ಎಂಟಿಬಿ ನಾಗರಾಜ್ ರವರಿಗೆ ಭರ್ಜರಿ ಸಿಹಿಸುದ್ದಿ ! ಸಿದ್ದುಗೆ ಮುಖಭಂಗ ತರಿಸಲು ಸಿದ್ದರಾದ ನಾಗರಾಜ್ ರವರಿಗೆ ಆನೆಬಲ

ಎಂಟಿಬಿ ನಾಗರಾಜ್ ರವರಿಗೆ ಭರ್ಜರಿ ಸಿಹಿಸುದ್ದಿ ! ಸಿದ್ದುಗೆ ಮುಖಭಂಗ ತರಿಸಲು ಸಿದ್ದರಾದ ನಾಗರಾಜ್ ರವರಿಗೆ ಆನೆಬಲ

ಅನರ್ಹ ಶಾಸಕರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಸುಪ್ರೀಂಕೋರ್ಟ್ ಅನುವು ಮಾಡಿಕೊಟ್ಟರೆ ಎಲ್ಲಾ 15 ಶಾಸಕರಿಗೂ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಒಂದು ವೇಳೆ ಅದೇ ನಡೆದಲ್ಲಿ ಬಿಜೆಪಿ ಪಕ್ಷದಲ್ಲಿ ಬಂಡಾಯ ಏಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕಿದ್ದಾರೆ. ಯಾಕೆಂದರೆ ಅದೇ ಕ್ಷೇತ್ರದಲ್ಲಿ ಇದೇ ನಾಯಕರ ವಿರುದ್ಧ ಇಷ್ಟು ದಿವಸ ಬದ್ದ ವೈರಿಗಳಂತೆ ಹೋರಾಟ ಮಾಡಿ ಶಾಸಕರನ್ನು ಸೋಲಿಸಲು ಹರಸಾಹಸ ಪಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರಿಗೆ ಇದೀಗ ಬಿಜೆಪಿ ಪಕ್ಷದ ಹೈಕಮಾಂಡ್ ಕ್ಯಾರೆ ಎನ್ನದೆ ಅನರ್ಹ ಶಾಸಕರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಬಂಡಾಯ ಹೇಳುವ ನಾಯಕರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಲೆಕ್ಕಾಚಾರಗಳು ಈಗಾಗಲೇ ಕೇಳಿಬಂದಿವೆ. ಈ ಲೆಕ್ಕಾಚಾರಗಳಿಗೆ ಪೂರಕವೆಂಬಂತೆ ಹಲವಾರು ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್ ಘೋಷಣೆ ಹಾಗುವ ಮುನ್ನವೇ ಕೆಲವು ನಾಯಕರು ಬಂಡಾಯದ ಮಾತುಗಳನ್ನು ಆಡಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಬಂಡಾಯವನ್ನು ತಮ್ಮ ಲಾಭವನ್ನು ಆಗಿ ಪರಿವರ್ತನೆ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಅದರಲ್ಲಿಯೂ ಸಿದ್ದರಾಮಯ್ಯರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಎಲ್ಲಾ ಅನರ್ಹ ಶಾಸಕರು ಇದೀಗ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಕಾರಣ ಸಿದ್ದರಾಮಯ್ಯ ರವರು ಹೇಗಾದರೂ ಮಾಡಿ ಎಲ್ಲರನ್ನು ಸೋಲಿಸಬೇಕು ಎಂದು ಪಣತೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣದಿಂದ ಬಹುತೇಕ ಕ್ಷೇತ್ರಗಳಲ್ಲಿ ಬಂಡಾಯ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಇತ್ತೀಚೆಗಷ್ಟೇ ಬಹಿರಂಗವಾಗಿ ಸಿದ್ದರಾಮಯ್ಯ ರವರು ಈ ಕುರಿತು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ರವರಿಗೆ ಬಹಳ ಆಪ್ತರಾಗಿದ್ದ ಎಂ ಟಿ ಬಿ ನಾಗರಾಜ್ ಅವರನ್ನು ಸೋಲಿಸಿ ತೀರುತ್ತೇನೆ ಎಂದು ಇತ್ತೀಚೆಗೆ ಸಿದ್ದರಾಮಯ್ಯ ರವರು ಬಹಿರಂಗವಾಗಿ ಶಪಥ ಮಾಡಿದ್ದರು.

ಆದರೆ ಇದೀಗ ಸಿದ್ದರಾಮಯ್ಯರವರ ಲೆಕ್ಕಾಚಾರಗಳು ಉಲ್ಟಾ ಹೊಡೆದಿದೆ, ಇದೀಗ ಇದರ ಕುರಿತು ಮಾತನಾಡಿರುವ ಹೊಸಕೋಟೆ ಕ್ಷೇತ್ರದ ಬಿಜೆಪಿ ನಾಯಕರು ಮೋದಿ ಅವರ ಕಾರ್ಯವೈಖರಿ ಹಾಗೂ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡು ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಂಟಿಬಿ ನಾಗರಾಜರವರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಲು ಒಪ್ಪಿದ್ದರೆ, ಯಾವುದೇ ತಕರಾರಿಲ್ಲದೆ ಎಂ ಟಿ ಬಿ ನಾಗರಾಜ್ ರವರಿಗೆ ಬಿಜೆಪಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬೆಂಬಲ ನೀಡುತ್ತೇವೆ ಎಂದು ಬಹಿರಂಗವಾಗಿ ಎಂ ಟಿ ಬಿ ನಾಗರಾಜ್ ರವರ ಉಪಸ್ಥಿತರಿದ್ದ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಯಾವುದೇ ಅಭ್ಯರ್ಥಿ ಸ್ಪರ್ಧೆ ಮಾಡಿದರೂ ಪಕ್ಷವನ್ನು ಬಿಟ್ಟು ಬೇರೊಂದು ಅಭ್ಯರ್ಥಿಗೆ ಬೆಂಬಲ ಸೂಚಿಸುವ ಮಾತೇ ಬರುವುದಿಲ್ಲ ಎಂದು ಬಿಜೆಪಿ ಬೆಂಬಲಿಗರು ಹಾಗೂ ಕಾರ್ಯಕರ್ತರು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಎಮ್ ಟಿ ಬಿ ನಾಗರಾಜ್ ರವರು, ಈಗಾಗಲೇ ಬಿಜೆಪಿ ಪಕ್ಷದ ನಾಯಕರು ನನಗೆ ಬೆಂಬಲ ಸೂಚಿಸಿದ್ದಾರೆ ಮತ್ತೊಮ್ಮೆ ಇದೇ ಕ್ಷೇತ್ರದಲ್ಲಿ ನಾನು ಶಾಸಕನಾಗುತ್ತೇನೆ ಎಂದಿದ್ದಾರೆ.