ಹಿಂದೂಗಳ ವಿರುದ್ಧ ಮತ್ತೊಮ್ಮೆ ಬಹಿರಂಗ ಯುದ್ಧ ಸಾರಿತೇ ಜಗಮೋಹನ್ ರೆಡ್ಡಿ ಸರ್ಕಾರ !! ತಿರುಪತಿ ಭಕ್ತರಿಗೆ ಶಾಕ್

ಚುನಾವಣೆಯಲ್ಲಿ ಗೆಲ್ಲುವವರೆಗೂ ಮೆತ್ತಗಿದ್ದು ಜಗಮೋಹನ್ ರೆಡ್ಡಿ ರವರು ಇದೀಗ ಏಕಾಏಕಿ ಹಲವಾರು ವಿವಾದಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿಯೂ ಅಲ್ಪಸಂಖ್ಯಾತರ ಮನವೊಲಿಸಲು ಜಗಮೋಹನ್ ರೆಡ್ಡಿ ರವರು ಇಡುತ್ತಿರುವ ಒಂದೊಂದು ಹೆಜ್ಜೆಯೂ ಹಿಂದೂಗಳ ಧಾರ್ಮಿಕ ಭಾವನೆಗೆ ಭಾರೀ ಧಕ್ಕೆ ತರುತ್ತಿದೆ. ಮೊದಲಿನಿಂದಲೂ ಹಿಂದೂ ವಿರೋಧಿ ಹಾಗೂ ಕ್ರಿಶ್ಚಿಯನ್ ಮಶಿನರಿ ಗಳ ಕೈಗೊಂಬೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಜಗಮೋಹನ್ ರೆಡ್ಡಿ ರವರ ಪಕ್ಷ ಇದೀಗ ಹಣೆಪಟ್ಟಿಯನ್ನು ನಿಜವಾಗಿಸುವತ್ತಾ ಕೆಲವು ಹೆಜ್ಜೆಗಳನ್ನು ಇಡುತ್ತಿದೆ. ಇದೀಗ ಮತ್ತೊಂದು ಬೃಹತ್ ವಿವಾದವನ್ನು ಸೃಷ್ಟಿಸಿರುವ ಜಗಮೋಹನ್ ರೆಡ್ಡಿ ರವರ ಸರ್ಕಾರದ ಈ ನಡೆಯನ್ನು ದೇಶದ ಹಲವಾರು ಪ್ರತಿಷ್ಠಿತ ನಾಯಕರು ಖಂಡಿಸಿದ್ದಾರೆ.

ಇದೀಗ ಆಂಧ್ರಪ್ರದೇಶದ ರಸ್ತೆ ಸಾರಿಗೆ ಸಂಸ್ಥೆ ಗಳಲ್ಲಿ ತಿರುಪತಿ ದೇವಾಲಯಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಶಾಕ್ ನೀಡಿದೆ. ಇದ್ದಕ್ಕಿದ್ದ ಹಾಗೇ ಇಂದು ಬೆಳಗ್ಗೆಯಿಂದ ಪ್ರಯಾಣಿಕರು ತಿರುಪತಿಗೆ ಹೋಗಬೇಕು ಎಂದು ಟಿಕೆಟ್ ಖರೀದಿ ಮಾಡಿದರೆ, ಆ ಟಿಕೆಟ್ ನಲ್ಲಿ ಹಜ್ ಮತ್ತು ಜೆರುಸಲೇಂ ತೀರ್ಥಯಾತ್ರೆಯ ಜಾಹೀರಾತು ನೀಡಲಾಗಿದೆ. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ತೆರಳಿದ್ದ ಜನ ಟಿಕೆಟ್ ನೋಡಿ ಬಾರಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಆಂಧ್ರಪ್ರದೇಶದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಇದರ ಕುರಿತು ಇದೀಗ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದು ಕೊಂಡಿರುವ ರಾಜಾ ಸಿಂಗ್ ರವರು ಧ್ವನಿಯೆತ್ತಿದ್ದು, ಈ ಕೂಡಲೇ ಇದನ್ನು ನಿಲ್ಲಿಸದೆ ಹೋದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ವಾರ ಜಗನ್ ರವರು ಅಮೆರಿಕಾ ದೇಶಕ್ಕೆ ತೆರಳಿದ್ದಾಗ, ದೀಪ ಹಚ್ಚಿ ಕಾರ್ಯಕ್ರಮ ಉದ್ಘಾಟನೆ ಮಾಡದೆ ದೀಪ ಬೆಳಗಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಯಾಕೆಂದರೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಆರಂಭ ನೀಡುವುದು ಹಿಂದೂ ಸಂಸ್ಕೃತಿ, ಇದನ್ನು ಜಗನ್ ಗೌರವಿಸುವುದಿಲ್ಲ ಎಂದು ಹೇಳಿದ್ದಾರೆ.

Post Author: Ravi Yadav