ರಾಹುಲ್ ಗಾಂಧಿ ರವರ ಹೇಳಿಕೆಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದು ನೋಡಿ ಶಿವಸೇನಾ ಕಾರ್ಯಕರ್ತರು ಕ್ಷಮೆ ಕೋರಿದ್ದು ಯಾಕೆ ಗೊತ್ತಾ??

ರಾಹುಲ್ ಗಾಂಧಿ ರವರ ಹೇಳಿಕೆಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದು ನೋಡಿ ಶಿವಸೇನಾ ಕಾರ್ಯಕರ್ತರು ಕ್ಷಮೆ ಕೋರಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ ವೀರ ಸಾವರ್ಕರ್ ಅವರ ಕುರಿತು ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮೈತ್ರಿ ಪಕ್ಷವಾಗಿರುವ ಶಿವಸೇನಾ ಪಕ್ಷವು ಪ್ರತಿ ಬಾರಿಯೂ ವೀರ ಸಾವರ್ಕರ್ ಅವರ ಪರ ಧ್ವನಿ ಎತ್ತುತ್ತಿತ್ತು.

ಕಳೆದ ಕೆಲವು ದಿನಗಳ ಹಿಂದೆ ವೀರ ಸಾವರ್ಕರ್ ಅವರ ಕುರಿತು ಯಾರಾದರೂ ಮಾತನಾಡಿದರೆ ಸಾರ್ವಜನಿಕವಾಗಿ ಥಳಿಸುತ್ತೇನೆ ಎಂದು ಉದ್ಧವ್ ಠಾಕ್ರೆ ರವರು ಬಹಿರಂಗ ಹೇಳಿಕೆ ಕೂಡ ನೀಡಿದ್ದರು. ಇದೀಗ ಇದೇ ಸುದ್ದಿಯನ್ನು ಕೆಣಕಿ ವೀರ ಸಾವರ್ಕರ್ ಅವರ ಮೊಮ್ಮಗ ರಂಜಿತ್ ರವರು ಕೂಡ ರಾಹುಲ್ ಗಾಂಧಿರವರು ಇದೀಗ ವೀರ ಸಾವರ್ಕರ್ ಅವರನ್ನು ಅವಮಾನ ಮಾಡಿದ್ದಾರೆ ತಾಕತ್ತಿದ್ದರೆ ಸಾರ್ವಜನಿಕವಾಗಿ ಥಳಿಸಿ ಎಂದು ಸವಾಲೆಸೆದಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಶಿವಸೇನಾ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇದೇ ಮೊಟ್ಟ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇವರ ಪ್ರತಿಕ್ರಿಯೆಯನ್ನು ನೋಡಿದ ಶಿವಸೇನಾ ಪಕ್ಷದ ಕಾರ್ಯಕರ್ತರು ಎಲ್ಲರಲ್ಲೂ ಹಾಗೂ ವೀರ ಸಾರ್ವರ್ಕರ್ ಅವರಲ್ಲಿ ಕ್ಷಮೆ ಯಾಚನೆ ಮಾಡಿದ್ದಾರೆ. ಯಾಕೆ ಗೊತ್ತಾ ತಿಳಿಯಲು ಕೆಳಗಡೆ ಓದಿ.

ಸದಾ ವೀರ ಸಾರ್ವರ್ಕರ್ ಒಬ್ಬ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಎಂದು ಶಿವಸೇನಾ ಪಕ್ಷ ನಂಬಿತ್ತು, ಇದನ್ನು ಕಾರ್ಯಕರ್ತರು ಬಹಳ ಹೆಮ್ಮೆಯಿಂದ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರು. ಉದ್ಧವ್ ಠಾಕ್ರೆ ಅವರು ಕೂಡ ಇದೇ ನಿಲುವನ್ನು ಹೊಂದಿದ್ದರು. ಆದರೆ ಇಂದು ವೀರ ಸಾರ್ವರ್ಕರ್ ರವರ ಕುರಿತು ರಾಹುಲ್ ಗಾಂಧಿ ‌ಅವರ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದಾಗ ಉದ್ಧವ್ ಠಾಕ್ರೆ ರವರು ಮೊದಲು ಪ್ರತಿಕ್ರಿಯೆ ಇಲ್ಲ ಎಂದರು, ತದನಂತರ ಮಾಧ್ಯಮಗಳು ಮರುಪ್ರಶ್ನೆ ಮಾಡಿದಾಗ ಈ ಹೇಳಿಕೆಯ ಕುರಿತು ಮುಂದೆ ಇನ್ನು ಕೆಲವೇ ದಿನಗಳಲ್ಲಿ ಮಹಾ ವಿಕಾಸ್ ಆಘಾಡಿ (ಮೂರು ಮೈತ್ರಿ ಪಕ್ಷಗಳ ಸಭೆ) ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ಹೇಳಿ ಸುಮ್ಮನಾದರು. ಉದ್ಧವ್ ಠಾಕ್ರೆ ರವರ ಈ ನಡವಳಿಕೆ ಶಿವಸೇನಾ ಪಕ್ಷದ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಭಾರಿ ಆಕ್ರೋಶವನ್ನು ಹೊರ ಹಾಕುವಂತೆ ಮಾಡಿದೆ. ಇದೀಗ ಶಿವಸೇನಾ ಪಕ್ಷದ ಕಾರ್ಯಕರ್ತರು ಕ್ಷಮಿಸಿ ಬಿಡಿ ವೀರ ಸಾರ್ವರ್ಕರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ಷಮಿಸಿಬಿಡಿ ಜನರೇ ಇಂತಹ ನಾಯಕನನ್ನು ಆಯ್ಕೆ ಮಾಡಿದ್ದಕ್ಕೆ ಎನ್ನುತ್ತಿದ್ದಾರೆ.