ಮತ್ತೊಮ್ಮೆ ಮುನ್ನೆಲೆಗೆ ಬಂದ ಪ್ರಕಾಶ ರಾಜ್ ! ಹೇಳಿದ್ದೇನು ಗೊತ್ತಾ??

ನಟ ಹಾಗೂ ಇತ್ತೀಚಿಗೆ ರಾಜಕೀಯದಲ್ಲಿ ಭಾರೀ ಆಸಕ್ತಿ ಯನ್ನು ತೋರಿಸಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಹೀನಾಯ ಸೋಲನ್ನು ಕಂಡಿದ್ದ ಪ್ರಕಾಶ್ ರಾಜ್ ಅವರು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಇದ್ದಕ್ಕಿದ್ದ ಹಾಗೆ ಕೆಲವು ದಿನಗಳು ತಮ್ಮ ಮಾತುಗಳ ಮೂಲಕ ಬಿಜೆಪಿ ಪಕ್ಷವನ್ನು ಟೀಕೆ ಮಾಡುವ ಪ್ರಕಾಶ್ ರಾಜ್ ರವರು, ಮತ್ತಷ್ಟು ದಿನಗಳು ಮಾಯವಾಗುತ್ತಾರೆ. ಕೆಲವು ದಿನಗಳ ನಂತರ ಮತ್ತೊಮ್ಮೆ ಮುನ್ನೆಲೆಗೆ ಬಂದು ಎಂದಿನಂತೆ ಬಿಜೆಪಿ ಪಕ್ಷದ ವಿರುದ್ಧ ಆ ಕ್ಷಣದ ರಾಜಕೀಯ ಚಟುವಟಿಕೆಗಳ ಕುರಿತು ಟೀಕೆಗಳನ್ನು ಮಾಡಿ ಮತ್ತೊಮ್ಮೆ ಕಾಣೆಯಾಗುತ್ತಾರೆ. ಇದೀಗ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿರುವ ಪ್ರಕಾಶ್ ರೈ ರವರು ಈ ರೀತಿ ಹೇಳಿದ್ದಾರೆ.

ಬಿಜೆಪಿ ಪಕ್ಷ ಸರಳ ಬಹುಮತವನ್ನು ಗಳಿಸಿದರ ಬಗ್ಗೆ ಮಾತನಾಡಿರುವ ಪ್ರಕಾಶ್ ರಾಜ್ ಅವರು ಬೆನ್ನಿಗೆ ಚೂರಿ ಹಾಕಿದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ, ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. ಅನರ್ಹ ಶಾಸಕರಿಗೆ ಕರ್ನಾಟಕ ರಾಜ್ಯದ ಜನತೆಯೂ ಮತ್ತೊಮ್ಮೆ ಮಣೆ ಹಾಕಿದ್ದಾರೆ, ಮುಂದೆ ಕರ್ನಾಟಕದ ಜನತೆಗೆ ಮಾಡಿದ್ದುಣ್ಣೋ ಮಹಾರಾಯ ಎಂಬ ಸ್ಥಿತಿ ಬಂದೇ ಬರುತ್ತದೆ ಎಂದು ಬಿಜೆಪಿ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಮಾಡಿದ್ದುಣ್ಣೋ ಮಹಾರಾಯ ಎನ್ನುವ ಈ ಮಾತು ಯಾವ ಪಕ್ಷಕ್ಕೆ ಅನ್ವಯಿಸುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಬರೆದುಕೊಂಡು ಎಂದಿನಂತೆ ಕೊನೆಯಲ್ಲಿ ಜಸ್ಟ್ ಅಸ್ಕಿಂಗ್ ಎನ್ನುವ ಹ್ಯಾಶ್ಟ್ಯಾಗ್ ಬಳಸಿದ್ದಾರೆ.

Post Author: Ravi Yadav