ಕಾಂಗ್ರೆಸ್ ಭದ್ರಕೋಟೆಯಲ್ಲಿ ಸಿದ್ದರಾಮಯ್ಯರವರಿಗೆ ಭಾರಿ ಮುಖಭಂಗ ! ಸಂಪೂರ್ಣ ಕೇಸರಿಮಯ ವಾದ ಮತ್ತೊಂದು ಕ್ಷೇತ್ರ

ಕಾಂಗ್ರೆಸ್ ಭದ್ರಕೋಟೆಯಲ್ಲಿ ಸಿದ್ದರಾಮಯ್ಯರವರಿಗೆ ಭಾರಿ ಮುಖಭಂಗ ! ಸಂಪೂರ್ಣ ಕೇಸರಿಮಯ ವಾದ ಮತ್ತೊಂದು ಕ್ಷೇತ್ರ

ಇದೀಗ ರಾಜ್ಯದ ಎಲ್ಲೆಡೆ ಉಪ ಚುನಾವಣೆಯ ಕಾವು ಏರತೊಡಗಿದೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಕಾರಣ ಉಪ ಚುನಾವಣೆ ಮತ್ತಷ್ಟು ರಂಗೇರಿದೆ. ಬಿಜೆಪಿ ಪಕ್ಷವು ಶತಾಯಗತಾಯ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೇ, ಕಾಂಗ್ರೆಸ್ ಪಕ್ಷವು ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಪಕ್ಷವು ಗೆದ್ದರೂ ಸೋತರೂ ನಾವು ತಟಸ್ಥ ಎಂದು ಹೇಳಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಪರೋಕ್ಷದ ಮಾತುಗಳನ್ನು ಆಡಿದೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಸಿದ್ದರಾಮಯ್ಯರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಲವಾರು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ರವರ ವಿರುದ್ಧ ಉಪ ಚುನಾವಣೆಯಲ್ಲಿ ತೊಡೆ ತಟ್ಟಲು ಇನ್ನಿಲ್ಲದ ತಯಾರಿ ನಡೆಸುತ್ತಿದ್ದಾರೆ. ಇಷ್ಟು ದಿವಸ ನನ್ನ ವರ್ಚಸ್ಸಿನಿಂದ ಈ ಎಲ್ಲಾ ಶಾಸಕರು ಗೆದ್ದು ಬರುತ್ತಿದ್ದಾರೆ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ರವರಿಗೆ ಇದೀಗ ಸಿದ್ದರಾಮಯ್ಯ ರವರ ಬಹಳ ಆಪ್ತ ಎನಿಸಿಕೊಂಡಿದ್ದ ಪಾಟೀಲ್ರವರು ಉಪ ಚುನಾವಣೆಯ ಸಮಯದಲ್ಲಿ ಮೊದಲ ಗುದ್ದು ನೀಡಿದ್ದಾರೆ. ಈ ಮೂಲಕ ಇದೀಗ ಇಡೀ ಹಿರೇಕೆರೂರು ಕ್ಷೇತ್ರ ಕೇಸರಿಮಯವಾಗಿದ್ದು, ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ.

ಹೌದು ಇದೀಗ ಒಟ್ಟು 22 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಮೊದಲು 13 ಬಿಜೆಪಿ ಹಾಗೂ 9 ಕಾಂಗ್ರೆಸ್ ಪಕ್ಷದ ಸದಸ್ಯರಿದ್ದರು. ಆದರೆ ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ 8 ತಾಲೂಕು ಪಂಚಾಯಿತಿ ಸದಸ್ಯರು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಾಟೀಲ್ ರವರಿಗೆ ಬೆಂಬಲ ಸೂಚಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನು ಕೇವಲ ಒಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಉಳಿದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಇದರಿಂದ ಪಾಟೀಲರನ್ನು ಸೋಲಿಸಬೇಕು ಎಂದು ಕೊಂಡು ತೊಡೆ ತಟ್ಟಿದ ಸಿದ್ದರಾಮಯ್ಯ ರವರಿಗೆ ಭಾರಿ ಮುಖಭಂಗ ಉಂಟಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಂಪಾದನೆ ಮಾಡಿಕೊಂಡು ಗೆಲುವಿನ ಕನಸಿನಲ್ಲಿ ಇದ್ದ ಬನ್ನಿಕೋಡ್ ರವರಿಗೆ ಸದಸ್ಯರಾಗಿ ನಡೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.