CAA ವಿರುದ್ಧ ಬಾಲ ಬಿಚ್ಚಿದ ಸಿದ್ದಾರ್ಥ್ ಗೆ ಶಾಕ್ ನೀಡಿದ ತಮಿಳುನಾಡು ಸರ್ಕಾರ ! ಮಾಡಿದ್ದೇನು ಗೊತ್ತಾ?

CAA ವಿರುದ್ಧ ಬಾಲ ಬಿಚ್ಚಿದ ಸಿದ್ದಾರ್ಥ್ ಗೆ ಶಾಕ್ ನೀಡಿದ ತಮಿಳುನಾಡು ಸರ್ಕಾರ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸದಾ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡುವ ದಕ್ಷಿಣ ಭಾರತದ ನಟ ಸಿದ್ದಾರ್ಥ್ ರವರು ಇತ್ತೀಚಿಗೆ ಎರಡನೇ ಬಾರಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಿದ ಮೇಲೆ ತಣ್ಣಗಾಗಿದ್ದರು. ಆದರೆ ಮೋದಿ ನೇತೃತ್ವದ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ತಕ್ಷಣ ಮತ್ತೊಮ್ಮೆ ಮುನ್ನೆಲೆಗೆ ಬಂದು ಸರ್ಕಾರದ ವಿರುದ್ಧ ಟೀಕೆಗಳನ್ನು ಆರಂಭಿಸಿದರು.

ಈ ಬಾರಿ ಸಿದ್ದಾರ್ಥ ರವರ ಆಕ್ರೋಶವು ಕಳೆದ ಘಟನೆ ಗಳಿಗಿಂತ ಕೊಂಚ ಹೆಚ್ಚಾಗಿದಂತೆ ಕಾಣುತ್ತಿತ್ತು. ಮೊದಲಿಗೆ ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕಿದ ಸಿದ್ದಾರ್ಥ್ ರವರಿಗೆ ಬಹುತೇಕ ಜನರು ಕ್ಲಾಸ್ ತೆಗೆದುಕೊಂಡರು. ಯಾಕೆಂದರೆ ಕೆಲವು ವಿಷಯಗಳನ್ನು ಸಂಪೂರ್ಣ ಮಾಹಿತಿ ಇಲ್ಲದೆ ಮನಬಂದಂತೆ ಪೋಸ್ಟ್ ಮಾಡಿದ ಕಾರಣ ಸಿದ್ಧಾರ್ಥ ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಟೀಕೆ ಮಾಡಲಾಗಿತ್ತು. ಇದರಿಂದ ಮತ್ತಷ್ಟು ಕುಪಿತಗೊಂಡ ಸಿದ್ದಾರ್ಥ್ ರವರು ಚೆನ್ನೈನಲ್ಲಿ ಬೀದಿಗಿಳಿದು ಪ್ರತಿಭಟನೆ ಯನ್ನು ಆರಂಭಿಸಿದರು. ಅದೇ ಕಾರಣಕ್ಕಾಗಿ ಇದೀಗ ತಮಿಳುನಾಡು ಸರ್ಕಾರ ಸಿದ್ದಾರ್ಥ್ ರವರಿಗೆ ಸರಿಯಾದ ಬುದ್ಧಿ ಕಲಿಸಲು ಮುಂದಾಗಿದೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಇಷ್ಟು ದಿವಸ ಸಾಮಾಜಿಕ ಜಾಲ ತಾಣಕ್ಕೆ ಸೀಮಿತವಾಗಿದ್ದ ಸಿದ್ಧಾರ್ಥ ಆಕ್ರೋಶವು ಈ ಬಾರಿ ಚೆನ್ನೈ ನ ಬೀದಿಗೆ ತಲುಪಿತ್ತು. ಪ್ರತಿಭಟನೆಗೆ ಕರೆ ನೀಡಿದ ಸಿದ್ಧಾರ್ಥ ರವರು ಮತ್ತಷ್ಟು ಸೆಲೆಬ್ರಿಟಿ ಹಾಗೂ ಸಿನಿಮಾದವರ ಬೆಂಬಲ ಪಡೆದುಕೊಂಡು ಸಾವಿರಾರು ಜನರು ಸೇರುವಂತೆ ಅಭಿಮಾನಿಗಳನ್ನು ಪ್ರೇರೇಪಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ತಮಿಳುನಾಡು ಸರ್ಕಾರ ಮೊದಲೇ ಹೇಳಿದಂತೆ ಯಾವುದೇ ಪ್ರತಿಭಟನೆಗೆ ಚೆನ್ನೈನಲ್ಲಿ ಅವಕಾಶವಿರಲಿಲ್ಲ. ಇದೇ ಕಾರಣಕ್ಕಾಗಿ ಇದೀಗ ಚೆನ್ನೈ ಪೊಲೀಸರು ಸಿದ್ದಾರ್ಥ್ ರವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಗಲಭೆ ಸೂಚಿಸಿದ ಕಾರಣ ಹಾಗೂ ಜನರನ್ನು ದೇಶದ ವಿರುದ್ಧ ಪ್ರಚೋದನೆ ಮಾಡಿದ್ದಕ್ಕಾಗಿ ಎರಡು-ಮೂರು ಸೆಕ್ಷನ್ ಗಳಲ್ಲಿ ಸಿದ್ಧಾರ್ಥ ರವರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು ಜಾಮೀನು ರಹಿತ ವಾರೆಂಟ್ ಪಡೆದುಕೊಳ್ಳಲು ಪೊಲೀಸರು ತಯಾರಿ ನಡೆಸಿ ನಡೆಸಿ ನ್ಯಾಯಾಲಯದ ಕಾದ ತಟ್ಟಲಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಸಿದ್ಧಾರ್ಥ ರವರು ಕಂಬಿ ಎಣಿಸಬೇಕಾಗುತ್ತದೆ.