ಬಿಗ್ ನ್ಯೂಸ್: ಫಡ್ನವಿಸ್ ರಾಜೀನಾಮೆ ನಂತರ, ಸಿಎಂ ಕುರ್ಚಿ ಸಿಕ್ಕ ಕೆಲವೇ ಕ್ಷಣಗಳಲ್ಲಿ ಶಿವಸೇನಾ ಪಕ್ಷಕ್ಕೆ ಮರ್ಮಾಘಾತ ! ಏನು ಗೊತ್ತಾ??

ಇದೀಗ ಮಹಾ ರಾಜಕೀಯ ನಾಟಕಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಶಿವಸೇನಾ ಪಕ್ಷವು ತನ್ನ ಬದ್ದ ರಾಜಕೀಯ ಹಾಗೂ ಸಿದ್ದಂತಗಳ ವೈರಿಗಳಾದ ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿ ಸ್ಥಾನ ಏರುವುದು ಖಚಿತವಾಗಿದೆ. ಇಂದು ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವಿಸ್ ರವರು ಯುದ್ದಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದ ಹಿನ್ನಲೆಯಲ್ಲಿ ಇನ್ನು ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಶಿವಸೇನಾ ಪಕ್ಷದ ನಾಯಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಯಾಗುವುದು ಖಚಿತವಾಗಿದೆ.

ಆದರೆ ಈ ಸಿಹಿ ಸುದ್ದಿಯನ್ನು ಕೇಳುವಷ್ಟರಲ್ಲೇ ಶಿವಸೇನಾ ಪಕ್ಷಕ್ಕೆ ಬಹುದೊಡ್ಡ ಸಮಸ್ಯೆ ಎದುರಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದರೇ ಶಿವಸೇನಾ ಪಕ್ಷ ತನ್ನ ಮೂಲ ಸಿದ್ದಂತಗಳನ್ನು ಪಕ್ಕಕ್ಕೆ ಇಡಬೇಕು ಎನ್ನುವ ಷರತ್ತು ಸೋನಿಯಾ ಗಾಂಧಿ ರವರ ಕಡೆಯಿಂದ ಕೇಳಿ ಬಂದಿತ್ತು, ಆದರೆ ಶಿವಸೇನಾ ಪಕ್ಷವು ಇಲ್ಲಿಯವರೆಗೂ ನಡೆದ ಚುನಾವೇನೆಗಳಲ್ಲಿ ರಾಮ ಮಂದಿರ ನಿರ್ಮಾಣ, ಹಿಂದುತ್ವದ ಸಿದ್ದಂತಾಗಲು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರ್ ಸಾರ್ವರ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತದೆ ಎಂದು ಜನರಲ್ಲಿ ಮತ ಯಾಚನೆ ಮಾಡಿತ್ತು. ಅಷ್ಟೇ ಅಲ್ಲದೇ ಶಿವಸೇನಾ ಪಕ್ಷದ ಕಾರ್ಯಕರ್ತರು ಎಲ್ಲರೂ ಶಿವಾಜಿ ಮಹಾರಾಜರ ಅನುಯಾಯಿಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಆದರೆ ಇದೀಗ ಕಾಂಗ್ರೆಸ್ ಪಕ್ಷದ ಷರತ್ತಿನ ಅನ್ವಯ ಶಿವಸೇನಾ ಪಕ್ಷವು ತನ್ನ ಹಿಂದುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದಿಲ್ಲ ಎಂದು ಹೇಳಿದೆ. ಇಷ್ಟು ದಿವಸ ಪಕ್ಷದ ಒಳಗಡೆ ಮೈತ್ರಿ ಅಂತಿಮವಾಗದ ಕಾರಣ ಕಾರ್ಯಕರ್ತರಲ್ಲೇ ಉಳಿದಿದ್ದ ಅಸಮಾಧಾನ ಇದೀಗ ಮೈತ್ರಿ ಖಚಿತಗೊಂಡು ಅಧಿಕಾರಕ್ಕೆ ಏರುತ್ತಾರೆ ಎನ್ನುವ ತಕ್ಷಣ ಆಕ್ರೋಶದ ಕಟ್ಟೆ ಹೊಡೆದು ಹೋಗಿದೆ. ಇದೀಗ ಬಹುತೇಕ ಕಡೆ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಕೆಲವು ಕಡೆ ಶಿವಸೇನಾ ಕಾರ್ಯ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲಿಯೂ ಬಾಳಾ ಠಾಕ್ರೆ ರವರಿಂದ ಆದರ್ಶರಾಗಿ ಶಿವಸೇನಾ ಪಕ್ಷಕ್ಕೆ ದುಡಿಯುತ್ತಿದ್ದ ಬೆಂಬಲಿಗರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇಗೋ ಶಿವಸೇನಾ ಶಾಸಕರ ಬಂಡಾಯವನ್ನು ಹೋಟೆಲ್ ನಲ್ಲಿ ಕೂಡಿಹಾಕಿ ಶಮನ ಮಾಡಿ ಉದ್ಧವ್ ಠಾಕ್ರೆ ಇದೀಗ ಏನು ಮಾಡಿ ಕಾರ್ಯಕರ್ತರನ್ನು ಮನವೊಲಿಸುತ್ತಾರೆ ಎಂಬುದನ್ನು ಕಾಡು ನೋಡಬೇಕಿದೆ.

Post Author: Ravi Yadav