ಚಿದಂಬರಂಗೆ ಮತ್ತೊಮ್ಮೆ ಭಾರಿ ಹಿನ್ನಡೆ- ಮೊಮ್ಮಗಳ ಹೆಸರಿನಲ್ಲಿ ಚಿದಂಬರಂ ಮಾಡಿದ ಅಕ್ರಮಗಳನ್ನು ಹೊರಹಾಕಿ ತಲ್ಲಣ ಸೃಷ್ಟಿಸಿದ ಇ.ಡಿ

ಚಿದಂಬರಂಗೆ ಮತ್ತೊಮ್ಮೆ ಭಾರಿ ಹಿನ್ನಡೆ- ಮೊಮ್ಮಗಳ ಹೆಸರಿನಲ್ಲಿ ಚಿದಂಬರಂ ಮಾಡಿದ ಅಕ್ರಮಗಳನ್ನು ಹೊರಹಾಕಿ ತಲ್ಲಣ ಸೃಷ್ಟಿಸಿದ ಇ.ಡಿ

ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಕೇಂದ್ರದ ಹಣಕಾಸು ಸಚಿವ ಚಿದಂಬರಂ ರವರಿಗೆ ಇದೀಗ ಭಾರಿ ಹಿನ್ನಡೆ ಉಂಟಾಗಿದೆ. ದಾಖಲೆಗಳ ಸಮೇತ ಚಿದಂಬರಂ ಅವರು ಇದೀಗ ಸಿಕ್ಕಿಬಿದ್ದಿದ್ದು, ಚಿದಂಬರಂ ರವರು ಈ ಪ್ರಕರಣದಿಂದ ತಪ್ಪಿಸಿಕೊಳ್ಳುವ ಎಲ್ಲಾ ಬಾಗಿಲುಗಳು ಮುಚ್ಚಿದಂತೆ ಕಾಣುತ್ತಿದೆ. ನ್ಯಾಯಾಲಯದ ಮುಂದೆ ತಾವು ಯಾವುದೇ ವಿದೇಶಿ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದ ಚಿದಂಬರಂ ರವರಿಗೆ ಇ.ಡಿ ಅಧಿಕಾರಿಗಳು ಭರ್ಜರಿ ಶಾಕ್ ನೀಡಿದ್ದಾರೆ. ದಾಖಲೆ ಸಮೇತ ಪ್ರತಿಪಾದಿಸುತ್ತಿರುವ ಇ.ಡಿ ಅಧಿಕಾರಿಗಳ ಮುಂದೆ ಚಿದಂಬರಂ ರವರು ಶರಣಾಗದೆ ಬೇರೆ ವಿಧಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು, ಚಿದಂಬರಂ ರವರು ತಾನು ಯಾವುದೇ ವಿದೇಶಿ ಖಾತೆಯನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿದ್ದರು ಆದರೆ, ಹಲವಾರು ದೇಶಗಳಲ್ಲಿ 11 ಸ್ಥಿರಾಸ್ತಿ ಹಾಗೂ 17 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಇ.ಡಿ ಅಧಿಕಾರಿಗಳು ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ವಿದೇಶಗಳಲ್ಲಿರುವ ಅಸ್ತಿತ್ವದಲ್ಲಿ ಇಲ್ಲದ ಕಂಪನಿಗಳು ಯಾರ ಹೆಸರಿನಲ್ಲಿದೆ ಎಂಬುದನ್ನು ಪತ್ತೆ ಮಾಡಲು ಹೊರಟಾಗ, ಚಿದಂಬರಂ ರವರ ಮೊಮ್ಮಗಳ ಹೆಸರು ಕೇಳಿಬಂದಿದೆ. ಎಲ್ಲ ಕಂಪನಿಗಳು ಚಿದಂಬರಂ ರವರ ಮೊಮ್ಮಗಳ ಹೆಸರಿನಲ್ಲಿ ವಿಲ್ ಮಾಡಲಾಗಿದೆ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ. ಎಲ್ಲಾ ವರದಿಗಳಿಂದ ಚಿದಂಬರ ಇದೀಗ ಇಡೀ ಅಧಿಕಾರಿಗಳ ವಶಕ್ಕೆ ಹೋಗುವುದು ಬಹುತೇಕ ಖಚಿತವಾಗಿದೆ, ಒಂದು ವೇಳೆ ಅದೇ ನಡೆದಲ್ಲಿ ಚಿದಂಬರಂ ರವರ ಜೈಲುವಾಸ ಮತ್ತಷ್ಟು ದಿನ ಮುಂದುವರೆಯಲಿದೆ.