ಬಯಲಾಯಿತು ಚುನಾವಣೋತ್ತರ ಸಮೀಕ್ಷೆ ! ಗೆಲುವಿನ ಕನಸ್ಸು ಕಂಡಿದ್ದ ಕಾಂಗ್ರೆಸ್ ಪಕ್ಷದ ಸ್ಥಿತಿ ಅಧೋಗತಿ ! ಬಿಜೆಪಿ-ಶಿವಸೇನೆಯ ಹೊಡೆತಕ್ಕೆ ಕಾಂಗ್ರೆಸ್ ಮಕಾಡೆ ಮಲಗಿದ್ದು ಹೇಗೆ ಗೊತ್ತಾ??

ಬಯಲಾಯಿತು ಚುನಾವಣೋತ್ತರ ಸಮೀಕ್ಷೆ ! ಗೆಲುವಿನ ಕನಸ್ಸು ಕಂಡಿದ್ದ ಕಾಂಗ್ರೆಸ್ ಪಕ್ಷದ ಸ್ಥಿತಿ ಅಧೋಗತಿ ! ಬಿಜೆಪಿ-ಶಿವಸೇನೆಯ ಹೊಡೆತಕ್ಕೆ ಕಾಂಗ್ರೆಸ್ ಮಕಾಡೆ ಮಲಗಿದ್ದು ಹೇಗೆ ಗೊತ್ತಾ??

ಕಳೆದ ಪಂಚ ರಾಜ್ಯ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಲು ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷವು ಇದೀಗ ನಡೆಯುತ್ತಿರುವ ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಗಳಲ್ಲಿ ಅಧಿಕಾರಕ್ಕೆ ಏರುವ ಕನಸು ಕಂಡಿತ್ತು. ದೇಶದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದೆ, ಇದಕ್ಕೆ ನರೇಂದ್ರ ಮೋದಿರವರು ಕಾರಣ ಎನ್ನುತ್ತಾ ಟೀಕೆಗಳ ಬಾಣಗಳನ್ನು ಸುರಿಸಿದ ಕಾಂಗ್ರೆಸ್ ಪಕ್ಷವು, ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯ ಸಂದರ್ಭದಲ್ಲಿ ಹಲವಾರು ಟೀಕೆಗಳನ್ನು ಬಿಜೆಪಿ ಪಕ್ಷದ ಮೇಲೆ ಬಿಟ್ಟಿದ್ದರು. ನರೇಂದ್ರ ಮೋದಿ ರವರು ಪ್ರಧಾನಿಯಾಗುತ್ತಾರೆ ಎಂಬ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನರು ಮತ ನೀಡಿದ್ದಾರೆ, ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಲಾಭವಿಲ್ಲ ಎಂದು ಜನರಿಗೆ ತಿಳಿದಿದೆ. ಆದಕಾರಣ ಈ ಬಾರಿ ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲಿದೆ ಎಂದು ಎಲ್ಲಾ ನಾಯಕರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಘೋಷಣೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಮುಳುಗುತ್ತಿರುವ ಹಡಗಿನಂತಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಎರಡು ರಾಜ್ಯಗಳ ಚುನಾವಣೆ ಬಾರಿ ಮುಖ್ಯವಾಗಿತ್ತು. ಹಲವಾರು ಕನಸುಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಾರಿ ದೊಡ್ಡ ಹೊಡೆತ ಬಿದ್ದಿದೆ.

ಮಹಾರಾಷ್ಟ್ರದಲ್ಲಿ ಎನ್ಸಿಪಿ ಪಕ್ಷದ ಜೊತೆ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದಿರುವ ಕಾಂಗ್ರೆಸ್ ಪಕ್ಷವು ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ದೇಶದ ಆರ್ಥಿಕತೆಯ ಕುರಿತು ಹಾಗೂ ಮಹಾರಾಷ್ಟ್ರ ಸರ್ಕಾರವು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕೆಗಳ ಬಾಣಗಳನ್ನು ಸುರಿಸಿದ ಮೇಲೆ ಕಾಂಗ್ರೆಸ್ ಪಕ್ಷವು ಕೊಂಚ ಪುಟಿದೇಳುವ ಕನಸು ಕಂಡಿತ್ತು. ಅಧಿಕಾರಕ್ಕೆ ಏರದೇ ಇದ್ದರೂ ಭದ್ರವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳಿಗೆ ಕನಿಷ್ಠ ಕಠಿಣ ವಿರೋಧವನ್ನು ನೀಡಬೇಕು ಎಂದು ಇನ್ನಿಲ್ಲದ ತಯಾರಿ ನಡೆಸಿತ್ತು. ಅದೇ ಕಾರಣಕ್ಕಾಗಿ ಹಲವಾರು ಸಭೆಗಳನ್ನು ನಡೆಸಿದ್ದ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಭರ್ಜರಿ ಆಫರ್ ಗಳನ್ನು ನೀಡಿತ್ತು. ಆದರೆ ಇದ್ಯಾವುದಕ್ಕೂ ಮತದಾರ ಸೊಪ್ಪು ಹಾಕಿಲ್ಲ ಎಂಬುದು ಚುನಾವಣೋತ್ತರ ಸಮೀಕ್ಷೆಗಳಿಂದ ತಿಳಿದುಬಂದಿದೆ. ದೇಶದ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ಈ ಕೆಳಗಿನಂತಿದೆ. ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಮಕಾಡೆ ಮಲಗುವುದು ಬಹುತೇಕ ಖಚಿತವಾಗಿದೆ, ಹರಿಯಾಣ ರಾಜ್ಯದಲ್ಲಂತೂ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಒಂದಂಕಿ ತಲುಪಿದೆ.

ಮಹಾರಾಷ್ಟ್ರದಲ್ಲಿ, ರಿಪಬ್ಲಿಕ್ ಹಾಗೂ ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಬಿಜೆಪಿ-ಶಿವಸೇನಾ ಪಕ್ಷಗಳು 223 ಹಾಗೂ ಕಾಂಗ್ರೆಸ್ – ಎನ್ಸಿಪಿ 54, ಇತರರು 11 ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಸ್18 ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 243, ಕಾಂಗ್ರೆಸ್ ಪಕ್ಷವು 41 ಹಾಗೂ ಇತರರು 4 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ. ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿಕೂಟವು 230, ಕಾಂಗ್ರೆಸ್ ಮೈತ್ರಿ ಕೂಟವು 48 ಹಾಗೂ ಇತರರು 10 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ. ಇಂಡಿಯಾ ಟುಡೇ ಹಾಗೂ ಮೈ ಆಕ್ಸೆಸ್ ಜಂಟಿ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟವು 166-194, ಕಾಂಗ್ರೆಸ್ ಮೈತ್ರಿ ಕೂಟವು 72-90 ಹಾಗೂ ಇತರರು 22-34 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ. ಇನ್ನುಳಿದಂತೆ ಎಬಿಪಿ ಹಾಗೂ c-voter ಜಂಟಿ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟ 204 ಸೀಟುಗಳಲ್ಲಿ, ಕಾಂಗ್ರೆಸ್ ಪಕ್ಷವು 69 ಸೀಟುಗಳಲ್ಲಿ ಹಾಗೂ ಇತರರು 15 ಸೀಟುಗಳಲ್ಲಿ ಗೆಲುವು ಕಾಣಲಿದ್ದಾರೆ. ಟಿವಿ9 ಹಾಗೂ CICERO ಸಂಸ್ಥೆಗಳು ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು 197, ಕಾಂಗ್ರೆಸ್ ಮೈತ್ರಿಕೂಟ 75 ಹಾಗೂ ಇತರರು 16 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ.

ಇನ್ನು ಹರಿಯಾಣ ರಾಜ್ಯದಲ್ಲಿ ಇಂಡಿಯ ನ್ಯೂಸ್ ಸಮೀಕ್ಷೆಯ ಪ್ರಕಾರ ಬಿಜೆಪಿ ಪಕ್ಷವು 75 ರಿಂದ 80 ಸೀಟುಗಳಲ್ಲಿ ಗೆಲುವು ಕಾಣಲಿದ್ದು, ಕಾಂಗ್ರೆಸ್ ಪಕ್ಷವು ಒಂದಕ್ಕಿಗೆ ಸೀಮಿತವಾಗಲಿದೆ ಹಾಗೂ ಇತರರು ಒಂದೆರಡು ಕ್ಷೇತ್ರಗಳಲ್ಲಿ ಗೆಲುವು ಕಾಣಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ನ್ಯೂ 18 ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು 75 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದು, ಕಾಂಗ್ರೆಸ್ ಪಕ್ಷವು 10 ಸ್ಥಾನ ಹಾಗೂ ಇತರರು 5 ಸ್ಥಾನ ಪಡೆದುಕೊಳ್ಳಲಿದ್ದಾರೆ. ಟೈಮ್ಸ್ ನೌ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು 71, ಕಾಂಗ್ರೆಸ್ ಪಕ್ಷ 11 ಹಾಗೂ ಇತರರು 8 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ. ನ್ಯೂಸ್ಎಕ್ಸ್ ಸಮೀಕ್ಷೆಯು ಇದೇ ರೀತಿಯ ಫಲಿತಾಂಶವನ್ನು ಹೇಳಿದ್ದು ಬಿಜೆಪಿ ಪಕ್ಷವು 77, ಕಾಂಗ್ರೆಸ್ ಪಕ್ಷ 11 ಹಾಗೂ ಇತರರು 2 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ. ಇನ್ನು ರಿಪಬ್ಲಿಕ್ ಸಂಸ್ಥೆ ಹಾಗೂ ಜನ್ ಕಿ ಬಾತ್ ಜಂಟಿ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು ಕೊಂಚ ಕಡಿಮೆ ಸ್ಥಾನಗಳನ್ನು ಗೆಲ್ಲಲಿದ್ದು 57ಕ್ಕೆ ಸೀಮಿತವಾಗಲಿದೆ, ಕಾಂಗ್ರೆಸ್ ಪಕ್ಷವು 17 ಸ್ಥಾನಗಳನ್ನು ಗೆಲ್ಲಲಿದೆ, ಇತರರು 16 ರಲ್ಲಿ ಗೆಲುವು ಕಾಣಲಿದ್ದಾರೆ. ಇನ್ನು ಎಬಿಪಿ ಸಂಸ್ಥೆ ಹಾಗೂ ಸಿವೋಟರ್ ಜಂಟಿ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷ ಒಟ್ಟು 72 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದು, ಕಾಂಗ್ರೆಸ್ ಪಕ್ಷವು ಕೇವಲ 8 ಸ್ಥಾನಗಳಲ್ಲಿ ಮಾತ್ರ ಗೆಲುವು ಕಾಣಲಿದ್ದಾರೆ, ಇತರರು ಕಾಂಗ್ರೆಸ್ ಪಕ್ಷವನ್ನು ಮೀರಿಸಿ 10 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.