ಬಿಜೆಪಿ ಮುಂದೆ ಮಂಡಿಯೂರಿತೇ ಶಿವಸೇನೆ ! ನಾಟಕೀಯ ತಿರುವು ಪಡೆದುಕೊಂಡ ಮಹಾರಾಷ್ಟ್ರ ರಾಜಕೀಯ ! ನಡೆದದ್ದೇನು ಗೊತ್ತಾ??

ಮಹಾರಾಷ್ಟ್ರದಲ್ಲಿ ಬಿಜೆಪಿ ಸಖ್ಯ ತೊರೆದು ಕೊಂಡು ಸರಕಾರ ರಚಿಸುತ್ತೇವೆ ಎಂದು ಹೊರಟು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ವಿಧಿಸಿದ ಎಲ್ಲಾ ಶರತ್ತುಗಳಿಗೆ ಒಪ್ಪಿಗೆ ನೀಡಿ ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಶಿವಸೇನಾ ಪಕ್ಷವು ಇದೀಗ ಇದ್ದಕ್ಕಿದ್ದ ಹಾಗೇ ಯಾಕೋ ಯು ಟರ್ನ್ ಹೊಡೆದಂತೆ ಕಾಣುತ್ತಿದೆ. ಇಂದು ನಡೆದ ಮಹತ್ವದ ನಾಟಕೀಯ ಬೆಳವಣಿಗೆಗಳ ಸುದ್ದಿಗಾಗಿ ಕೆಳಗಡೆ ಓದಿ.

ತನ್ನ ಸಿದ್ಧಾಂತಗಳನ್ನು ಮರೆತು ಶಿವಸೇನಾ ಪಕ್ಷವು ಇದೇ ಮೊಟ್ಟ ಕುಟುಂಬದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆದಿತ್ಯ ಠಾಕ್ರೆಯ ರವರನ್ನು ಮುಖ್ಯಮಂತ್ರಿ ಮಾಡಲು ಇನ್ನಿಲ್ಲದ ತಯಾರಿ ನಡೆಸಿತ್ತು. ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧ ಆದರೆ ಕೇವಲ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾದರೇ ಮಾತ್ರ ಬೆಂಬಲ ನೀಡುವುದಾಗಿ ಘೋಷಿಸಿದ ಕಾರಣ ತಾನೇ ಮುಖ್ಯಮಂತ್ರಿಯಾಗಲು ಉದ್ಧವ್ ಠಾಕ್ರೆ ಅವರು ನಿರ್ಧಾರ ಮಾಡಿದ್ದರು. ಮೂರು ಪಕ್ಷಗಳ ನಡುವಿನ ಮೈತ್ರಿ ಬಹುತೇಕ ಅಂತಿಮಗೊಂಡು, ಮೂರು ಪಕ್ಷಗಳು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅನುವು ಮಾಡಿ ಕೊಡುವಂತೆ ಮನವಿ ಮಾಡಲು ರಾಜ್ಯಪಾಲರ ಭೇಟಿಗಾಗಿ ಸಮಯ ಕೇಳಿದರು.

ಆದರೆ ಇಂದು ನಡೆದ ಮಹತ್ವದ ನಾಟಕೀಯ ತಿರುವಿನಲ್ಲಿ ಮಹಾರಾಜ ರಾಜಕೀಯ ಮತ್ತೊಂದು ತಿರುವು ಪಡೆದುಕೊಂಡಿದ್ದು, ಶಿವಸೇನ ಪಕ್ಷವು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಳ್ಳದೇ ಬಿಜೆಪಿ ಪಕ್ಷಕ್ಕೆ ಹಿಂಬಾಗಿಲ ಮೂಲಕ ಮಾತುಕತೆ ನಡೆಸಲು ಮುಂದಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಮೂಲಗಳ ಪ್ರಕಾರ ಬಿಜೆಪಿ ಹಾಗೂ ಶಿವಸೇನಾ ಪಕ್ಷದ ಮಾತುಕತೆ ಅಂತಿಮ ಘಟ್ಟ ತಲುಪಿದೆ, ಮಾತುಕತೆಗಳು ಎಲ್ಲವೂ ಸಕಾರಾತ್ಮಕವಾಗಿ ಸಾಗಿವೆ ಎನ್ನಲಾಗುತ್ತಿದೆ. ಶಿವಸೇನ ಪಕ್ಷದ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿರುವ ಬಿಜೆಪಿ ಪಕ್ಷದ ಹಲವಾರು ಮುಖಂಡರು ನಾಳೆ ಮುಂಬೈನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಅಂದುಕೊಂಡಂತೆ ದೇವೇಂದ್ರ ಫಡ್ನವಿಸ್ ರವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಮುಂದುವರಿಸಲಿದ್ದಾರೆ ಎಂಬ ಬ್ರೇಕಿಂಗ್ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿಯವರೊಂದಿಗೆ ಹನ್ನೆರಡರಿಂದ ಹದಿನಾಲ್ಕು ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

Post Author: Ravi Yadav