ಕೈಲಾಗದೆ ತನ್ನ ಮೈ ತಾನೇ ಪರಚಿಕೊಂಡ ಪಾಕಿಸ್ತಾನ ! ಅಂತರಾಷ್ಟ್ರೀಯ ಕಾನೂನು ಮತ್ತೊಮ್ಮೆ ಉಲ್ಲಂಘನೆ

ಕೈಲಾಗದೆ ತನ್ನ ಮೈ ತಾನೇ ಪರಚಿಕೊಂಡ ಪಾಕಿಸ್ತಾನ ! ಅಂತರಾಷ್ಟ್ರೀಯ ಕಾನೂನು ಮತ್ತೊಮ್ಮೆ ಉಲ್ಲಂಘನೆ

ಇತ್ತೀಚೆಗೆ ಪಾಕಿಸ್ತಾನದ ಅದೃಷ್ಟ ಚೆನ್ನಾಗಿ ಇಲ್ಲ ಎಂಬುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಗಡಿಯಲ್ಲಿ ಏನೇ ತೊಂದರೆ ಮಾಡಿದರೂ ಭಾರತೀಯ ಸೇನೆಯು ಮುಟ್ಟಿಕೊಂಡು ನೋಡುವಂತೆ ಉತ್ತರ ನೀಡುತ್ತಿದೆ. ಈಗಾಗಲೇ ಹಲವಾರು ಬಾರಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಬುದ್ಧಿ ಕಲಿತು ಕೊಳ್ಳುವಂತೆ ಎಚ್ಚರಿಕೆ ನೀಡಿ ತನ್ನ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿರುವ ಭಾರತೀಯ ಸೇನೆಯು ಕೆಲವು ದಿನಗಳ ಹಿಂದಷ್ಟೇ ದೀಪಾವಳಿ ಹಬ್ಬವನ್ನು ಮುಂಚಿತವಾಗಿ ಕಾಶ್ಮೀರ ಕಣಿವೆಯಲ್ಲಿ ಆಚರಣೆ ಮಾಡಿ ವಾಪಸ್ ಆಗಿತ್ತು. ಈ ವಿದ್ಯಮಾನದಿಂದ ಪಾಕಿಸ್ತಾನ ಸರ್ಕಾರವು ಮತ್ತೊಮ್ಮೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದೆ. ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಾಗದೇ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿ, ಇದರಿಂದ ಭಾರತಕ್ಕೆ ಏನೂ ನಷ್ಟವಿಲ್ಲ ಎಂಬುದನ್ನು ಮರೆತು ತನ್ನ ಮಯ್ಯನ್ನು ತಾನೇ ಪರಿಚಿ ಕೊಂಡಿದೆ. ಅಷ್ಟಕ್ಕೂ ಪಾಕಿಸ್ತಾನ ತೆಗೆದುಕೊಂಡ ನಿರ್ಧಾರ ವಾದರೂ ಏನು ಗೊತ್ತಾ?? ತಿಳಿಯಲು ಒಮ್ಮೆ ಸಂಪೂರ್ಣ ಓದಿ.

ಹೌದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದು ತಿಳಿದ ತಕ್ಷಣ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸಿ ಆರ್ಟಿಲರಿ ಗನ್ ಗಳ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಇದರಿಂದ ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ಎದುರಾಗಿದ್ದು, ಭಾರತದ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತ ಮೇಲೆ ಇದರಿಂದ ತನಗೆ ಆಗುವ ಲಾಭವೇನು ಎಂಬುದನ್ನು ಯೋಚನೆ ಮಾಡದೆ ಉಭಯ ರಾಷ್ಟ್ರಗಳ ನಡುವೆ ಅಂಚೆ ಸೇವೆಯನ್ನು ಏಕ ಪಕ್ಷೀಯವಾಗಿ ಸ್ಥಗಿತ ಮಾಡಿ ಆದೇಶ ಹೊರಡಿಸಿದೆ. ಯಾವುದೇ ದೇಶದ ಜೊತೆ ಅಂಚೆ ಸೇವೆಯನ್ನು ಮತ್ತೊಂದು ರಾಷ್ಟ್ರ ಸ್ಥಗಿತಗೊಳಿಸಬೇಕು ಎಂದರೇ ಎರಡು ರಾಷ್ಟ್ರಗಳು ಯುದ್ಧದಲ್ಲಿ ತೊಡಗಿ ಕೊಂಡಿರಬೇಕು ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಸೂಚನೆ ನೀಡಿ ಎರಡು ರಾಷ್ಟ್ರಗಳು ಒಪ್ಪಂದಕ್ಕೆ ಬಂದು ಅಂಚೆ ವ್ಯವಸ್ಥೆಯನ್ನು ನಿಲ್ಲಿಸಬೇಕು. ಆದರೆ ಪಾಕಿಸ್ತಾನವು ಭಾರತದ ದಾಳಿಗೆ ಕಂಗಾಲಾಗಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವು ಮತ್ತೊಮ್ಮೆ ನಗೆಪಾಟಲಿಗೆ ಈಡಾಗಿದೆ.