50 ವರ್ಷ ದಾಟಿತು ಎಂದು ಟ್ರೋಲ್ ಮಾಡಿದ ಇಂಗ್ಲೆಂಡ್ ಆಟಗಾರನಿಗೆ ಡ್ಯಾಶಿಂಗ್ ಓಪನರ್ ಮಾತಿನ ಮೂಲಕ ತಿರುಗೇಟು ನೀಡಿದ್ದು ಹೇಗೆ ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭ ಮಾಡಿದ ವೀರೇಂದ್ರ ಸೆಹ್ವಾಗ್ ರವರು ತಮ್ಮ ಅದ್ವಿತೀಯ ಹಾಗೂ ಆಕ್ರಮಣಕಾರಿ ಆಟದ ಮೂಲಕ ಆರಂಭಿಕನಾಗಿ ಬಡ್ತಿ ಪಡೆದು, ತದ ನಂತರ ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. ವಿಶ್ವದಲ್ಲಿಯೇ ಭಯವಿಲ್ಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ವೀರೇಂದ್ರ ಸೆಹ್ವಾಗ್ ರವರು ಮೊದಲ ಎಸೆತ ಗಳಿಂದಲೇ ಬೌಲರ್ಗಳಿಗೆ ಬೌಂಡರಿ ಬಾರಿಸುವುದರಲ್ಲಿ ನಿರತರಾಗಿರುತ್ತಿದ್ದರು. ಇನ್ನು ಮೈದಾನದಲ್ಲಿ ಸಿಕ್ಸರ್ ಬಾರಿಸಿದಂತೆ ಮೈದಾನದಿಂದ ನಿವೃತ್ತಿ ಪಡೆದುಕೊಂಡ ಮೇಲು ದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಸರ್ ಬಾರಿಸುವುದರಲ್ಲಿ ಡ್ಯಾಶಿಂಗ್ ಓಪನರ್ ಅಷ್ಟೇ ಪ್ರಸಿದ್ಧರು. ಅದರಲ್ಲಿಯೂ ಯಾರಾದರೂ ಕಾಲೆಳೆಯಲು ಪ್ರಯತ್ನಪಟ್ಟರೇ ವ್ಯಂಗ್ಯದ ಮಾತುಗಳನ್ನು ಆಡಿ ಸರಿಯಾಗಿ ಟ್ರೊಲ್ ಮಾಡುತ್ತಾರೆ.

ಇದೀಗ ಇದರ ಸಾಲಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾಗನ್ ರವರು ಸೇರಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರುವ ವೀರೇಂದ್ರ ಸೆಹ್ವಾಗ್ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಶುಭಾಶಯಗಳು ಹರಿದು ಬಂದಿದ್ದವು. ಎಲ್ಲಾ ಕ್ರಿಕೆಟ್ ಆಟಗಾರರ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟು ಕೊಂಡಿರುವ ವೀರೇಂದ್ರ ಸೆಹ್ವಾಗ್ ಅವರು ಅದೇ ರೀತಿ ದೇಶದ ಮೂಲೆ ಮೂಲೆಯ ಅಭಿಮಾನಿಗಳ ಜೊತೆಯು ಸಹ ಸಾಮಾನ್ಯನಂತೆ ಅರ್ಥ ಭರಿತವಾದ ಎಲ್ಲಾ ಪೋಸ್ಟ್ ಗಳಿಗೆ ರಿಪ್ಲೈ ಮಾಡುವ ಮೂಲಕ ನಮ್ಮಲ್ಲಿ ಒಬ್ಬರಾಗಿದ್ದಾರೆ.ಇದೇ ನಿಟ್ಟಿನಲ್ಲಿ ಹುಟ್ಟು ಹಬ್ಬದ ಸಂದರ್ಭವಾಗಿ ವಿಶ್ವದ ಹಲವಾರು ದಿಗ್ಗಜ ನಾಯಕರು ವೀರೇಂದ್ರ ಸೆಹ್ವಾಗ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿರುವ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾಗನ್ ರವರು ನಿಮಗೆ ಐವತ್ತು ವರ್ಷ ಆಗಿದೆ, ಹುಟ್ಟುಹಬ್ಬದ ಶುಭಾಶಯಗಳು ಎಂದು ವೀರೇಂದ್ರ ಸೆಹ್ವಾಗ್ ರವರಿಗೆ ವಯಸ್ಸಾಗಿದೆ ಎಂಬಂತೆ ವ್ಯಂಗ್ಯಭರಿತ ಮಾತುಗಳನ್ನು ಆಡಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ವೀರೇಂದ್ರ ಸೆಹ್ವಾಗ್ ರವರು ಟ್ವಿಟರ್ನಲ್ಲಿ ಮೈಕಲ್ ವಾಗನ್ ರವರಿಗೆ ಮಾತಿನಲ್ಲಿಯೇ ತಿರುಗೇಟು ನೀಡಿದ್ದಾರೆ. ಮೈಕಲ್ ವಾಗನ್ ರವರ ಟ್ವೀಟ್ ಗೆ ರಿಪ್ಲೈ ಮಾಡಿರುವ ವೀರೇಂದ್ರ ಸೆಹ್ವಾಗ್ ರವರು ಶುಭಾಶಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು, ನೀವು ಹೇಗೆ ನನ್ನ ವಯಸ್ಸನ್ನು ಟ್ರ್ಯಾಕ್ ಮಾಡುತ್ತೀರಾ? ನಾನು ವಯಸ್ಸೆ ಇಲ್ಲದ ಹಾಗೂ ಸಮಯವಿಲ್ಲದ ವ್ಯಕ್ತಿ ಎಂದು ಕಾಲೆಳೆದಿದ್ದಾರೆ. ಮೈಕಲ್ ವಾಗನ್ ರವರನ್ನು ಇತ್ತೀಚಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಯಾವುದೇ ಪರ್ಮನೆಂಟ್ ಕೆಲಸ ನೀಡದೆ ಅಲೆದಾಡಿಸುತ್ತಿದೆ, ಆದ ಕಾರಣದಿಂದ ಬಹಳ ಫ್ರೀ ಆಗಿ ಇದ್ದಾರೆ ಎಂದು ಇತ್ತೀಚೆಗೆ ಮೈಕಲ್ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು, ಇದನ್ನೇ ಇದೀಗ ವ್ಯಂಗ್ಯಭರಿತ ಮಾತುಗಳ ಮೂಲಕ ನನಗೆ ಸಮಯವಿಲ್ಲ ಎಂಬರ್ಥದಲ್ಲಿ ನಿಮಗೆ ಸಾಕಷ್ಟು ಸಮಯವಿದೆ ಎಂದು ವೀರೇಂದ್ರ ಸೆಹ್ವಾಗ್ ರವರು ಕಾಲೆಳೆದಿದ್ದಾರೆ.

Post Author: Ravi Yadav