ರಾಜಕೀಯ ಜಂಜಾಟದ ನಡುವೆ ಇಲ್ಲೊಬ್ಬ ಮಾದರಿ ಶಾಸಕ ! ಹರೀಶ್ ಪೂಂಜಾ ಅವರು ಮಾಡಿದ್ದೇನು ಗೊತ್ತಾ?? ಪ್ರಶಂಸೆಗಳ ಸುರಿಮಳೆ

ರಾಜಕೀಯ ಜಂಜಾಟದ ನಡುವೆ ಇಲ್ಲೊಬ್ಬ ಮಾದರಿ ಶಾಸಕ ! ಹರೀಶ್ ಪೂಂಜಾ ಅವರು ಮಾಡಿದ್ದೇನು ಗೊತ್ತಾ?? ಪ್ರಶಂಸೆಗಳ ಸುರಿಮಳೆ

ನಮಸ್ಕಾರ ಸ್ನೇಹಿತರೇ, ಇದೀಗ ಉಪಚುನಾವಣೆಯ ಕಾವು ಮುಗಿದಿದೆ ಬಿಜೆಪಿ ಪಕ್ಷವು ಸರಳ ಬಹುಮತವನ್ನು ಗಳಿಸಿಕೊಂಡು ಮುಂದಿನ ಮೂರು ವರ್ಷಗಳ ಕಾಲ ಅಧಿಕಾರದಲ್ಲಿರುವುದು ಬಹುತೇಕ ಖಚಿತವಾಗಿದೆ. ಆದರೆ ಇಷ್ಟು ದಿವಸ ಯಾವ ಸರ್ಕಾರ ಉಳಿಯುತ್ತದೆ ಅಥವಾ ಉರುಳುತ್ತದೆ ಉಪ ಚುನಾವಣೆಯ ಕಾರ್ಯ ತಂತ್ರಗಳು ಹೀಗೆ ರಾಜಕೀಯ ಜಂಜಾಟದಲ್ಲಿ ಎಲ್ಲಾ ರಾಜಕಾರಣಿಗಳು ಮುಳುಗಿದ್ದರು.

ಅಭಿವೃದ್ಧಿಯ ಕಡೆ ಹಲವಾರು ಗಮನಗಳನ್ನು ಹರಿಸಿದರು ಕೂಡ ಎಲ್ಲೋ ಒಂದು ಕಡೆ ಹಲವಾರು ರಾಜಕಾರಣಿಗಳು ಉಪಚುನಾವಣೆಯಲ್ಲಿ ನಿರತರಾಗಿದ್ದರು. ಪಕ್ಷದ ಕಡೆ ಪ್ರಚಾರ, ಮತ್ತೊಂದು ಪಕ್ಷಗಳ ಮೇಲೆ ಆರೋಪಗಳ ಸುರಿಮಳೆ, ಹಾಗೂ ತನ್ನ ಪಕ್ಷವನ್ನು ಅಧಿಕಾರಕ್ಕೆ ಸೇರಿಸುವುದು ಹೇಗೆ ಎಂಬುದರ ಬಗ್ಗೆ ರಾಜ್ಯದ ಬಹುತೇಕ ಎಲ್ಲ ಪಕ್ಷದ ಶಾಸಕರು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿಕೊಂಡು ರಾಜಕೀಯ ಜಂಜಾಟದಲ್ಲಿ ಮುಳುಗಿ ಹೋಗಿದ್ದರು. ಆದರೆ ಇಷ್ಟು ದಿವಸ ತಮ್ಮ ಸರಳ ಜೀವನದ ಶೈಲಿ ಹಾಗೂ ತಮ್ಮ ಅಭಿವೃದ್ಧಿಯ ಕೆಲಸಗಳಿಂದ ಸದ್ದು ಮಾಡುತ್ತಿದ್ದ ಯುವ ಶಾಸಕ ಹರೀಶ್ ಪೂಂಜಾ ರವರು ಈ ರಾಜಕೀಯ ಜಂಜಾಟದ ನಡುವೆ ಸಾಧನೆ ಮಾಡಿದ್ದನ್ನು ಕಂಡರೆ ನೀವು ಭೇಶ್ ಎನ್ನುತ್ತೀರಾ .ಹೌದು, ಬೆಳ್ತಂಗಡಿ ಕ್ಷೇತ್ರ ಪ್ರವಾಹದಲ್ಲಿ ಮುಳುಗಿದಾಗ ಗಂಜಿ ಕೇಂದ್ರದ ಬದಲು ಕಾಳಜಿ ಕೇಂದ್ರ ಆರಂಭಿಸಿ ಎಲ್ಲರನ್ನೂ ಕಾಳಜಿ ಮಾಡಿ, ಮಳೆಯಿಂದ ಮುರಿದು ಬಿದ್ದ ಸೇತುವೆಯನ್ನು ಪಿಡಿಓ ಅಧಿಕಾರಿಗಳ ಹಿಂದೆ ಬಿದ್ದು ಕೇವಲ 48 ಗಂಟೆಗಳಲ್ಲಿ ಸರಿ ಮಾಡಿಸಿ ಎಲ್ಲರ ಗಮನ ಸೆಳೆದಿದ್ದ ಯುವ ಶಾಸಕ ಹರೀಶ್ ಪೂಂಜಾ ರವರು ಇದೀಗ ಮತ್ತೊಮ್ಮೆ ತಮ್ಮ ಅಭಿವೃದ್ಧಿಯ ಕೆಲಸಗಳ ಮೂಲಕ ಸದ್ದು ಮಾಡಿದ್ದಾರೆ.

ಇದೀಗ ಬೆಳ್ತಂಗಡಿ ಕ್ಷೇತ್ರವನ್ನು ಮರುನಿರ್ಮಾಣ ಮಾಡಲು ಪಣತೊಟ್ಟಿರುವ ಹರೀಶ್ ಪೂಂಜಾ ರವರು ತಮ್ಮ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ 347 ಕೋಟಿ ರೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಜಾರಿ ಮಾಡುವಂತೆ ಮಾಡಿ, ಬಿ.ಎಸ್ ಯಡಿಯೂರಪ್ಪನವರ ಕೈಯಿಂದ ಉದ್ಘಾಟನೆ ಮಾಡಿಸಿ(ನಿನ್ನೆ), ತದನಂತರ ಈಗಾಗಲೇ ಕಣ್ಣೂರಿನಲ್ಲಿ ಹೋಬಳಿ ಕೇಂದ್ರ ಸ್ಥಾಪನೆ ಮಾಡಲು, ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು ಶೀಘ್ರವಾಗಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿರುವ ಕಾರಣ ಯಡಿಯೂರಪ್ಪನವರು ಹರೀಶ್ ಪೂಂಜಾ ಅವರ ಮನವಿಗೂ ಕೂಡ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಈ ಎಲ್ಲ ರಾಜಕೀಯ ಜಂಜಾಟಗಳ ನಡುವೆ ಅಭಿವೃದ್ಧಿಯ ಸ್ಮರಣೆ ಮಾಡುತ್ತಿರುವ ಹರೀಶ್ ಪೂಂಜಾ ರವರಿಗೆ ನಮ್ಮ ತಂಡದ ಪರವಾಗಿ ಅನಂತ ಅನಂತ ವಂದನೆಗಳು ನಿಮ್ಮ ಈ ಕೆಲಸ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇವೆ.