ಸಚಿವ ಸ್ಥಾನದ ನಂತರ ಮತ್ತೊಂದು ವಿಚಾರದಲ್ಲಿ ಮಾಧುಸ್ವಾಮಿ ಫುಲ್ ಖುಷ್ ! ಯಾಕೆ ಗೊತ್ತಾ??

ಬಿಜೆಪಿ ಪಕ್ಷದ ಟಾಕ್ ಸ್ಟಾರ್ ಎಂದೇ ಖ್ಯಾತಿ ನಾಮ ಪಡೆದುಕೊಂಡಿರುವ ಮಾಧುಸ್ವಾಮಿ ರವರು ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಅಲ್ಲ ಬದಲಾಗಿ ಮತ್ತೊಂದು ವಿಚಾರದಲ್ಲಿ ಫುಲ್ ಖುಷ್ ಆಗಿದ್ದಾರೆ. ಹೌದು, ವಿಧಾನಸಭೆಯಲ್ಲಿ ವಿರೋಧಪಕ್ಷಗಳ ಸಂಪೂರ್ಣ ದಾಖಲೆಗಳ ಮೂಲಕ ಬೆವರಿಳಿಸುವ ಮಾಧುಸ್ವಾಮಿ ಅವರು ಇದೀಗ ಬಯಸದೆ ಬಂದ ಭಾಗ್ಯಕ್ಕಾಗಿ ಫುಲ್ ಖುಷ್ ಆಗಿದ್ದಾರೆ. ಮೊದಲಿನಿಂದಲೂ ಮಾಜಿ ಲೋಕೋಪಯೋಗಿ ಸಚಿವ ರೇವಣ್ಣ ರವರಿಂದ ಇಡಿದು ಪ್ರತಿಯೊಬ್ಬ ಸಚಿವರು ಬಹಳ ಬೇಡಿಕೆ ಇಡುತ್ತಿದ್ದ ಭಾಗ್ಯ ಇವರಿಗೆ ಕೇಳದೆ ಒಲಿದು ಬಂದಿದೆ ಅದೇ ಕಾರಣಕ್ಕಾಗಿ ಇದೀಗ ಮಾಧುಸ್ವಾಮಿ ರವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ವಿಧಾನಸೌಧದ ಲಕ್ಕಿ ರೂಂ ಎಂದು ನಂಬಿರುವ ಕೊಠಡಿ ಸಂಖ್ಯೆ 316 ರ ಮೇಲೆ ಎಲ್ಲಾ ಸಚಿವರ ಕಣ್ಣಿತ್ತು, ಹಲವಾರು ಬಿಜೆಪಿ ಪಕ್ಷದ ನಾಯಕರು ಸಹ ಕೊಠಡಿ ತಮಗೆ ಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಆದರೆ ಇದರಲ್ಲಿ ಯಾವುದೇ ಆಸಕ್ತಿಯನ್ನು ಹೊಂದಿರದ ಮಾಧುಸ್ವಾಮಿ ರವರು ಈ ಕೊಠಡಿಯನ್ನು ಪಡೆದುಕೊಂಡಿದ್ದಾರೆ. ಇನ್ನು ವಾಸ್ತುಪ್ರಕಾರ ಏನಾದರೂ ಬದಲಾಯಿಸುತ್ತಿರಿ ಕೊಠಡಿಯಲ್ಲಿ ಎಂದು ಪ್ರಶ್ನಿಸಿದಾಗ ಇಲ್ಲ ಎಂದು ಮಾಧುಸ್ವಾಮಿ ಅವರು ಉತ್ತರಿಸಿದ್ದಾರೆ. ಹಲವಾರು ಬಿಜೆಪಿ ನಾಯಕರು ಈ ಕೊಠಡಿಯನ್ನು ಪಡೆಯಲು ನಡೆಸಿದ ಎಲ್ಲಾ ಲಾಬಿಗಳು ವಿಫಲವಾಗಿ ಕೊನೆಗೆ ಈ ಕೊಠಡಿ ಮಾಧುಸ್ವಾಮಿ ರವರ ಕೈ ಗೆ ಸೇರಿದೆ.

Post Author: Ravi Yadav