ಅಮಿತ್ ಶಾ ಘರ್ಜನೆ ನಂತರ ಮಧ್ಯ ಪ್ರವೇಶಿಸಿದ ವಿಶ್ವಸಂಸ್ಥೆ ಹೇಳಿದ್ದೇನು ಗೊತ್ತಾ? ದೊಡ್ಡಣ್ಣನ ನಿಯೋಗಕ್ಕೆ ಭಾರಿ ಮುಖಭಂಗ.

ಅಮಿತ್ ಶಾ ಘರ್ಜನೆ ನಂತರ ಮಧ್ಯ ಪ್ರವೇಶಿಸಿದ ವಿಶ್ವಸಂಸ್ಥೆ ಹೇಳಿದ್ದೇನು ಗೊತ್ತಾ? ದೊಡ್ಡಣ್ಣನ ನಿಯೋಗಕ್ಕೆ ಭಾರಿ ಮುಖಭಂಗ.

ಭಾರತ ದೇಶ ನಾವು ನೆರೆ ಹೊರೆಯ ದೇಶಗಳಲ್ಲಿ ಬಹು ಸಂಖ್ಯಾತರಾಗಿರುವ ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಿದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವಲಸಿಗ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಧರ್ಮಗಳಿಗೆ ಪೌರತ್ವ ನೀಡುತ್ತೇವೆ ಎಂದು ಮಸೂದೆ ಮಂಡಿಸುತ್ತಿದೆ. ಎಂದಿನಂತೆ ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾದೇಶ ದೇಶಗಳು ಈ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧ ಮಾಡುತ್ತಾ ಭಾರತದ ವಿರುದ್ಧ ಕಿಡಿಕಾರುತ್ತಿವೆ.

ಈ ನೆರೆ ಹೊರೆಯ ರಾಷ್ಟ್ರಗಳನ್ನು ಹೊರತುಪಡಿಸಿ ಸುಖಾಸುಮ್ಮನೆ ಕುಳಿತು ಕೊಳ್ಳಲಾರದೇ, ಅಮೇರಿಕಾ ದೇಶದ ಧಾರ್ಮಿಕ ಸ್ವಾತಂತ್ರದ ಹಕ್ಕುಗಳ ಹೋರಾಟದ ಆಯೋಗವು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿತ್ತು. ತನ್ನ ದೇಶದಲ್ಲಿಯೇ ಧರ್ಮಗಳ ಆಧಾರದ ಮೇಲೆ ಹಲವಾರು ತಾರತಮ್ಯಗಳನ್ನು ಮಾಡುವ ಅಮೇರಿಕಾ ದೇಶ ಇಂದಿಗೂ ಕೂಡ ಮುಸ್ಲಿಮರಿಗೆ ವೀಸಾ ನೀಡುವುದಿಲ್ಲ. ತನ್ನ ದೇಶದ ಒಳಗಡೆ ಮುಸ್ಲಿಮರನ್ನು ಕೇವಲ ಪ್ರವಾಸಕ್ಕೆ ಕೂಡ ತೆರಳಲು ಬಿಡದೇ ದಿಗ್ಬಂಧನ ಏರಿರುವ ಅಮೇರಿಕಾ ದೇಶದ ಹಕ್ಕುಗಳ ಆಯೋಗ ಇತರ ದೇಶಗಳ ವಲಸಿಗರನ್ನು ಭಾರತೀಯ ಪೌರತ್ವ ನೀಡುತ್ತಿವೆ ಎಂದರೇ ವಿರೋಧ ಮಾಡಿತ್ತು. ತನ್ನ ದೇಶದಲ್ಲಿಯ ತಾರತಮ್ಯಗಳನ್ನು ಮರೆತಿರುವ ಈ ಆಯೋಗವು ಭಾರತದ ವಿರುದ್ಧ ಕಿಡಿಕಾರಿದ್ದು ಬಾರಿ ನಗೆಪಾಟಲಿಗೆ ಈಡಾಗಿದೆ.

ಆದರೂ ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾದ ಕಾರಣ ಕೇಂದ್ರ ಗೃಹ ಸಚಿವ ರಾಗಿರುವ ಅಮಿತ್ ಶಾ ರವರು ಅಮೇರಿಕಾ ದೇಶದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗಕ್ಕೆ ಖಡಕ್ ಸಂದೇಶ ರವಾನೆ ಮಾಡಿದ್ದರು. ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಯಾರಿಗೂ ಮೂಗು ತೂರಿಸುವ ಹಕ್ಕುಗಳನ್ನು ಪಡೆದಿಲ್ಲ ಎಂದಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಪ್ರತಿಕ್ರಿಯೆ ನೀಡಿದ್ದು, ಭಾರತ ದೇಶವು ಪ್ರಜಾಪ್ರಭುತ್ವ ದೇಶ, ಎಲ್ಲಾ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರ ವಾಗುತ್ತದೆ. ಎಲ್ಲಾ ಧರ್ಮಿಯರ ಹಕ್ಕು ಕಾಪಾಡುವುದು ನಮ್ಮ ಕರ್ತವ್ಯ, ಆದರೆ ಈ ಪೌರತ್ವ ತಿದ್ದುಪಡಿ ವಿಚಾರದಲ್ಲಿ ವಿಶ್ವಸಂಸ್ಥೆಯು ಯಾವುದೇ ಮೂಗು ತೂರಿಸುವುದಿಲ್ಲ. ಸಂಸತ್ತಿನಲ್ಲಿ ಅಂಗೀಕಾರವಾದರೇ ಮಸೂದೆ ಮಂಡಿಸಲು ಇದರ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ತನ್ನ ಅಭಿಪ್ರಾಯವನ್ನು ಹೊರ ಹಾಕಿದೆ. ಇದರಿಂದ ಧಾರ್ಮಿಕ ಹಕ್ಕುಗಳ ಹೋರಾಟ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗವಾಗಿದೆ.