ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ! ಮಾಧ್ಯಮಗಳಿಗೆ,ಗಂಜಿ ಗಿರಾಕಿಗಳಿಗೆ ಹೊರಬಿತ್ತು ಕಠಿಣ ಸಂದೇಶ ! ಅಂತರ್ರಾಷ್ಟ್ರೀಯ ಮಾಧ್ಯಮಗಳಿಗೂ ಸೇರಿ ಆದೇಶ ಹೊರಡಿಸಿದ್ದು ಏನು ಗೊತ್ತಾ??

ಇದೀಗ ದೇಶದ ಹಲವಾರು ಕಡೆ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೇ ಕೆಲವು ಮಾಧ್ಯಮಗಳಲ್ಲಿ ಈ ಪ್ರತಿಭಟನೆಗಳು ಕೇವಲ ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಕಾರಣಗಳೆಂದರೇ ಹಲವಾರು ಪ್ರತಿಭಟನಾಕಾರರನ್ನು ಕೆಲವು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದೇ ಪ್ರತಿಭಟನಾಕಾರರಿಗೆ ತಿಳಿದಿಲ್ಲ ಎಂಬ ಅಂಶ ಬಯಲಾಗಿದೆ. ಇನ್ನು ಕೆಲವರು ಪೌರತ್ವ ತಿದ್ದುಪಡಿ ಮಸೂದೆ ಕುರಿತು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಅವರನ್ನು ಪ್ರಶ್ನೆ ಮಾಡಿದಾಗ ಅವರ ಬಳಿ ಕೆಲವೊಂದು ಗೊಂದಲದ ಉತ್ತರಗಳು ಹಾಗೂ ಮಸೂದೆಯಲ್ಲಿ ಇಲ್ಲದ ಕೆಲವೊಂದು ಅಂಶಗಳು ಇವೆ ಎಂದು ಕೊಂಡು ಉತ್ತರ ನೀಡುತ್ತಿದ್ದಾರೆ. ಇದನ್ನೇ ಬಂಡವಾಳವ ನ್ನಾಗಿಸಿಕೊಂಡು ರಾಜಕೀಯ ನಾಯಕರು ಪ್ರತಿಭಟನಾಕಾರರನ್ನು ಉತ್ತೇಜಿಸುವಂತಹ ಹೇಳಿಕೆಗಳನ್ನು ನೀಡಿ ಪ್ರತಿಭಟನೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬುದು ಪೌರತ್ವ ತಿದ್ದುಪಡಿ ಮಸೂದೆಯ ಬೆಂಬಲಕ್ಕೆ ನಿಂತಿರುವವರ ವಾದವಾಗಿದೆ.

ಇದೀಗ ಈ ಕುರಿತು ಕಠಿಣ ಹೊರಡಿಸಿರುವ ಕೇಂದ್ರ ಸರ್ಕಾರವು, ಎಲ್ಲ ಮಾಧ್ಯಮಗಳಿಗೂ ಹಾಗೂ ಪೌರತ್ವ ತಿದ್ದುಪಡಿ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವ ಸೆಲೆಬ್ರಿಟಿಗಳಿಗೆ ಕಠಿಣ ಸಂದೇಶ ರವಾನೆ ಮಾಡಿದೆ. ಎಲ್ಲ ಮಾಧ್ಯಮಗಳಿಗೆ ಕೂಡಲೇ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಸಂಪೂರ್ಣ ವಿವರಗಳನ್ನು ಜನರ ಮುಂದೆ ಇಡಬೇಕು, ಅದನ್ನು ಬಿಟ್ಟು ಮಸೂದೆಯ ಕುರಿತು ಮಾಹಿತಿ ನೀಡದೆ ಕೇವಲ ಪ್ರತಿಭಟನೆಗಳ ಕುರಿತು ಮಾಹಿತಿ ನೀಡಿ ಜನರ ಶಾಂತಿ ಕೆದಕುವ ಕೆಲಸ ಮಾಡಬಾರದು. ಹಾಗೂ ಸೆಲೆಬ್ರಿಟಿಗಳು ತಪ್ಪು ಮಾಹಿತಿ ನೀಡಿ ಪರೋಕ್ಷವಾಗಿ ಪ್ರತಿಭಟನಾಕಾರರನ್ನು ಉತ್ತೇಜಿಸುವ ಕೆಲಸಕ್ಕೆ ಕೈಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಇನ್ನು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿರುವ ಗೃಹ ಸಚಿವಾಲಯವು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೇರೆ ರೀತಿಯಲ್ಲಿ ಬಿಂಬಿಸಿ ಇಡೀ ದೇಶದ ಶಾಂತಿಯ ವ್ಯವಸ್ಥೆ ಹಾಳಾಗಿದೆ ಎಂದು ಸುದ್ದಿ ಪ್ರಸಾರ ಮಾಡಿದರೇ ಅಂತರಾಷ್ಟ್ರೀಯ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲು ಕಠಿಣ ಕ್ರಮಕ್ಕೆ ಕಾನೂನು ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Post Author: Ravi Yadav