ಈಗ ಅಸಲಿ ಆಟ ಶುರು(ಕಿತ್ತಾಟ) ! ಕಾಂಗ್ರೆಸ್-ಶಿವಸೇನಾ ಪಕ್ಷಗಳ ಜಟಾಪಟಿ ನಡುವೆ ಎನ್ಸಿಪಿ ಪಕ್ಷ ಮಾಡಿದ್ದೇನು ಗೊತ್ತಾ?? ಮತ್ತೊಂದು ಕರ್ನಾಟಕದ ಮೈತ್ರಿ ಆಗುತ್ತದೆಯೇ ಮಹಾ ವಿಕಾಸ್ ಮೈತ್ರಿ?

ಈಗ ಅಸಲಿ ಆಟ ಶುರು(ಕಿತ್ತಾಟ) ! ಕಾಂಗ್ರೆಸ್-ಶಿವಸೇನಾ ಪಕ್ಷಗಳ ಜಟಾಪಟಿ ನಡುವೆ ಎನ್ಸಿಪಿ ಪಕ್ಷ ಮಾಡಿದ್ದೇನು ಗೊತ್ತಾ?? ಮತ್ತೊಂದು ಕರ್ನಾಟಕದ ಮೈತ್ರಿ ಆಗುತ್ತದೆಯೇ ಮಹಾ ವಿಕಾಸ್ ಮೈತ್ರಿ?

ನಮಸ್ಕಾರ ಸ್ನೇಹಿತರೇ, ಇದೀಗ ಕೆಲವೇ ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಅಧಿಕಾರಕ್ಕೆ ಏರಿದ್ದವು. ಆದರೆ ಕೆಲವು ದಿನಗಳ ನಂತರ ಸರ್ಕಾರ ಉರುಳಿತು, ಇದೇ ವಿಷಯವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಮೈತ್ರಿ ಸರ್ಕಾರ ರಚನೆ ಮಾಡಿದಾಗ ರಾಜಕೀಯ ಪಂಡಿತರು ಉದಾಹರಣೆಯಾಗಿ ಕೊಟ್ಟು ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದಿದ್ದರು.

ಅದರಲ್ಲಿಯೂ ಶಿವಸೇನೆ ಹಾಗೂ ಕಾಂಗ್ರೆಸ್, ಎನ್ಸಿಪಿ ಪಕ್ಷಗಳ ಸಿದ್ಧಾಂತ ತದ್ವಿರುದ್ಧವಾಗಿದೆ. ಆದಕಾರಣ ಈ ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದರೇ ಕರ್ನಾಟಕ ರಾಜ್ಯದಲ್ಲಿ ನಡೆದಂತೆ ಕೇವಲ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದಷ್ಟೇ ಅಲ್ಲದೇ, ಸಿದ್ಧಾಂತಗಳ ವಿಚಾರದಲ್ಲಿಯೂ ಕೂಡ ಮೂರು ಪಕ್ಷಗಳ ನಡುವೆ ಕಾಳಗ ತಾರಕಕ್ಕೆ ಏರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು. ಇದೀಗ ರಾಜಕೀಯ ಪಂಡಿತರ ಲೆಕ್ಕಾಚಾರದಂತೆ ಶಿವಸೇನಾ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ವೀರ ಸಾವರ್ಕರ್ ಅವರ ವಿಷಯದಲ್ಲಿ ಕಾಳಗ ತಾರಕಕ್ಕೇರಿದೆ. ರಾಹುಲ್ ಗಾಂಧಿ ರವರು ವೀರ ಸಾರ್ವರ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಶಿವಸೇನಾ ಪಕ್ಷವು ಕಿಡಿ ಕಾರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ರವರು ತನ್ನ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಎರಡು ಪಕ್ಷಗಳು ತಮ್ಮ ಸಿದ್ಧಾಂತಗಳ ನಡುವೆ ಕಿತ್ತಾಡುತ್ತಿರುವ ಸಂದರ್ಭದಲ್ಲಿ ಇನ್ನು ಸಚಿವ ಸಂಪುಟ ರಚನೆಯಾಗದಿದ್ದರೂ, ಮೂರು ಪಕ್ಷಗಳು ಖಾತೆಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ಖಾತೆಗಳಿಂದ ಎನ್ಸಿಪಿ ಪಕ್ಷವು ಸಮಾಧಾನ ಗೊಂಡಿಲ್ಲ, ಉದ್ದವ್ ಠಾಕ್ರೆ ರವರು ಬಲಿಷ್ಠ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂಬ ಆರೋಪ ಮಾಡಿ, ಬೇರೆ ಎರಡು ಮೈತ್ರಿ ಪಕ್ಷಗಳು ವಾದ-ವಿವಾದ ದಲ್ಲಿ ಮುಳುಗಿರುವ ಸಂದರ್ಭದಲ್ಲಿ ಎನ್ಸಿಪಿ ಪಕ್ಷವು ಗೃಹ ಇಲಾಖೆಯ ಮೇಲೆ ಕಣ್ಣಿಟ್ಟಿದೆ. ಅಜಿತ್ ಪವರ್ ರವರು ಉಪ ಮುಖ್ಯಮಂತ್ರಿ ಆಗಲಿದ್ದಾರೆ, ಆ ಸಮಯದಲ್ಲಿ ಗೃಹ ಖಾತೆಯನ್ನು ಶಿವಸೇನಾ ಪಕ್ಷದಿಂದ ಕಿತ್ತುಕೊಂಡು ಅಜಿತ್ ಪವರ್ ರವರಿಗೆ ನೀಡುವ ಇರಾದೆಯನ್ನು ಎನ್ಸಿಪಿ ಪಕ್ಷ ತೋರಿಸಿದೆ. ಇದರ ಕುರಿತು ಮಾತನಾಡಿರುವ ಅಜಿತ್ ಪವರ್ ರವರು, ಮೊದಲೇ ಮಾತುಕತೆ ಯಾದಂತೆ ನಮ್ಮ ಪಕ್ಷಕ್ಕೆ ಗೃಹ ಖಾತೆ ದಕ್ಕಬೇಕು, ನಾವು ಅದನ್ನು ಉದ್ಧವ ಠಾಕ್ರೆ ಅವರ ಬಳಿ ಕೇಳಿದ್ದೇವೆ. ಖಂಡಿತ ನಮಗೆ ಗೃಹ ಖಾತೆ ಸಿಗುತ್ತದೆ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕರು, ಇದರ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಜಟಾಪಟಿ ಆರಂಭವಾಗಿದೆ.