ಡಿಕೆಶಿ ಬಿಡುಗಡೆ ಬೆನ್ನಲ್ಲೇ ಸಿದ್ದುಗೆ ಬಿಗ್ ಶಾಕ್ ನೀಡಲು ಮುಂದಾದ ಸೋನಿಯಾ??

ಡಿಕೆಶಿ ಬಿಡುಗಡೆ ಬೆನ್ನಲ್ಲೇ ಸಿದ್ದುಗೆ ಬಿಗ್ ಶಾಕ್ ನೀಡಲು ಮುಂದಾದ ಸೋನಿಯಾ??

ಇಷ್ಟು ದಿವಸ ಕಾಂಗ್ರೆಸ್ ಪಕ್ಷದಲ್ಲಿ ನಾಯಕನಾಗಿ ಮೆರೆದಿದ್ದ ಸಿದ್ದರಾಮಯ್ಯ ರವರಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಸವಾಲುಗಳು ತಮ್ಮ ಪಕ್ಷದ ಒಳಗಡೆಯಿಂದ ಎದುರಾಗುತ್ತಿವೆ. ಪ್ರತಿಪಕ್ಷ ಸ್ಥಾನದ ನಾಯಕನ ಸ್ಥಾನ ಪಡೆಯಲು ಶಾಸಕರನ್ನು ಒಗ್ಗೂಡಿಸಿಕೊಂಡು ಬಲ ಪ್ರದರ್ಶನ ಮಾಡಿ ಹೈಕಮಾಂಡ್ ನ ಬಳಿ ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ಲಾಬಿ ನಡೆಸುವಂತಹ ಪರಿಸ್ಥಿತಿ ಇತ್ತೀಚೆಗೆ ಎದುರಾಗಿತ್ತು. ಅದೇಗೋ ಕೊನೆಗೂ ಸಿದ್ದರಾಮಯ್ಯ ರವರು ಕಾಂಗ್ರೆಸ್ ಪಕ್ಷದ ಮತ್ತೊಂದು ಪ್ರಬಲ ಗುಂಪಿನ ವಿರುದ್ಧ ಗೆದ್ದು ಬೀಗಿ, ಸೋನಿಯಾಗಾಂಧಿ ರವರು ತಮ್ಮನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಮಾಡಿದ್ದರು. ಆದರೆ ಸಿದ್ದರಾಮಯ್ಯರವರು ಇಷ್ಟೆಲ್ಲಾ ಲಾಬಿ ನಡೆಸಿ, ಹಲವಾರು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ತನ್ನ ಬಳಿ ಇರುವ ಶಾಸಕರನ್ನು ಒಟ್ಟುಗೂಡಿಸಿಕೊಂಡು ಬಲ ಪ್ರದರ್ಶನ ಮಾಡಿದ ಪ್ರಯತ್ನಗಳೆಲ್ಲವೂ ಇದೀಗ ವಿಫಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣ ಜೈಲಿನಿಂದ ಬಿಡುಗಡೆಯಾಗುತ್ತಿರುವ ಡಿಕೆ ಶಿವಕುಮಾರ್.

ಹೌದು ಡಿಕೆ ಶಿವಕುಮಾರ್ ಅವರು ಇದೀಗ ತಿಹಾರ್ ಜೈಲಿನಿಂದ ಬಿಡುಗಡೆ ಭಾಗ್ಯ ಪಡೆದು ಕೊಂಡಿದ್ದಾರೆ. ಇಡಿ ಅಧಿಕಾರಿಗಳು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಜಾಮೀನು ವಾಪಸ್ಸು ಪಡೆದುಕೊಳ್ಳುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆ. ಆದರೆ ಮೊದಲಿನಿಂದಲೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಿಕೆ ಶಿವಕುಮಾರ್ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಅರ್ಹ ವ್ಯಕ್ತಿ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬರುತ್ತಿದ್ದವು. ಹಲವಾರು ಬಾರಿ ಮೈತ್ರಿ ಸರ್ಕಾರ ವನ್ನು ಉಳಿಸಿ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನ ಬಳಿ ತನ್ನ ಬಲ ಪ್ರದರ್ಶನ ಮಾಡಿದ್ದ ಡಿಕೆ ಶಿವಕುಮಾರ್ ರವರು ಇಡೀ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಕಾಡೆ ಮಲಗಿದರೂ ಕೇವಲ ತಮ್ಮ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ ಈ ಹಿಂದೆ ನಡೆದ ಉಪ ಚುನಾವಣೆಗಳಲ್ಲಿ ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡು ಬಿಜೆಪಿ ಪಕ್ಷದ ಕೆಲವು ಭದ್ರ ಕೋಟೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಟ್ಟಿದ್ದರು.

ಈ ಎಲ್ಲಾ ಕಾರಣಗಳಿಂದ ಇದೀಗ ಸೋನಿಯಾ ಗಾಂಧಿ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಶಾಸಕಾಂಗ ಸಭೆಯ ನಾಯಕರಾಗಿರುವ ಸಿದ್ದರಾಮಯ್ಯ ರವರಿಗೆ ಪ್ರತಿಪಕ್ಷ ನಾಯಕನ ಸ್ಥಾನದಿಂದ ರಾಜೀನಾಮೆ ನೀಡುವಂತೆ ಒತ್ತಡ ಹೇರಿ ಆ ಸ್ಥಾನದಲ್ಲಿ ಡಿಕೆ ಶಿವಕುಮಾರ್ ಅವರನ್ನು ಕೂರಿಸಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಟಾಸ್ಕ್ ನೀಡುವುದು ಸೋನಿಯಾ ಗಾಂಧಿ ರವರ ಪ್ರಮುಖ ಉದ್ದೇಶವಾಗಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಸಿದ್ದರಾಮಯ್ಯ ರವರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಹಾಗೂ ಒಂದು ವೇಳೆ ಸೋನಿಯಾ ಗಾಂಧಿ ಅವರು ಆದೇಶ ಹೊರಡಿಸಿದರೇ ಸಿದ್ದರಾಮಯ್ಯರ ವರ  ಮುಂದಿನ ನಿರ್ಧಾರ ಏನಾಗಿರುತ್ತದೆ ಎಂಬುದರ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಹೊರಗಡೆ ಬಂದ ತಕ್ಷಣ ಇದೀಗ ಸಿದ್ದರಾಮಯ್ಯರವರಿಗೆ ಕಂಟಕ ಎದುರಾಗಿದೆ.