ದೇಶದ ಮತ್ತೊಂದು ಬಾರಿ ಹಗರಣದಲ್ಲಿ ಬಿಗ್ ಟ್ವಿಸ್ಟ್ ! ಮತ್ತಷ್ಟು ಕಾಂಗ್ರೆಸ್ಸಿಗರಿಗೆ ಮರ್ಮಾಘಾತ !ಸುಬ್ರಮಣಿಯನ್ ಆಟ ಈಗ ಶುರು

ದೇಶದ ಮತ್ತೊಂದು ಬಾರಿ ಹಗರಣದಲ್ಲಿ ಬಿಗ್ ಟ್ವಿಸ್ಟ್ ! ಮತ್ತಷ್ಟು ಕಾಂಗ್ರೆಸ್ಸಿಗರಿಗೆ ಮರ್ಮಾಘಾತ !ಸುಬ್ರಮಣಿಯನ್ ಆಟ ಈಗ ಶುರು

ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಗಿರುವ ಅಜಿತ್ ದೋವಲ್ ರವರು ಕೆಲವು ತಿಂಗಳುಗಳ ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ರವರ ಬಂಧನವಾಗಿತ್ತು. ಈ ವಿಷಯ ತಿಳಿದ ಕೂಡಲೇ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಮೈಕಲ್ ರವರ ಬೆಂಬಲಕ್ಕೆ ನಿಂತಿದ್ದರು. ಇದನ್ನು ಕಂಡ ಜನ ಬಹುಶಹ ಈ ಹಗರಣದಲ್ಲಿ ಕಾಂಗ್ರೆಸ್ನ ಹಲವಾರು ನಾಯಕರು ಸಿಕ್ಕಿ ಬೀಳುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ನಂಬಿದ್ದರು, ಇದರ ಪರಿಣಾಮ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನುಭವಿಸಿತ್ತು.ಈ ಹಿಂದೆಯೇ ಇದೇ ವಿಚಾರವಾಗಿ ತಾನು ನಿಲ್ಲುವುದಾಗಿ ಹಾಗೂ ಗಾಂಧಿ ಕುಟುಂಬವನ್ನು ಜೈಲಿಗೆ ಅಟ್ಟುವುದಾಗಿ ಸುಬ್ರಮಣಿಯನ್ ಸ್ವಾಮಿ ಶಪಥ ಮಾಡಿದ್ದರು. ಇದೀಗ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣದಲ್ಲಿ ಮತ್ತೊಂದು ದೊಡ್ಡ ತಿರುವು ಸಿಕ್ಕಿದೆ.

ಈಗಾಗಲೇ ಬಹುತೇಕ ಮುಳುಗಡೆಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಈ ಹಗರಣದಿಂದ ಮತ್ತೊಂದು ದೊಡ್ಡ ಹೊಡೆತ ಬೀಳುವ ಮುನ್ಸೂಚನೆ ಸಿಕ್ಕಿದೆ. ಹೌದು ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಮೊದಲಿನಿಂದಲೂ ಪ್ರಕರಣದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗುತ್ತಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ರವರ ಸೋದರ ಅಳಿಯ ರತುಲ್ ಪೂರಿ ರವರು ಇದೀಗ ತಾನು ಶರಣಾಗುತ್ತೇನೆ ಎಂದು ತಿಳಿಸಿದ್ದಾರೆ. ಇವರಿಗೆ ಬಂಧನ ವಾರೆಂಟ್ ಜಾರಿಯಾಗಿದ್ದ ಕಾರಣ ಹಲವಾರು ವಕೀಲರು ಇವರ ಬೆಂಬಲಕ್ಕೆ ನಿಂತಿದ್ದರು. ಆದರೆ ಈಗಾಗಲೇ ಜಾಮೀನುಗಳಿಂದ ಬೇಸತ್ತಿರುವ ರತುಲ್ ಪೂರಿ , ನಾನು ಈ ಹಗರಣದಲ್ಲಿ ಶರಣಾಗತಿ ಆಗುತ್ತಿದ್ದೇನೆ. ನನಗೆ ಯಾವುದೇ ಜಾಮೀನು ಬೇಕಾಗಿಲ್ಲ. ತನಿಖೆಗೆ ಎಲ್ಲಾ ರೀತಿ ಸಹಕರಿಸಿ ಶರಣಾಗುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಸೋನಿಯಾ ಗಾಂಧಿ ಸೇರಿದಂತೆ ಇನ್ನೂ ಹತ್ತು ಹಲವಾರು ನಾಯಕರ ತಲೆದಂಡವಾಗುವ ಸೂಚನೆಗಳು ಸಿಕ್ಕಿವೆ.