ ಕಟ್ಟಿಹಾಕಿ. ದೀನ ದಲಿತರಿಂದ ಹಿಡಿದು ಲೈಂಗಿಕ ಕಾರ್ಯಕರ್ತೆಯರವರೆಗೆ ಎಲ್ಲರೂ ಸಂತೋಷಕ್ಕೆ ಅರ್ಹರು. ದಯೆ ಉಚಿತ, ಆದ್ದರಿಂದ ಅದನ್ನು ಎಲ್ಲೆಡೆ ಹರಡಿ. ಎಂದು ಬರೆದುಕೊಂಡಿದ್ದಾರೆ.

Post Author: Ravi Yadav