ಬಿಜೆಪಿ ಪಕ್ಷದ ಬೆಂಬಲಿಗರೇ ಸಾಕು ನಿಲ್ಲಿಸಿ, ಬಿ ಸ್ ವೈ ಅಭಿಮಾನಿಗಳನ್ನು ಪಕ್ಷದ ವಿರುದ್ಧ ಎತ್ತಿಕಟ್ಟಲು ನಡೆಸಿದ ಕುತಂತ್ರ ಬಯಲು.

ಬಿಜೆಪಿ ಪಕ್ಷದ ಬೆಂಬಲಿಗರೇ ಸಾಕು ನಿಲ್ಲಿಸಿ, ಬಿ ಸ್ ವೈ ಅಭಿಮಾನಿಗಳನ್ನು ಪಕ್ಷದ ವಿರುದ್ಧ ಎತ್ತಿಕಟ್ಟಲು ನಡೆಸಿದ ಕುತಂತ್ರ ಬಯಲು.

ಕಳೆದ ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ ಮೊದಲೇ ಊಹಿಸಿದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕ ಬಿ ಸ್ ಯಡಿಯೂರನವರು ಮುಖ್ಯಮಂತ್ರಿ ಯಾಗಿದ್ದರು, ಮೊದಲಿಂದಲೂ ಬಿಜೆಪಿ ಪಕ್ಷದ ಹೈ ಕಮಾಂಡ್ ಯಡಿಯೂರಪ್ಪನವರ ನಾಯಕತ್ವದ ಮೇಲೆ ಅಪಾರ ನಂಬಿಕೆಯನ್ನು ಇಟ್ಟಿತ್ತು, ಅದೆಷ್ಟೋ ಬಾರಿ ಬಿಜೆಪಿ ಪಕ್ಷದ ಕೆಲವು ನಾಯಕರು ಅಮಿತ್ ಶಾ ರವರ ಬಳಿ ಬಿ ಸ್ ಯಡಿಯೂರಪ್ಪನವರ ಮೇಲೆ ದೂರು ನೀಡಿದಾಗ ಯಾವುದಕ್ಕೂ ಕ್ಯಾರೇ ಎನ್ನದೆ ಅಮಿತ್ ಶಾ ರವರು ಯಡಿಯೂರಪ್ಪನವರ ಪರ ನಿಂತಿದ್ದರು. ಆದ್ದರಿಂದ ಬೇರೊಂದು ಹೆಸರು ಸಹ ಮುಖ್ಯಮಂತ್ರಿಯ ರೇಸ್ ನಲ್ಲಿ ಕೇಳಿಬರಲಿಲ್ಲ.ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರದ ಗದ್ದುಗೆ ಏರಿದ್ದರು.

ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಾಯಕತ್ವದ ಕೂಗು ಕೇಳಿಬಂದ ಕಾರಣ ಅಮಿತ್ ಶಾ ರವರು ರಾಜ್ಯದ ಹಲವಾರು ಬಿಜೆಪಿ ಮುಖಂಡರಿಗೆ ಖಡಕ್ ಸಂದೇಶ ಸಹ ರವಾನೆ ಮಾಡಿದ್ದರು. ಯಾವುದೇ ಕಾರಣಕ್ಕೂ ನಾಯಕರ ಬದಲಾವಣೆ ನಡೆಯುವುದಿಲ್ಲ, ಈ ಚುನಾವಣೆ ಮಾತ್ರವಲ್ಲ ಮುಂದಿನ ಲೋಖಾಸಭಾ ಚುನಾವಣೆಯು ಸಹ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದರು. ಹೈಕಮಾಂಡ್ ನಂಬಿಕೆಯನ್ನು ಉಳಿಸಿದ ಯಡಿಯೂರಪ್ಪನವರು ವಿರೋಧಿಗಳಿಗೆ ತನ್ನ ತಾಕತ್ತು ಏನು ಎಂದು ತೋರಿಸಿ ಬಿಜೆಪಿ ಪಕ್ಷವನ್ನು ಎರಡು ಚುನಾವಣೆಗಳಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿದ್ದರು. ಅದರಲ್ಲಿಯೂ ಮೋದಿ ರವರ ವರ್ಚಸ್ಸನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡು, ಅಮಿತ್ ಶಾ ರವರ ಚಾಣಕ್ಯ ನೀತಿಗಳನ್ನು ಅನುಸರಿಸಿ, ತಮ್ಮ ನಾಯಕತ್ವದ ಗುಣಗಳನ್ನು ಸರಿಯಾದ ರೀತಿ ಬಳಸಿ ಲೋಖಾಸಭಾ ಚುನಾವಣೆಯಲ್ಲಿ ೨೫ ಕ್ಷೇತ್ರಗಳನ್ನು ಕೇಂದ್ರಕ್ಕೆ ಉಡುಗೊರೆಯನ್ನಾಗಿ ನೀಡಿದ್ದರು.

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹುಟ್ಟು ಹೋರಾಟಗಾರನ ಸ್ವಭಾವವನ್ನು ತೋರಿ, ಮೋದಿ, ಅಮಿತ್ ಶಾ ಹಾಗೂ ಇವರ ವರ್ಚಸ್ಸು ಬಳಸಿಕೊಂಡು ಗೆದ್ದು ತೋರಿಸಿದ್ದರು. ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಉರುಳಿದ ನಂತರ, ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ, ಸಂಪುಟ ವಿಸ್ತರಣೆ ಮಾಡಿ, ಭುಗಿಲೆದ್ದ ಬಂಡಾಯವನ್ನು ಬಹುತೇಕ ಶಮನ ಮಾಡಿ, ಇನ್ನೇನು ಎಲ್ಲವೂ ಸರಿ ಇದೆ ಎಂದು ಕೊಳ್ಳುವುದಷ್ಟರಲ್ಲಿ ಇದೀಗ ಬಿಜೆಪಿ ಪಕ್ಷದ ವಿರುದ್ಧ ಕೆಲವು ಬಕೆಟ್ ಮಾಧ್ಯಮಗಳು (ಹೆಸರು ಹೇಳಲು ಸಾಧ್ಯವಿಲ್ಲ – ಬಕೆಟ್ ಎಂದರೆ ನಿಮಗೆ ಇಷ್ಟೋತ್ತಿಗೆ ತಿಳಿದಿರುತ್ತದೆ) ಪ್ರಸಾರ ಮಾಡಿದ ಸುದ್ದಿಯಿಂದ ಬಿಜೆಪಿ ಪಕ್ಷಕ್ಕೆ ಬಾರಿ ಹಿನ್ನಡೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಕುತಂತ್ರ ಇದೀಗ ಬಯಲಾಗಿದ್ದು, ದಯವಿಟ್ಟು ಯಾರು ಸುಖಾಸುಮ್ಮನೆ ಗಾಳಿ ಸುದ್ದಿಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡುತ್ತೇವೆ. ನೀವು ಯಾವ ಪಕ್ಷದ ಬೆಂಬಲಿಗರಾದರು ಆಗಿರಿ, ನೈಜ ಹೋರಾಟ ಮಾಡಿ ಗೆಲ್ಲಿ, ಸುಳ್ಳು ಸುದ್ದಿ ಹಬ್ಬಿಸಿ ಅಲ್ಲ ಎಂಬುದು ನಮ್ಮ ವಾದ.

ಹೌದು, ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ಪಕ್ಷದ ಹೈಕಮಾಂಡ್ ಯಡಿಯೂರಪ್ಪನವರನ್ನು ಕಡೆಗಣಿಸುತ್ತಿದೆ, ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ, ಅಷ್ಟೇ ಅಲ್ಲದೆ ಬಿಜೆಪಿ ಪಕ್ಷದ ನಾಯಕ ಸಂತೋಷ್ ಅವರ ಮಾತು ಕೇಳಿ ಸಂಪೂರ್ಣ ಸಚಿವರ ಪಟ್ಟಿಯನ್ನು ತಯಾರು ಮಾಡಲಾಗಿದೆ, ಬಿ ಸ್ ಯಡಿಯೂರಪ್ಪನವರ ಮಾತಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ. ಮನಬಂದಂತೆ ಸಚಿವರ ಪಟ್ಟಿಯನ್ನು ನಿರ್ಧಾರ ಮಾಡಲಾಗುತ್ತಿದೆ, ಯಾವುದೇ ನಿರ್ಧಾರಕ್ಕೂ ಬಿ ಸ್ ಯಡಿಯೂರಪ್ಪನವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ.ಇದು ಹೀಗೆ ಮುಂದುವರೆದರೆ ನಾನು ರಾಜೀನಾಮೆ ನೀಡುತ್ತೇನೆ, ತಾಕತ್ತು ಇದ್ದಾರೆ ಮರು ಚುನಾವಣೆ ಎದುರಿಸಿ ಗೆದ್ದು ತೋರಿಸಿ ಎಂದು ದೆಹಲಿಯಲ್ಲಿ ಕೂಗಾಡಿ ಬಂದಿದ್ದಾರೆ ಎಂದು ಸುದ್ದಿ ಪ್ರಸಾರವಾಗುತ್ತಿದೆ.

ಇದೇ ಸುದ್ದಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡ ವಿರೋಧ ಪಕ್ಷದ ಕಾರ್ಯಕರ್ತರು, ನೋಡಿ ಇದು ಬಿ ಸ್ ಯಡಿಯೂರಪ್ಪನವರಿಗೆ ಹೈ ಕಮಾಂಡ್ ನೀಡುವ ಗೌರವ, ಅದೇ ಕಾರಣಕ್ಕೆ ಪ್ರಾದೇಶಿಕ ಪಕ್ಷ ಬೆಳೆಯಬೇಕು ಎಂದರೆ, ಮತ್ತೊಂದೆಡೆ ಮೋದಿ ಹಾಗೂ ಬಿ ಸ್ ಯಡಿಯೂರಪ್ಪನವರ ಕಾಳಗ ಶುರುವಾಗಿದೆ. ಕೆಲವು ಜನರು ಮೋದಿ ವರ್ಚಸ್ಸಿನಿಂದ ಅಧಿಕಾರಕ್ಕೆ ಬಿಜೆಪಿ ಪಕ್ಷ ಬಂದಿದೆ ಎಂದು, ಇನ್ನು ಕೆಲವರು ಕೇವಲ ಬಿ ಸ್ ಯಡಿಯೂರಪ್ಪನವರ ವರ್ಚಸ್ಸಿನಿಂದ ಇಷ್ಟೆಲ್ಲ ಸಾಧ್ಯವಾಗಿದೆ ಎಂದು ಜಟಾಪಟಿಗೆ ಇಳಿದಿದ್ದಾರೆ. ಕೆಲವರು ಬಿಜೆಪಿ ಪಕ್ಷದ ಸಿದ್ದಂತಗಳಿಂದ ಬಂದಿದೆ ಎಂದು ವಾದಿಸುತ್ತಿದ್ದಾರೆ. ಇದರಿಂದ ಇದೀಗ ಬಿಜೆಪಿ ಪಕ್ಷದಲ್ಲಿ ಬಾರಿ ಆಂತರಿಕ ಕಾಳಗ ಆರಂಭವಾಗಿದ್ದು, ಸತ್ಯ ತಿಳಿಯದೆ ಎಲ್ಲರೂ ಪಕ್ಷ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಅಸಲಿ ಸತ್ಯ ಇಲ್ಲಿದೆ ನೋಡಿ,

ದೆಹಲಿಯಲ್ಲಿ ಈ ಕುರಿತು ಯಾವುದೇ ಗಲಾಟೆ ನಡೆದಿಲ್ಲ, ಬಿ ಸ್ ವೈ ರವರಿಗೆ ಹೈ ಕಮಾಂಡ್ ಮೊದಲಿಂದಲೂ ಗೌರವ ನೀಡುತ್ತಾ ಬಂದಿದೆ. ಅಮಿತ್ ಶಾ ರವರು ಕಾಶ್ಮೀರದ ವಿಚಾರದಲ್ಲಿ ನಿರತರಾಗಿದ್ದ ಕಾರಣ ಕೇವಲ ಒಂದು ಬಾರಿ ಭೇಟಿ ಮಾಡಲು ಸಾಧ್ಯವಾಗಿಲ್ಲ, ಆದ ಕಾರಣದಿಂದ ಬಿಜೆಪಿ ವರಿಷ್ಠ ಅರುಣ್​​ ಕುಮಾರ್ ರವರನ್ನು ಭೇಟಿ ಮಾಡಿ ಬಿ ಸ್ ವೈ ವಾಪಸಾಗಿದ್ದಾರೆ. ಇನ್ನುಳಿದಂತೆ ಪಕ್ಷದ ನಿಷ್ಠೆ ಹಾಗೂ ಬಿ ಸ್ ವೈ ರವರ ನಿರ್ಧಾರಗಳನ್ನು ಗಮನಿಸಿ ಸಚಿವ ಸ್ಥಾನ ನೀಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಮೂಲಕ ಬಕೆಟ್ ಮಾಧ್ಯಮಗಳ ನೈಜ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಆದರೆ ಇಲ್ಲಿ ವಿಪರ್ಯಾಸವೆಂದರೆ ಕೆಲವು ಚಾನೆಲ್ ಗಳು ಸತ್ಯವನ್ನು ಜನರ ಮುಂದೆ ಇಡದೆ, ಸುಳ್ಳು ಸುದ್ದಿ ಹಬ್ಬಿಸಿ ಮಜಾ ತಗೊಳ್ತಾ ಇದಾರೆ. ದಯವಿಟ್ಟು ಸತ್ಯವನ್ನು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.