ಮೋದಿ ಸಾಮರ್ಥ್ಯ ಕಂಡು ಇಡೀ ವಿಶ್ವವೇ ಬೆರಗು !! ಯಾಕೆ ಗೊತ್ತಾ??

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಏರಿದ ಮೇಲೆ ಭಾರತದ ವರ್ಚಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೆಳೆದಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ತಮ್ಮ ನಾಯಕತ್ವದ ಗುಣಗಳಿಂದ ವಿದೇಶಗಳಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಇರುವಂತೆ ಪ್ರವಾಸ ನಡೆಸಿ ವಿಶ್ವದ ಬಲಾಢ್ಯ ರಾಷ್ಟ್ರಗಳಿಗೆ ಭಾರತದ ಜೊತೆ ಸ್ನೇಹ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ಮಹತ್ವ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿ, ಇದೀಗ ಇಡೀ ವಿಶ್ವವೇ ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಲು ಕಾದು ಕುಳಿತಿರುವಂತೆ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಹೀಗಿರುವಾಗ ಇಂದು ಮತ್ತೊಮ್ಮೆ ಇಡೀ ವಿಶ್ವವೇ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಸಾಮರ್ಥ್ಯವನ್ನು ನೋಡಿ ಬೆರಗಾಗಿದೆ ಯಾಕೆ ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ನರೇಂದ್ರ ಮೋದಿ ರವರು G-7 ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೆಸರೇ ಸೂಚಿಸುವಂತೆ ಕೇವಲ ಏಳು ದೇಶಗಳ ಅಧ್ಯಕ್ಷರು ಮಾತ್ರ ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು, ಹೀಗಿರುವಾಗ ನರೇಂದ್ರ ಮೋದಿ ರವರು ಹೇಗೆ ಪಾಲ್ಗೊಳ್ಳುತ್ತಾರೆ?? ಭಾರತ ಈ ಒಕ್ಕೂಟದ ಭಾಗವಾಗಿಲ್ಲ ಹಾಗಿದ್ದರೂ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ?? ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವ ನರೇಂದ್ರ ಮೋದಿರವರ ನಾಯಕತ್ವದ ಗುಣಗಳನ್ನು ನೋಡಿ ಮನಸೋತಿದ್ದ ಫ್ರಾನ್ಸ್ ದೇಶದ ಅಧ್ಯಕ್ಷ ಮಾಕ್ರೋನ್ ರವರು ಖುದ್ದು ನರೇಂದ್ರಮೋದಿ ರವರನ್ನು ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಈ ಅಚ್ಚರಿಯ ನಡೆಯೇ ಇದೀಗ ವಿಶ್ವದ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದ್ದು, ಭಾರತದ ವರ್ಚಸ್ಸು ಏನು ಎಂಬುದು ಇದೀಗ ಇಡೀ ವಿಶ್ವಕ್ಕೆ ಅರ್ಥವಾಗುತ್ತಿದೆ.

Post Author: Ravi Yadav