ಮತ್ತೊಂದು ಮಹಾ ತಿರುವು? ಬಿಜೆಪಿಯ ಅಚ್ಚರಿ ನಡೆ ! ಅಜಿತ್ ಕೈಕೊಟ್ಟರೆ ಮುಂದೇನು ಗೊತ್ತಾ?

ಮತ್ತೊಂದು ಮಹಾ ತಿರುವು? ಬಿಜೆಪಿಯ ಅಚ್ಚರಿ ನಡೆ ! ಅಜಿತ್ ಕೈಕೊಟ್ಟರೆ ಮುಂದೇನು ಗೊತ್ತಾ?

ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಅಜಿತ್ ಪವರ್ ರವರು ಬಾರಿ ಬೆಂಬಲವನ್ನು ಹೊಂದಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಮತ್ತೊಂದೆಡೆ ಎಲ್ಲ ಶಾಸಕರು ವಾಪಸ್ಸು ಬಂದಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಆದರೆ ಈ ಎಲ್ಲದರ ನಡುವೆ ಬಿಜೆಪಿ ಪಕ್ಷ ಮತ್ತೊಂದು ಹಾದಿಯಲ್ಲಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಅದು ಏನು ಗೊತ್ತಾ?

ಹೌದು ಇದೀಗ ಬಿಜೆಪಿ ಪಕ್ಷವು ತನ್ನ ಸರ್ಕಾರ ಉಳಿಸಿಕೊಳ್ಳಲು ಮತ್ತೊಂದು ಮಾರ್ಗ ಆಲೋಚನೆ ಮಾಡುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ. ಅಜಿತ್ ಪವರ್ ರವರು ಎಷ್ಟೇ ಟ್ವೀಟ್ ಗಳ, ಹೇಳಿಕೆಗಳ ಮೂಲಕ ಬಿಜೆಪಿ ಪಕ್ಷದ ಜೊತೆ ಇದ್ದೇವೆ ಎಂದು ಹೇಳಿದರೂ ಶರದ್ ಪವರ್ ರವರು, ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದ ಜೊತೆ ಮೈತ್ರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಮತ್ತೊಂದೆಡೆ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಹಗರಣಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಎನ್ಸಿಪಿ ಪಕ್ಷ ಇದೆ ಎಂಬ ಮಾತುಗಳು ಕೇಳಿಬಂದಿವೆ. ಇವೆಲ್ಲವನ್ನೂ ಪಕ್ಕಕ್ಕೆ ಇಟ್ಟು ಯೋಚನೆ ಮಾಡಿದರೇ, ಬಿಜೆಪಿ ಪಕ್ಷಕ್ಕೆ ಒಂದು ವೇಳೆ ಅಜಿತ್ ಬೆಂಬಲಿಗರು ಬೆಂಬಲ ನೀಡದೇ ಹೋದರೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಮತ್ತೊಂದು ಮಾರ್ಗದ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿ ರಾಜಕೀಯದಲ್ಲಿ ಮತ್ತೊಂದು ತಿರುವು ನೀಡಲು ಸಿದ್ಧವಾಗಿದೆ ಎನ್ನಲಾಗುತ್ತಿದೆ.

ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಬಿಜೆಪಿ ಪಕ್ಷವು ಒಂದು ವೇಳೆ ಅಜಿತ್ ಬೆಂಬಲಿಗರು ಕೈ ಕೊಟ್ಟರೇ, ಈಗಾಗಲೇ ಉದ್ಧವ್ ಠಾಕ್ರೆ ರವರ ಮೈತ್ರಿ ನಿರ್ಧಾರದಿಂದ ಬೇಸತ್ತಿರುವ ಬಾಳಾ ಠಾಕ್ರೆ ಅನುಯಾಯಿ ಶಾಸಕರನ್ನು ಸೆಳೆದು ರಾಜೀನಾಮೆ ನೀಡಿಸುವ ಮೂಲಕ ಮ್ಯಾಜಿಕ್ ನಂಬರ್ ಅನ್ನು ಕಡಿಮೆ ಮಾಡಿಸುವ ಆಲೋಚನೆ ಮಾಡುತ್ತಿದೆ. ಸುಮಾರು ೧೭ ಶಿವಸೇನಾ ಶಾಸಕರು ರಾಜೀನಾಮೆ ನೀಡಿದರೇ, ಇತರೆ ಪಕ್ಷಗಳ ಶಾಸಕರು ಹಾಗೂ ಪಕ್ಷೇತರರ ಬೆಂಬಲ ಪಡೆದುಕೊಂಡು ಬಹುಮತ ಸಾಭೀತು ಪಡಿಸುವ ಸಾಹಸಕ್ಕೆ ಕೈ ಹಾಕಲಿದೆ. ಆದರೆ ಹೀಗೆ ಮಾಡಿದರೂ ಕೂಡ ಎನ್ಸಿಪಿ ಪಕ್ಷದ ಕೆಲವು ಶಾಸಕರ ಬೆಂಬಲ ಬಿಜೆಪಿ ಪಕ್ಷಕ್ಕೆ ಬೇಕಾಗುತ್ತದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ನಮ್ಮ ಶಾಸಕರು ನಮ್ಮ ಜೊತೆ ಇದ್ದಾರೆ ಎನ್ನುತ್ತಿರುವ ಶರದ್ ಪವರ್ ರವರು, ಅವರೇ ಕರೆದ ಪಕ್ಷದ ಶಾಸಕಾಂಗ ಸಭೆಗೆ 17 ಕ್ಕೂ ಹೆಚ್ಚು ಶಾಸಕರು ಸಭೆಗೆ ಹಾಜರಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸಮಯದ ಅಭಾವದಿಂದ ಅವರು ಸಭೆಗೆ ಬಂದಿಲ್ಲ ಎಂದಿದ್ದಾರೆ.