ಮೈತ್ರಿಯಲ್ಲಿ ಭುಗಿಲೆದ್ದ ಭಿನ್ನಮತ ! ಮೊದಲ ಬಾರಿಗೆ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ ಶಿವಸೇನೆ ! ಮಾಡಿದ್ದೇನು ಗೊತ್ತಾ??

ಮೈತ್ರಿಯಲ್ಲಿ ಭುಗಿಲೆದ್ದ ಭಿನ್ನಮತ ! ಮೊದಲ ಬಾರಿಗೆ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ ಶಿವಸೇನೆ ! ಮಾಡಿದ್ದೇನು ಗೊತ್ತಾ??

ಇದೀಗ ಇಡೀ ದೇಶದ ಶೇಕಡ 90ಕ್ಕೂ ಹೆಚ್ಚು ರಾಜಕೀಯ ವಿಶ್ಲೇಷಕರ ಮಾತು ಸತ್ಯ ವಾಗುವುದು ಖಚಿತ ಎನಿಸುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ಮೈತ್ರಿ ತೊರೆದುಕೊಂಡ ನಂತರ ಶಿವಸೇನಾ ಪಕ್ಷವು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ನಡುವೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿತ್ತು.

ತನ್ನ ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಿಟ್ಟು ಶಿವಸೇನಾ ಪಕ್ಷವು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಸಲಿಗೆ ಶಿವಸೇನಾ ಪಕ್ಷವು ಸ್ಥಾಪಿತವಾದ ಕಾರಣವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ವಿರುದ್ಧ. ಆದರೆ ಉದ್ಧವ್ ಠಾಕ್ರೆಯವರು ಮುಖ್ಯಮಂತ್ರಿ ಸ್ಥಾನದ ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಈ ಮೈತ್ರಿ ನಡೆದ ಕ್ಷಣವೇ ದೇಶದ ಬಹುತೇಕ ರಾಜಕೀಯ ಪಂಡಿತರು ಮೈತ್ರಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಮಾತು ಹೇಳಿದ್ದರು, ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಶಿವಸೇನಾ ಪಕ್ಷವು ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಪಕ್ಷ ನೀಡಿದ ಸೂಚನೆಗಳಂತೆ ನಡೆದುಕೊಂಡು ಬಂದು ಕಾಂಗ್ರೆಸ್ ಪಕ್ಷದ ಮುಂದೆ ತಲೆಬಾಗಿದ್ದನ್ನು ಕಂಡ ಜನ ಶಿವಸೇನ ಪಕ್ಷವು ತನ್ನ ಸಿದ್ಧಾಂತಗಳನ್ನು ಬದಿಗಿಟ್ಟು ಸರ್ಕಾರ ಉಳಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ವೀರ ಸಾವರ್ಕರ್, ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಹಲವಾರು ಯೋಜನೆಗಳ ರದ್ಧತಿಯ ನಂತರ ಶಿವಸೇನ ಪಕ್ಷದ ಮೇಲೆ ಟೀಕೆಗಳ ಬಾಣಗಳು ಸುರಿದಿದ್ದವು. ಇದೀಗ ಶಿವಸೇನಾ ಪಕ್ಷವು ಕಾಂಗ್ರೆಸ್ ಪಕ್ಷದ ವಿರುದ್ಧ ತೊಡೆತಟ್ಟಿದೆ, ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಪ್ರತಿಭಟನೆಗೆ ಶಿವಸೇನ ಪಕ್ಷವು ತನ್ನ ಬೆಂಬಲ ನೀಡುವುದಿಲ್ಲ ಎಂದು ಹಿಂದೆ ಸರಿದಿದೆ. ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ರಾಷ್ಟ್ರಪತಿ ರವರನ್ನು ಭೇಟಿ ಮಾಡಿ ದೇಶದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಾಪಸು ಪಡೆಯಬೇಕು ಎಂದು ಒತ್ತಾಯ ಮಾಡಲು ಮುಂದಾಗಿದ್ದ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ, ಆದರೆ ಈ ಸಭೆಗೆ ಶಿವಸೇನ ಪಕ್ಷದ ಯಾವುದೇ ನಾಯಕರು ಹಾಗೂ ಪಕ್ಷದ ಬೆಂಬಲವಿಲ್ಲ ಎಂದು ಸಂಜಯ್ ರಾವತ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಇದೇ ಮೊಟ್ಟಮೊದಲ ಬಾರಿಗೆ ಮೈತ್ರಿಯಲ್ಲಿ ಬಿರುಕು ಮೂಡಿದ್ದು ಮೈತ್ರಿ ಸರ್ಕಾರಕ್ಕೆ ದಿನಗಣನೆ ಆರಂಭವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.