ದೇವೇಂದ್ರ ಫಡ್ನವಿಸ್ ಮೇಲೆ ನೀರಾವರಿ ಹಗರಣಗಳ ಮಹಾ ಸುಳ್ಳು ಆರೋಪ ಹೊರಿಸಿದ ಮಾಧ್ಯಮಗಳು- ಸತ್ಯ ಇಲ್ಲಿದೆ !

ದೇವೇಂದ್ರ ಫಡ್ನವಿಸ್ ಮೇಲೆ ನೀರಾವರಿ ಹಗರಣಗಳ ಮಹಾ ಸುಳ್ಳು ಆರೋಪ ಹೊರಿಸಿದ ಮಾಧ್ಯಮಗಳು- ಸತ್ಯ ಇಲ್ಲಿದೆ !

ಇದೀಗ ಅಜಿತ್ ಪವರ್ ರವರು ಬಿಜೆಪಿ ಪಕ್ಷದ ಜೊತೆ ಕೈ ಜೋಡಿಸಿರುವ ಕಾರಣ ಬಹುತೇಕ ವಿರೋಧ ಪಕ್ಷಗಳ ನಾಯಕರು ಅಜಿತ್ ಪವರ್ ರವರು ತಮ್ಮನ್ನು ತಾವು ಹಗರಣಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ ಎಂಬ ಸುದ್ದಿಗಳನ್ನು ಹರಿಬಿಟ್ಟಿದ್ದರು. ಆದರೆ ಇಂದು ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರಕ್ಕೆ ಬಂದ ಕೂಡಲೇ ದೇವೇಂದ್ರ ಫಡ್ನವಿಸ್ ರವರು, ಅಜಿತ್ ರವರ ಮೇಲಿನ ನೀರಾವರಿ ಹಗರಣಗಳಲ್ಲಿ ಕ್ಲೀನ್ ಚಿಟ್ ನೀಡಿ ಆದೇಶ ಹೊರಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇಲ್ಲಿದೆ ಸತ್ಯ ಮಾಹಿತಿ, ಎಲ್ಲರಿಗೂ ತಲುಪಿಸಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅಜಿತ್ ಪವರ್ ರವರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಸುಮಾರು 3000 ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಅದರಲ್ಲಿ ಕಳೆದ ಫಡ್ನವಿಸ್ ನೇತೃತ್ವದ ಸರ್ಕಾರಕ್ಕೆ ಅನುಮಾನ ಬಂದ ಕಾರಣ ಸಾಮಾಜಿಕ ಅರ್ಜಿಗಳನ್ನು ಎತ್ತಿ ಹಿಡಿದು ಎಸಿಬಿ ಸಂಸ್ಥೆಗೆ 20 ವಿವಿಧ ಯೋಜನೆಗಳಲ್ಲಿ ಹಗರಣ ನಡೆದಿದೆಯೇ ಎಂದು ತನಿಖೆ ಮಾಡಲು ಆದೇಶ ನೀಡಿತ್ತು. ಈ ವಿಷಯ ಅಂದು ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಸುಖ ಸುಮ್ಮನೆ ಆರೋಪ ಮಾಡಿ ರಾಜಕೀಯವಾಗಿ ಶಮನ ಮಾಡಲು ಬಿಜೆಪಿ ಪಕ್ಷ ಈ ರೀತಿಯ ಕುತಂತ್ರ ನೀತಿ ಅನುಸರಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು ಎಂದಿದಂತೆ ಪ್ರಜಾ ಪ್ರಭುತ್ವ ಅಪಾಯಕ್ಕೆ ಸಿಲುಕಿದೆ ಎಂಬ ಗಂಭೀರ ಮಾತುಗಳು ಕೇಳಿಬಂದಿದ್ದವು.

ಇದರ ಸಂಪೂರ್ಣ ತನಿಖೆ ನಡೆಸಿರುವ ಎಸಿಬಿ ಸಂಸ್ಥೆಯು ಹಲವಾರು ತಿಂಗಳುಗಳ ಹಿಂದೆಯೇ ಇಂದು ಅಂದರೆ (೨೫-೧೧-೨೦೧೯) ರಂದು ಎಸಿಬಿ ಸಂಸ್ಥೆಯು ತನ್ನ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ನೀಡುವುದಾಗಿ ತಿಳಿಸಿತ್ತು. ಅಂದು ಕೊಂಡಂತೆ ಇಂದು ನ್ಯಾಯಾಲಯಕ್ಕೆ ಸಂಪೂರ್ಣ ವರದಿ ಸಲ್ಲಿಸಿರುವ ಎಸಿಬಿ ಸಂಸ್ಥೆಯು 20 ಪ್ರಕರಣಗಳಲ್ಲಿ 9 ಪ್ರಕರಣಗಳ ತನಿಖೆ ಮುಗಿದಿದೆ, ಹಾಗೂ ಅದರಲ್ಲಿ ಅಜಿತ್ ರವರ ಯಾವುದೇ ಅಸ್ತಕ್ಷೇಪ ಕಂಡು ಬಂದಿಲ್ಲ ಎಂದು ವರದಿ ನೀಡಿದೆ. ಈ ಎಸಿಬಿ ವರದಿಯನ್ನು ದೇವೇಂದ್ರ ಫಡ್ನವಿಸ್ ರವರು ತಯಾರು ಮಾಡಲು ಸಾದ್ಯವಾಗುವಿದಿಲ್ಲ ಹಾಗೂ ಇಂದು ಹೀಗೆ ನಡೆಯುತ್ತದೆ ಎಂದು ಹಲವಾರು ತಿಂಗಳು ಗಳ ಮುನ್ನವೇ ಊಹಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಅಂಶವನ್ನು ಮರೆತಿರುವ ಮಾಧ್ಯಮಗಳು ದೇವೇಂದ್ರ ಫಡ್ನವಿಸ್ ರವರು ಈ ಆದೇಶ ಹೊರಡಿಸಿದ್ದಾರೆ ಎಂದು ನ್ಯಾಯಾಲಯದ ತೀರ್ಪನ್ನು ಪ್ರಸಾರ ಮಾಡುತ್ತಿದ್ದಾರೆ.