ಗೆದ್ದ ಕೂಡಲೇ ತನ್ನ ಎಲ್ಲಾ ಶಾಸಕರಿಗೆ, ನಾಯಕರಿಗೆ ಕಠಿಣ ಸಂದೇಶ ರವಾನೆ ಮಾಡಿದ ಬಿ ಎಸ್ ವೈ ! ಹೇಳಿದ್ದೇನು ಗೊತ್ತಾ??

ಇದೀಗ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ, ಬಿಜೆಪಿ ಪಕ್ಷವೂ ಸ್ಪಷ್ಟ ಬಹುಮತವನ್ನು ಗಳಿಸಿರುವ ಕಾರಣ ಮುಂದಿನ ಮೂರು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತೊಡಗಿಕೊಂಡಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಮ್ಮ ಎಲ್ಲಾ ಶಾಸಕರಿಗೆ ಖಡಕ್ ಆದೇಶ ಹೊರಡಿಸಿದ್ದಾರೆ.

ಹೌದು ಫಲಿತಾಂಶದ ನಂತರ ಮಾತನಾಡಿರುವ ಬಿಎಸ್ ಯಡಿಯೂರಪ್ಪನವರು ಮೊದಲಿಗೆ ಫಲಿತಾಂಶವನ್ನು ಮೆಚ್ಚಿಕೊಂಡು, ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆ ಅಂತೆ ಇಲ್ಲಿಯೂ ಕೂಡ ನಾವು ಬಹಳ ಹೆಚ್ಚಿನ ಅಂತರದಿಂದ ಗೆಲುವು ಕಂಡಿದ್ದೇವೆ. ಒಂದು ವೇಳೆ ನಾವು ಇದೇ ರೀತಿ ಮುಂದುವರೆದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಹೆಜ್ಜೆ ಇಡಬೇಕು ಎಂದು ಗುರಿ ನೀಡಿ ತದ ನಂತರ ಎಂದಿನಂತೆ ಅಭಿವೃದ್ಧಿಯ ಕಡೆ ಗಮನಹರಿಸಬೇಕು ಎಂದು ಖಡಕ್ಕಾಗಿ ಹೇಳಿದ್ದಾರೆ.

ಅಭಿವೃದ್ಧಿ ಕುರಿತು ಮಾತನಾಡಿರುವ ಬಿ.ಎಸ್ ಯಡಿಯೂರಪ್ಪನವರು ಪ್ರತಿಯೊಬ್ಬರು ತಮ್ಮ ಕ್ಷೇತ್ರಗಳ ಅಭಿವೃದ್ಧಿಯ ಕಡೆ ಗಮನ ಕೊಡಬೇಕು. ಮುಂದಿನ ಬಜೆಟ್ನಲ್ಲಿ ನಾವು ಕೃಷಿ, ನೀರಾವರಿ ಹಾಗೂ ರೈತರ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಲಿದ್ದೇವೆ. ಅದರ ಜೊತೆ ಕೈಗಾರಿಕೆ, ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ, ಪ್ರಧಾನಿ ಮೋದಿ ಅವರ ಬೆಂಬಲವನ್ನು ಪಡೆದುಕೊಂಡು ರಾಜ್ಯದ ಅಭಿವೃದ್ಧಿಯ ಕಡೆಗೆ ಪ್ರತಿಯೊಬ್ಬರು ದಿಟ್ಟ ಹೆಜ್ಜೆಯನ್ನು ಇಡಬೇಕು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಟೀಕೆ ಮಾಡುವುದರಿಂದ ನಮಗೆ ಏನೂ ಪ್ರಯೋಜನವಿಲ್ಲ, ಈಗಾಗಲೇ ಅವರಿಗೆ ಸೋಲನ್ನು ಕಂಡಿದ್ದಾರೆ, ಇನ್ನು ಮುಂದೆ ಎಲ್ಲಾ ಶಾಸಕರು ಎಲ್ಲಾ ಟೀಕೆಗಳನ್ನು ಪಕ್ಕಕ್ಕಿಟ್ಟು ಅವರ ಮಾತಿಗೆ ಉತ್ತರ ನೀಡುವ ಬದಲು ಅಭಿವೃದ್ಧಿಯ ಕಡೆ ಸಂಪೂರ್ಣವಾಗಿ ಗಮನಹರಿಸಬೇಕು, ನಿರೀಕ್ಷೆಗೂ ಮೀರಿ ನಮಗೆ ಗೆಲುವು ಕೊಟ್ಟಿರುವ ಮತದಾರರ ಋಣ ತೀರಿಸಬೇಕು ಎಂದು ಎಲ್ಲರಿಗೂ ತುಂಬಿದ ಸಭೆಯಲ್ಲಿ ಆದೇಶ ಹೊರಡಿಸಿದ್ದಾರೆ.