ಸುಮಲತಾರವರ ಮನವಿಗೆ ಸ್ಪಂದಿಸಿದ ಪೀಯುಷ್ ಗೊಯಲ್, ಮಂಡ್ಯ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಸುಮಲತಾರವರ ಮನವಿಗೆ ಸ್ಪಂದಿಸಿದ ಪೀಯುಷ್ ಗೊಯಲ್, ಮಂಡ್ಯ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಇದೀಗ ಮತ್ತೊಂದು ವಿಚಾರದಲ್ಲಿ ಸುಮಲತಾ ಅಂಬರೀಶ್ ಅವರು ಮಂಡ್ಯ ಮಹಿಳೆಯರಿಗೆ ಒಳ್ಳೆಯ ಸುದ್ದಿಯನ್ನು ನೀಡಿದ್ದಾರೆ. ಸಂಸದೆಯಾಗುವ ಮುನ್ನ ಹಲವಾರು ಕಠಿಣ ಟೀಕೆಗಳನ್ನು ಎದುರಿಸಿ ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ ಗೆದ್ದು ಬಂದಿರುವ ಸುಮಲತಾ ಅಂಬರೀಶ್ ರವರು ತಮ್ಮ ಸ್ಥಾನಕ್ಕೆ ತಕ್ಕಂತೆ ಈಗಾಗಲೇ ಹಲವಾರು ಬಾರಿ ಮಂಡ್ಯ ಜಿಲ್ಲೆಯ ಜನರ ಕೂಗಿಗೆ ಸ್ಪಂದನೆ ನೀಡಿ ಕೇಂದ್ರ ಸರ್ಕಾರದಿಂದ ಹಲವಾರು ವಿಷಯಗಳಲ್ಲಿ ಅನುಮೋದನೆ ಪಡೆದುಕೊಂಡು ಮಂಡ್ಯ ಜನರು ತಮ್ಮನ್ನು ಯಾಕೆ ಸಂಸದ ಸ್ಥಾನಕ್ಕೆ ಏರಿಸಿದರು ಎಂಬುದಕ್ಕೆ ತಮ್ಮ ಕಾರ್ಯಗಳ ಮೂಲಕ ಉತ್ತರ ನೀಡುತ್ತಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಗೆ ವೈದ್ಯಕೀಯ ಕಾಲೇಜುಗಳು, ಕೆಆರ್ಎಸ್ ಅಣೆಕಟ್ಟಿನ ವ್ಯಾಪ್ತಿಯಲ್ಲಿ ನಡೆಯುವ ಗಣಿಗಾರಿಕೆ, ಈಗಾಗಲೇ ನಡೆಯುತ್ತಿರುವ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಬೇಕಾದ ಅನುದಾನ ಹಾಗೂ ಮತ್ತಷ್ಟು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಕದ ತಟ್ಟಿ ಪರಿಹಾರ ಕಂಡಿಕೊಂಡಿರುವ ಸುಮಲತಾ ಅಂಬರೀಶ್ ಅವರು ಇತ್ತೀಚಿಗಷ್ಟೇ ಮಂಡ್ಯ ಜಿಲ್ಲೆಯ ಮಹಿಳೆಯರ ಕಷ್ಟವನ್ನು ಕೇಂದ್ರದ ಮುಂದೆ ಇಟ್ಟಿದ್ದರು.

ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಮಂಡ್ಯ , ಮೈಸೂರು ಹಾಗೂ ಬೆಂಗಳೂರಿನ ನಡುವೆ ಸಾವಿರಾರು ಮಹಿಳೆಯರು ಪ್ರತಿ ದಿನ ರೈಲಿನಲ್ಲಿ ಸಂಚಾರ ಮಾಡುತ್ತಾರೆ. ಇದೀಗ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಹೆಚ್ಚಾಗಿದೆ. ಆದರೂ ಸಹ ಪ್ರತಿ ದಿನ ಸಾವಿರಾರು ಜನ ಪ್ರಯಾಣ ಮಾಡುವ ಕಾರಣ ಮಹಿಳೆಯರಿಗೆ ರೈಲಿನಲ್ಲಿ ಸಂಚಾರ ಮಾಡುವುದು ಸುಲಭದ ಕೆಲಸವಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡ ಸುಮಲತಾ ಅಂಬರೀಶ್ ಅವರು ಕೇಂದ್ರ ರೈಲ್ವೆ ಸಚಿವರಾಗಿರುವ ಪಿಯುಷ್ ಗೊಯಲ್ ಹಾಗೂ ರಾಜ್ಯದ ರೈಲ್ವೆ ಮಂತ್ರಿಯಾಗಿರುವ ಸುರೇಶ್ ಅಂಗಡಿ ರವರ ಬಳಿ ಈ ಸಮಸ್ಯೆಯ ಕುರಿತು ಪರಿಹಾರ ಒದಗಿಸಲು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪಿಯುಸಿ ಗೋಯಲ್ ರವರು ಇನ್ನು ಮುಂದೆ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನ ಮಾರ್ಗದಲ್ಲಿ ಓಡಾಡುವ MEMU ಹಾಗೂ DEMU ರೈಲುಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಮಹಿಳಾ ಬೋಗಿಗಳನ್ನು ಕಾಯ್ದಿರಿಸಲು ಅನುಮೋದನೆ ನೀಡಿದ್ದಾರೆ.. ಈ ಕುರಿತಂತೆ ಆದೇಶ ಹೊರಬಿದ್ದಿದ್ದು ಇನ್ನು ಮುಂದೆ ಈ ಮಾರ್ಗದಲ್ಲಿ ಮಹಿಳೆಯರಿಗೆ ವಿಶೇಷ ಬೋಗಿಗಳಲ್ಲಿ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.