ಐತಿಹಾಸಿಕ ನಿರ್ಧಾರದ ಮೂಲಕ ಕರ್ನಾಟಕ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾದ ಬಿಎಸ್ ವೈ ! ಮಾಡುತ್ತಿರುವುದಾದರೂ ಏನು ಗೊತ್ತಾ??

ಐತಿಹಾಸಿಕ ನಿರ್ಧಾರದ ಮೂಲಕ ಕರ್ನಾಟಕ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾದ ಬಿಎಸ್ ವೈ ! ಮಾಡುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ಸಚಿವ ಸುರೇಶ್ ಕುಮಾರ್ ರವರು ಮಹತ್ವದ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಆದರೆ ಈ ನಿರ್ಧಾರಕ್ಕೆ ಕಾನೂನಿನ ಬಲ ವಿಲ್ಲದ ಕಾರಣ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನವರು ಹೊಸ ಮಸೂದೆಯನ್ನು ಮಂಡಿಸಿ ಎರಡು ಸದನಗಳಲ್ಲಿ ಒಪ್ಪಿಗೆ ಪಡೆಯಲು ಮುಂದಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ರವರು ಸ್ಥಳೀಯರ ಉದ್ಯೋಗದ ಕುರಿತು ಇಡೀ ದೇಶವೇ ಸದ್ದು ಮಾಡುವಂತೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದೀಗ ಇವರಂತೆಯೇ ಬಿ ಎಸ್ ಯಡಿಯೂರಪ್ಪನವರು ಸಂಪೂರ್ಣ ಬಹುಮತವನ್ನು ಗಳಿಸಿದ ಬಳಿಕ ನಡೆಯಲಿರುವ ಮೊದಲ ಕಲಾಪದಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ಸಂಘಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೇ ಹೋದರೆ ಸಂಘ-ಸಂಸ್ಥೆಗಳನ್ನು ಶಿಕ್ಷಿಸುವುದು ಹಾಗೂ ಸರ್ಕಾರದಿಂದ ನೀಡಲಾಗುತ್ತಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಸಂಘ-ಸಂಸ್ಥೆಗಳಿಂದ ಹಿಂತೆಗೆದುಕೊಳ್ಳಲು ಹಾಗೂ ಶೇಕಡಾವಾರು ಲೆಕ್ಕದಲ್ಲಿ ಉದ್ಯೋಗ ಮೀಸಲಿಡಲು ಬೇಕಾಗಿರುವ ಮಸೂದೆಯನ್ನು ಮಂಡಿಸಿದ್ದಾರೆ.

ಈ ಮಸೂದೆಯ ಅಡಿಯಲ್ಲಿ ಖಾಸಗಿ ವಲಯದಲ್ಲಿ ಸಿ ಹಾಗೂ ಡಿ ದರ್ಜೆಗೆ ಹುದ್ದೆಗಳಲ್ಲಿ ಶೇಕಡ 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲು ಇಡಬೇಕಾಗುತ್ತದೆ. ಹಲವಾರು ಮುಖ್ಯಮಂತ್ರಿಗಳು ಈ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಏರಿದರೂ ಕೂಡ ಮುಖ್ಯಮಂತ್ರಿಗಳ ಭರವಸೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ತಮ್ಮ ಪ್ರಣಾಳಿಕೆಯಲ್ಲಿ ಇಲ್ಲದೆ ಇದ್ದರೂ ಬಿ ಎಸ್ ಯಡಿಯೂರಪ್ಪ ನವರು ಕನ್ನಡಿಗರ ಪರವಾಗಿ ಈ ರೀತಿಯ ನಿರ್ಧಾರ ಕೈಗೊಳ್ಳುತ್ತಿರುವುದು ಬಹಳ ಶ್ಲಾಘನೀಯ ವಿಚಾರ. ಮುಂದಿನ ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಮೂಲಕ ಜಾರಿಗೆ ತರಲು ಬಿಎಸ್ ಯಡಿಯೂರಪ್ಪ ನವರು ಸಿದ್ಧರಾಗಿದ್ದಾರೆ.