ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕಿಡಿಕಾರಿದ ಉದ್ಧವ್ ಠಾಕ್ರೆಗೆ ಭಾರಿ ಮುಜುಗರ ! ತಕ್ಕ ತಿರುಗೇಟು ನೀಡಿದ ಬಿಜೆಪಿ

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕಿಡಿಕಾರಿದ ಉದ್ಧವ್ ಠಾಕ್ರೆಗೆ ಭಾರಿ ಮುಜುಗರ ! ತಕ್ಕ ತಿರುಗೇಟು ನೀಡಿದ ಬಿಜೆಪಿ

ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನಾ ಪಕ್ಷದ ಸ್ಥಿತಿಯು ಡೋಲಾಯಮಾನವಾಗಿದೆ. ಒಂದು ಕಡೆ ತನ್ನ ಸಿದ್ಧಾಂತಗಳನ್ನು ನೆಚ್ಚಿಕೊಂಡು ನಿರ್ಧಾರ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ ಪ್ರತಿಯೊಂದು ನಿರ್ಧಾರಗಳಿಗೂ ಒಂದು ಕರೆ ಬರುತ್ತದೆ, ತದ ನಂತರ ಶಿವಸೇನಾ ಪಕ್ಷದ ಸಿದ್ಧಾಂತವು ಬದಲಾಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ವ್ಯಂಗ್ಯದ ಮಾತುಗಳು.

ಹೌದು, ಇದೇ ರೀತಿ ಇದೀಗ ರಾಜ್ಯಸಭೆಯಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿ ಅಂಕಿತಕ್ಕಾಗಿ ತೆರಳಿರುವ ಪೌರತ್ವ ತಿದ್ದುಪಡಿ ಮಸೂದೆ ವಿಚಾರದಲ್ಲಿಯೂ ನಡೆದಿದೆ. ಶಿವಸೇನಾ ಪಕ್ಷವು ಎಂದಿನಂತೆ ಸಿದ್ಧಾಂತ ನೆಚ್ಚಿಕೊಂಡು ಲೋಕಸಭಾ ಕಲಾಪದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಕ್ಕಾಗಿ ಬಿಜೆಪಿ ಪಕ್ಷದ ಪರವಾಗಿ ಮತ ಚಲಾವಣೆ ಮಾಡಿತ್ತು. ಆದರೆ ಸೋನಿಯಾ ಗಾಂಧಿ ರವರು ನೇರವಾಗಿ ನಮಗೆ ಮಹಾರಾಷ್ಟ್ರ ರಾಜ್ಯದಲ್ಲಿ ನೀಡಿರುವ ನಾಲ್ಕೈದು ಸಚಿವ ಸ್ಥಾನ ನಮಗೆ ಮುಖ್ಯವಲ್ಲ, ನೀವು ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾಯಿಸಿದ ನಿರ್ಧಾರವು ನಮ್ಮ ವಿರುದ್ಧವಾಗಿದೆ. ನಮಗೆ ಸಚಿವ ಸ್ಥಾನ ಬೇಕಾಗಿಲ್ಲ, ಮುಂದೆ ಏನು ಎಂಬುದನ್ನು ನೀವೇ ಯೋಚನೆ ಮಾಡಿ ಎಂದು ಸಂದೇಶ ರವಾನೆ ಮಾಡಿದ್ದರು. ಇದರಿಂದ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದ ಉದ್ಧವ್ ಠಾಕ್ರೆ ಅವರು ಕೂಡಲೇ ಯುಟರ್ನ್ ಹೊಡೆದರು.

ಇದ್ದಕ್ಕಿದ್ದ ಹಾಗೇ ಪತ್ರಿಕಾಗೋಷ್ಠಿ ನಡೆಸಿದ ಉದ್ಧವ್ ಠಾಕ್ರೆ ಅವರು ನಮಗೆ ಕೇಂದ್ರ ಗೃಹ ಸಚಿವರಾಗಿ ರುವ ಅಮಿತ್ ಶಾ ರವರು, ಮಸೂದೆಯ ವಿಚಾರದಲ್ಲಿ ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ. ಆದ ಕಾರಣಕ್ಕೆ ನಾವು ಈ ಮಸೂದೆಗೆ ಸ್ಪಷ್ಟನೆ ಸಿಗುವವರೆಗೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರವು ಈ ಮಸೂದೆ ಜಾರಿಗೆ ತರುವ ಬದಲು ದೇಶದ ಆರ್ಥಿಕತೆ, ನಿರುದ್ಯೋಗ ಹಾಗೂ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಣ ಮಾಡಿದರೇ ಒಳಿತು ಎಂದು ಟೀಕೆ ಮಾಡಿದ್ದರು. ಇದರಿಂದ ಕುಪಿತಗೊಂಡ ಬಿಜೆಪಿ ನಾಯಕರು, ನೀವು ನಿಮ್ಮ ಪ್ರಣಾಳಿಕೆಯನ್ನು ಒಮ್ಮೆ ತೆಗೆದು ನೋಡಿ. ನೀವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತವನ್ನು ಕೇಳುವಾಗ ಪ್ರತಿಯೊಬ್ಬ ಪ್ರಜೆಗಳಿಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿ ಮೋದಿಗೆ ಜೈಕಾರ ಹಾಕಿ, ಅಮಿತ್ ಶಾ ಅವರನ್ನು ಹಾಡಿ ಹೊಗಳಿ ಮತಯಾಚನೆ ಮಾಡಿದ್ದೀರಾ. ಈಗ ನಿಮ್ಮದೇ ಅಧಿಕೃತ ಪ್ರಣಾಳಿಕೆಯಲ್ಲಿನ ಅಂಶವನ್ನು ಸರ್ಕಾರ ಉಳಿಸಿಕೊಂಡು ಅಧಿಕಾರದ ಕುರ್ಚಿಗಾಗಿ ವಿರೋಧ ವ್ಯಕ್ತಪಡಿಸುತ್ತಾ, ಸದನದಿಂದ ಹೊರ ನಡೆದಿದ್ದೀರಾ ಎಂದು ಟಾಂಗ್ ನೀಡಿದ್ದಾರೆ.