ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆ ! ಉದ್ಧಟತನ ಮೆರೆದ ದೀದಿಗೆ ಬ್ರೇಕ್ ! ನಡೆದದ್ದೇನು ಗೊತ್ತಾ??

ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆ ! ಉದ್ಧಟತನ ಮೆರೆದ ದೀದಿಗೆ ಬ್ರೇಕ್ ! ನಡೆದದ್ದೇನು ಗೊತ್ತಾ??

ಸಾಮಾನ್ಯವಾಗಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಶಾಂತಿ ಕಾಪಾಡಲು ಪ್ರಯತ್ನ ಪಡುತ್ತಾರೆ. ಒಂದು ವೇಳೆ ರಾಜ್ಯ ಸರ್ಕಾರಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ಯಾವುದಾದರೂ ನಿರ್ಣಯ ಕೈಗೊಂಡರೆ ಮಾತುಕತೆ ಹಾಗೂ ನ್ಯಾಯಾಂಗದ ಮೂಲಕ ಬಗೆ ಹರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ರಾಜ್ಯದ ಜನರಿಗೆ ತೊಂದರೆಯಾಗುತ್ತದೆ ಎಂದು ರಾಜ್ಯದ ಜನರೇ ಪ್ರತಿಭಟನೆ ಮಾಡಲು ಮುಂದಾದರೇ ಪ್ರತಿಭಟನೆ ತಡೆಯುವ ಅಥವಾ ಶಾಂತಿಯುತ ಪ್ರತಿಭಟನೆ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಾರೆ. ಆದರೆ ಸರ್ವಾಧಿಕಾರಿ ಎಂದೇ ಬಿಂಬಿತವಾಗಿರುವ ಮಮತಾ ಬ್ಯಾನರ್ಜಿ ರವರು ತಮ್ಮ ಮತ ಬ್ಯಾಂಕ್ ಗೆ ಕೇಂದ್ರ ಸರ್ಕಾರದ ಕಾನೂನಿನಿಂದ ತೊಂದರೆಯಾಗುತ್ತದೆ ಎಂದು ತಿಳಿದ ತಕ್ಷಣ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕೇವಲ ಜೈ ಶ್ರೀರಾಮ್ ಎಂದು ಹೇಳಿದ ಕಾರಣಕ್ಕೆ ಹಲವಾರು ಜನರನ್ನು ಬಂಧಿಸಿ ರಾಜ್ಯದಲ್ಲಿ ಶಾಂತಿ ನೆಲೆಸಲು ಈ ರೀತಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ ರವರು, ರಾಜ್ಯದಲ್ಲಿ ನೂರಾರು ಅವಘಡಗಳು ಸಂಭವಿಸಿ, ಹಲವಾರು ರೈಲುಗಳಿಗೆ ಬೆಂಕಿ ಇಟ್ಟು, ಅಶಾಂತಿ ಸ್ಥಾಪಿಸಿದರು ಕೂಡ ಯಾರನ್ನು ಬಂಧಿಸಿರಲಿಲ್ಲ, ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಪ್ರಚೋದನೆ ನೀಡಿ ಬಹಿರಂಗವಾಗಿ ಟಿವಿ ಜಾಹಿರಾತು ಗಳಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಪ್ರಚೋದನೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ, ಎರಡು ಕಾಯ್ದೆಗಳ ವಿರುದ್ಧ ಸಾವಿರಾರು ಪೋಸ್ಟರ್ ಗಳಲ್ಲೂ ಹಾಕಿ ಉದ್ದಟತನ ಮೆರೆದಿದ್ದ ದೀದಿಗೆ ಇದೀಗ ಹೈ ಕೋರ್ಟ್ ಶಾಕ್ ನೀಡಿದೆ.ಕುದ್ದು ರಾಜ್ಯಪಾಲರೇ ಹೇಳಿದರೂ ಜಾಹಿರಾತುಗಳನ್ನು ವಾಪಸ್ಸು ತೆಗೆಕೊಂಡಿರಲಿಲ್ಲ, ಆದರೆ ಇದೀಗ ವಕೀಲರ ತಂಡದ ಮನವಿಗೆ ಸ್ಪಂದಿಸಿ ತೀರ್ಪು ನೀಡಿರುವ ಹೈ ಕೋರ್ಟ್ ಈ ಕೂಡಲೇ ಎಲ್ಲ ವೆಬ್ಸೈಟ್, ಪೋಸ್ಟರ್, ಟಿವಿ ಜಾಹಿರಾತುಗಳನ್ನು ಮುಂದಿನ ವಿಚಾರಣೆ ನಡೆಯುವ ವರೆಗೂ ತಡೆ ಹಿಡಿಯುವಂತೆ ಆದೇಶ ಹೊರಡಿಸಿದೆ. ಕೇವಲ ಪ್ರಚೋದನಕಾರಿ ಜಾಹಿರಾತುಗಳಲ್ಲದೇ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಮಸೂದೆ ಹಾಗೂ NRC ಕಾಯ್ದೆಗಳನ್ನು ಜಾರಿ ಮಾಡುವುದಿಲ್ಲ ಎಂಬ ಜಾಹಿರಾತುಗಳು ಕೂಡ ಪ್ರಸಾರ ವಾಗುತ್ತಿದ್ದವು.