ಜೈಲಿನಿಂದ ಹೊರಗೆ ಬಂದ ತಕ್ಷಣ ಸಿದ್ದು, ಗುಂಡೂರಾವ್ ಗೆ ಹಳ್ಳ ತೋಡಿದ ಡಿಕೆಶಿ ! ಮಾಡಿದ್ದೇನು ಗೊತ್ತಾ??

ಜೈಲಿನಿಂದ ಹೊರಗೆ ಬಂದ ತಕ್ಷಣ ಸಿದ್ದು, ಗುಂಡೂರಾವ್ ಗೆ ಹಳ್ಳ ತೋಡಿದ ಡಿಕೆಶಿ ! ಮಾಡಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕಳೆದ ಹಲವಾರು ದಿನಗಳಿಂದಲೂ ಡಿ.ಕೆ ಶಿವಕುಮಾರ್ ರವರು ದೆಹಲಿಯ ಕೋರ್ಟಿನಲ್ಲಿ ಈಡಿ ಅಧಿಕಾರಿಗಳಿಂದ ಮುಕ್ತಿ ಪಡೆದುಕೊಳ್ಳಲು ಜಾಮೀನಿಗಾಗಿ ಪ್ರಯತ್ನ ಪಡುತ್ತಿದ್ದರು. ಆದರೆ ದೆಹಲಿ ನ್ಯಾಯಾಲಯ ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಡಿ.ಕೆ ಶಿವಕುಮಾರ್ ಅವರನ್ನು ಹಲವಾರು ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಉಳಿಯುವಂತೆ ಮಾಡಿತ್ತು. ಕೊನೆಗೂ ಡಿ.ಕೆ ಶಿವಕುಮಾರ್ ಅನಾರೋಗ್ಯದ ಕಾರಣವನ್ನು ಮುಂದೆ ಇಟ್ಟುಕೊಂಡು ದೆಹಲಿಯ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಧಿಕಾರಿಗಳು ಇಷ್ಟಕ್ಕೆ ಸುಮ್ಮನಾಗದೆ ಡಿ.ಕೆ ಶಿವಕುಮಾರ್ ಅವರನ್ನು ವಾಪಸ್ ಕಸ್ಟಡಿಗೆ ಪಡೆದುಕೊಳ್ಳಲು ಸುಪ್ರೀಂಕೋರ್ಟ್ ಮೊರೆ ಹೋಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೇ ಇಷ್ಟು ದಿವಸ ಅನಾರೋಗ್ಯದ ಕಾರಣವನ್ನು ಮುಂದಿಟ್ಟು ಕೊಂಡು ಜಾಮೀನು ಪಡೆದು ಕೊಳ್ಳಲು ಪ್ರಯತ್ನ ಪಡುತ್ತಿದ್ದ ಡಿ.ಕೆ ಶಿವಕುಮಾರ್ ಬಿಡುಗಡೆಯಾಗಿ ಮೂರು ದಿನಗಳಾದರೂ ಬೆಂಗಳೂರಿಗೆ ವಾಪಸ್ಸು ಬಂದಿರಲಿಲ್ಲ.

ಇದಕ್ಕೆ ಪ್ರಮುಖ ಕಾರಣವೇನೆಂದರೇ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಅಷ್ಟೆಲ್ಲ ಅಲ್ಲದೆ, ಕರ್ನಾಟಕ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಗಳಿಂದ ಡಿ ಕೆ ಶಿವಕುಮಾರ್ ರವರು ಬೇಸತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅದರಲ್ಲಿಯೂ ಇರುವ ಎಲ್ಲಾ ಪ್ರತಿಷ್ಠಿತ ಹುದ್ದೆಗಳನ್ನು ಸಿದ್ದರಾಮಯ್ಯ ರವರು ತಮ್ಮ ಬಳಿ ಅಥವಾ ತಮ್ಮ ಬೆಂಬಲಿಗರ ಬಳಿ ಮಾತ್ರ ಉಳಿಸಿಕೊಂಡು ಉಳಿದ ಹಲವಾರು ಹಿರಿಯ ನಾಯಕರಿಗೆ ಯಾವುದೇ ರೀತಿಯ ಜವಾಬ್ದಾರಿಗಳನ್ನು ನೀಡದೆ ಪಕ್ಷವನ್ನು ಸಂಪೂರ್ಣವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಭಾರಿ ಲಾಬಿ ನಡೆಸಿದ ಸಿದ್ದರಾಮಯ್ಯ ರವರು, ಪರಮೇಶ್ವರ್, ಹೆಚ್ ಕೆ ಪಾಟೀಲ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಎದುರು ಹಾಕಿಕೊಂಡು ಶಾಸಕಾಂಗ ಸಭೆ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನ ಎರಡನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟ ಕೂಡ ಸಿದ್ದರಾಮಯ್ಯ ರವರ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡಿರುವ ದಿನೇಶ್ ಗುಂಡೂರಾವ್ ರವರ ಬಳಿ ಇದೆ. ಈ ಮೂಲಕ ಪಕ್ಷದಲ್ಲಿರುವ ಉನ್ನತ ಹುದ್ದೆಗಳನ್ನು ತಮಗೆ ಅಥವಾ ತಮ್ಮ ಬೆಂಬಲಿಗರಿಗೆ ಮಾತ್ರ ಹೈಕಮಾಂಡ್ ಜವಾಬ್ದಾರಿ ನೀಡುವಂತೆ ಸಿದ್ದರಾಮಯ್ಯ ರವರು ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಸಾಮಾನ್ಯವಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಷ್ಠಿತ ಸ್ಥಾನದ ಹುದ್ದೆಯ ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್ ಅವರು ಸಹ ಅಸಮಾಧಾನಗೊಂಡಿದ್ದಾರೆ. ಅದೇ ಕಾರಣಕ್ಕಾಗಿ ತಾವು ತಿಹಾರ್ ಜೈಲಿನಿಂದ ಬಿಡುಗಡೆಗೊಂಡರೂ ಸಹ ಬೆಂಗಳೂರಿಗೆ ಬಾರದೆ ದೆಹಲಿಯಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಹಲವಾರು ಹಿರಿಯ ಕಾಂಗ್ರೆಸ್ಸಿಗರ ಜೊತೆ ಸರಣಿ ಸಭೆಗಳನ್ನು ನಡೆಸಿ, ಸಿದ್ದರಾಮಯ್ಯರವರು ನಿರ್ವಹಣೆ ಮಾಡುತ್ತಿರುವ ಪ್ರತಿಪಕ್ಷ ನಾಯಕನ ಸ್ಥಾನ ಅಥವಾ ದಿನೇಶ್ ಗುಂಡೂರಾವ್ ರವರು ನಿರ್ವಹಣೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟವನ್ನು ತನಗೆ ನೀಡಬೇಕು ಎಂದು ಲಾಬಿ ನಡೆಸಿದ್ದಾರೆ.

ಈ ಮನವಿಗೆ ಸೋನಿಯಾ ಗಾಂಧಿ ರವರ ಪ್ರತಿಕ್ರಿಯೆ ಅಧಿಕೃತವಾಗಿ ಇನ್ನೂ ಹೊರಬಿದ್ದಿಲ್ಲ. ಆದರೂ ಡಿಕೆ ಶಿವಕುಮಾರ್ ರವರು ಶಾಸಕಾಂಗ ನಾಯಕನ ಸ್ಥಾನ, ಪ್ರತಿಪಕ್ಷ ನಾಯಕನ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟಕ್ಕೆ ಏರಲಿದ್ದಾರೆ ಎಂಬ ಬಲವಾದ ಮಾತುಗಳು ಕೇಳಿಬಂದಿವೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ರವರ ಪಟ್ಟು ಕೊಂಚ ಕಡಿಮೆಯಾಗಲಿದೆ ಹಾಗೂ ಸಿದ್ದರಾಮಯ್ಯರವರ ವಿರುದ್ಧ ತೊಡೆ ತಟ್ಟಿರುವ ಹಲವಾರು ಹಿರಿಯ ಕಾಂಗ್ರೆಸ್ಸಿಗರು ಪಕ್ಷದ ಮೇಲಿನ ಅಸಮಾಧಾನವನ್ನು ಕೊಂಚ ಕಡಿಮೆ ಮಾಡಿಕೊಳ್ಳಲಿದ್ದಾರೆ. ಆದರೆ ಒಂದು ವೇಳೆ ಇದೇ ರೀತಿ ನಡೆದಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಛಾಪು ಮೂಡಿಸಿ ಕೊಂಡು ಭಾರಿ ಬೆಂಬಲವನ್ನು ಹೊಂದಿರುವ ಸಿದ್ದರಾಮಯ್ಯರವರು ಅಸಮಾಧಾನ ಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ನೀಡಿದರೆ ಸಿದ್ದರಾಮಯ್ಯರವರು ಅಸಮಾಧಾನ ಗೊಳ್ಳುತ್ತಾರೆ ಒಂದು ವೇಳೆ ನೀಡದೇ ಹೋದರೆ ಈಗಾಗಲೇ ಸಿದ್ದರಾಮಯ್ಯರವರ ವಿರುದ್ಧ ಕಿಡಿ ಕಾರುತ್ತಿರುವ ಹಿರಿಯ ನಾಯಕರ ಸಾಲಿಗೆ ಡಿಕೆ ಶಿವಕುಮಾರ್ ಅವರು ಸೇರಿಕೊಳ್ಳುತ್ತಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.