ಮಹಾ ಸುಪ್ರೀಂ ತೀರ್ಪು ಪ್ರಕಟ ! ಬಿಜೆಪಿ ಪಕ್ಷಕ್ಕೆ ಅಗ್ನಿ ಪರೀಕ್ಷೆ !

ಮಹಾ ಸುಪ್ರೀಂ ತೀರ್ಪು ಪ್ರಕಟ ! ಬಿಜೆಪಿ ಪಕ್ಷಕ್ಕೆ ಅಗ್ನಿ ಪರೀಕ್ಷೆ !

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ರಾಜಕೀಯ ಬಹು ನಾಟಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೆಲವು ಶಾಸಕರು ಹಾಗೂ ಕೆಲವು ನಾಯಕರು ಗಂಟೆಗೊಂದು ಬಣ್ಣ ಬದಲಾಯಿಸುತ್ತಿದ್ದಾರೆ. ಈ ಎಲ್ಲ ವಿದ್ಯಮಾನಗಳ ನಡುವೆ ಇದೀಗ ಸುಪ್ರೀಂ ಕೋರ್ಟ್ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ (ಭಾಗಶಃ) ಪಕ್ಷಗಳ ಮನವಿಯನ್ನು ಆಲಿಸಿ ಮಹಾ ತೀರ್ಪು ನೀಡಿದೆ.

ಈಗಾಗಲೇ ದೇವೇಂದ್ರ ಫಡ್ನವಿಸ್ ಸರ್ಕಾರ ರಚಿಸಿ ಕಾರ್ಯ ಆರಂಭಿಸಿದ್ದಾರೆ. ಆದರೆ, ಡಿಸೆಂಬರ್ ೪ ರ ವರೆಗೆ ಇರುವ ಕಾಲಾವಕಾಶವನ್ನು ನಿರಾಕರಣೆ ಮಾಡಿ ಈ ಕೂಡಲೇ 24 ಗಂಟೆಗಳಲ್ಲೇ ಬಹುಮತ ಸಾಭೀತು ಮಾಡುವಂತೆ ತಾಕೀತು ಮಾಡಲು ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ನ್ಯಾಯಾಲಯದ ಮೆಟ್ಟಿಲು ಏರಿವೆ. ಇದೀಗ ಈ ಕುರಿತು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳಿಗೆ ಭರ್ಜರಿ ನ್ಯೂಸ್ ನೀಡಿದೆ.

ಪ್ರಜಾಪ್ರಭುತ್ವದ ಮೊಲ್ಯಗಳನ್ನು ಎತ್ತಿಹಿಡಿದು, ಸಂಸದೀಯ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದು ಆದೇಶ ನೀಡಿರುವ ಸುಪ್ರೀಂ ಕೋರ್ಟ್ ನಾಳೆಯೇ ಬಹುಮತ ಸಾಭೀತು ಮಾಡುವಂತೆ ಬಿಜೆಪಿ ಪಕ್ಷಕ್ಕೆ ಆದೇಶ ಹೊರಡಿಸಿದೆ. ನಾಳೆ ಸಂಜೆ ೫ ಗಂಟೆಯ ಒಳಗಡೆ ದೇವೇಂದ್ರ ಫಡ್ನವಿಸ್ ರವರು ಕಲಾಪದಲ್ಲಿ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ನಂಬರ್ ಅನ್ನು ಪ್ರೋವ್ ಮಾಡಬೇಕಾಗಿದೆ. ಈಗಾಗಲೇ ಹಲವಾರು ಶಾಸಕರನ್ನು ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನಾ ಪಕ್ಷಗಳು ಹೋಟೆಲ್ ನಲ್ಲಿ ಇರಿಸಿವೆ. ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ಶಿವಸೇನಾ ಪಕ್ಷದ ಬಹುತೇಕ ಶಾಸಕರು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕಾಗಿ ಉದ್ಧವ್ ಠಾಕ್ರೆ ರವರು ಬಹುತೇಕ ಸಮಯವನ್ನು ಶಾಸಕರ ಮನವೊಲಿಸಲು ಹೋಟೆಲ್ ನಲ್ಲಿಯೇ ಕಳೆಯುತ್ತಿದ್ದಾರೆ, ಮತ್ತೊಂದೆಡೆ ಎನ್ಸಿಪಿ ಶಾಸಕರು ಹೋಟೆಲ್ ನಲ್ಲಿ ಇದ್ದರೂ ಗಂಟೆಗೊಂದು ಬಣ ಬದಲಾಯಿಸಿ ಒಮ್ಮೆ ಶರದ್ ಪವರ್ ರವರಿಗೆ ಜೈ ಎಂದರೇ ಮತ್ತೊಮ್ಮೆ ಅಜಿತ್ ಪವರ್ ರವರಿಗೆ ಜೈ ಎನ್ನುತ್ತಿದ್ದಾರೆ.