ಪ್ರತಿಭಟನೆ ಮಾಡುತ್ತಿರುವವರ ಬಗ್ಗೆ ತುಟಿ ಬಿಚ್ಚಿದ ಮೋದಿ ! ತಲ್ಲಣ ಸೃಷ್ಟಿಸಿದ ಮೋದಿ ಹೇಳಿಕೆ !

ಪ್ರತಿಭಟನೆ ಮಾಡುತ್ತಿರುವವರ ಬಗ್ಗೆ ತುಟಿ ಬಿಚ್ಚಿದ ಮೋದಿ ! ತಲ್ಲಣ ಸೃಷ್ಟಿಸಿದ ಮೋದಿ ಹೇಳಿಕೆ !

ಇದೀಗ ದೇಶದ ಹಲವಾರು ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ. ಈಶಾನ್ಯ ಭಾರತದ ಕೆಲವೊಂದು ರಾಜ್ಯಗಳಲ್ಲಿ ಹೋರಾಟ ಕೊಂಚ ತೀವ್ರವಾಗಿದೆ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರುವ ಅಂತಹ ಸಾಧ್ಯತೆ ಇದ್ದು ಯಾವುದೇ ಕ್ಷಣದಲ್ಲಿ ಬೇಕಾದರೂ ಭಾರತೀಯ ಸೇನೆ ಅಖಾಡಕ್ಕೆ ಇಳಿಯಬಹುದು ಎನ್ನಲಾಗುತ್ತಿದೆ.

ಇನ್ನು ಪಶ್ಚಿಮ ಬಂಗಾಳದ ಸ್ಥಿತಿಯನ್ನು ನೋಡಿದರೇ ಪ್ರತಿಭಟನೆಯ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲಿನ ರಾಜ್ಯ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಮಸೂದೆಯನ್ನು ಒಟ್ಟುಗೂಡಿಸಿ ನೀಡುತ್ತಿರುವ ಹೇಳಿಕೆಗಳೇ ಈ ಪ್ರತಿಭಟನೆಗೆ ಮೂಲ ಕಾರಣ ಎಂಬ ಮಾಹಿತಿಗಳು ಕೂಡ ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ ಪೊಲೀಸರು ಬಹುತೇಕ ಕಡೆ ಕಾದು ನೋಡುವ ಆಯ್ಕೆಯನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳದೆ ಮನಸೋ ಇಚ್ಛೆ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದಾರೆ ಎಂಬ ಮಾಹಿತಿ ಕೂಡ ಕೇಳಿಬಂದಿದ್ದು, ಬಿಜೆಪಿ ಪಕ್ಷದ ವಕ್ತಾರರು ಕೂಡ ಇದರ ಬಗ್ಗೆ ತುಟಿ ಬಿಚ್ಚಿದ್ದಾರೆ. ಅಷ್ಟೇ ಯಾಕೇ ಪಶ್ಚಿಮ ಬಂಗಾಳದ ರಾಜ್ಯಪಾಲರು ಕೂಡ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.

ಹೀಗಿರುವಾಗ ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ನರೇಂದ್ರ ಮೋದಿರವರು, ಅಸ್ಸಾಂ ಹಾಗೂ ಪಕ್ಷಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಚಿತ್ರಗಳನ್ನು ನೋಡಿದರೇ ಬೆಂಕಿ ಹಚ್ಚುವವರ ಬಟ್ಟೆಗಳು ಅವರು ಯಾರು ಎಂಬುದು ತೋರಿಸುತ್ತದೆ ಎಂದು ಹೇಳಿದ್ದಾರೆ. ಪರೋಕ್ಷವಾಗಿ ರೋಹಿಂಗ್ಯ ಜನಾಂಗದವರನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ. ಹೌದು ಎರಡು ರಾಜ್ಯಗಳಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೋಹಿಂಗ್ಯಾ ಜನಾಂಗದವರು. ನರೇಂದ್ರ ಮೋದಿ ಅವರ ಈ ಹೇಳಿಕೆಗೆ ನೆಟ್ಟಿಗರು ಹೌದು ಎಂದಿದ್ದಾರೆ ಅಷ್ಟೇ ಅಲ್ಲದೇ, ಕೆಲವರು ನರೇಂದ್ರ ಮೋದಿ ಅವರ ಹೇಳಿಕೆಗೆ ಮಾಧ್ಯಮಗಳು ಮತ್ತೊಂದು ಅರ್ಥವನ್ನು ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಕೆಲವು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೇ ಇಲ್ಲಿನ ಮಾಧ್ಯಮಗಳು ಟಿ ಆರ್ ಪಿ ಗಾಗಿ ಏನನ್ನು ಮಾಡಲು ಬೇಕಾದರೂ ಸಿದ್ಧವಾಗಿ ಕುಳಿತುಕೊಂಡಿವೆ ಆದ ಕಾರಣ ಈ ಹೇಳಿಕೆಯ ಮೂಲಕ ಮುಸ್ಲಿಂ ಸಮುದಾಯವನ್ನು ಪೌರತ್ವ ತಿದ್ದುಪಡಿಯ ವಿರುದ್ಧ ಬಳಸಿಕೊಳ್ಳಲು ಮಾಧ್ಯಮಗಳು ಪ್ರಯತ್ನಿಸುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.