ಪಾಕಿಸ್ತಾನಕ್ಕೆ ಮತ್ತೊಂದು ಭಾರಿ ಹೊಡೆತ ! ದೆಹಲಿಯಲ್ಲಿ ಕೂತು ಮೋದಿ ನೀಡುತ್ತಿರುವ ಹೊಡೆತಗಳಿಗೆ ತತ್ತರಿಸಿದ ಪಾಕಿಸ್ತಾನ

ಪಾಕಿಸ್ತಾನಕ್ಕೆ ಮತ್ತೊಂದು ಭಾರಿ ಹೊಡೆತ ! ದೆಹಲಿಯಲ್ಲಿ ಕೂತು ಮೋದಿ ನೀಡುತ್ತಿರುವ ಹೊಡೆತಗಳಿಗೆ ತತ್ತರಿಸಿದ ಪಾಕಿಸ್ತಾನ

ಇದೀಗ ತನಗೆ ಸಂಬಂಧವಿಲ್ಲದ ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಿ ಪಾಕಿಸ್ತಾನವು ಬಾರಿ ಹಿನ್ನಡೆಯನ್ನು ಅನುಭವಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತು ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತೀವೆ. ಇಷ್ಟಾದರೂ ಕುತಂತ್ರಿ ಪಾಕಿಸ್ತಾನ ಬುದ್ಧಿ ಕಲಿತಿಲ್ಲ, ತಾನು ಏನು ಹಾಗೂ ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿಯದೆ ಸುಖಾ ಸುಮ್ಮನೆ ಭಾರತದ ವಿರುದ್ಧ ಕಿಡಿಕಾರುತ್ತಿದೆ. ಒಂದೆಡೆ ಪಾಕಿಸ್ತಾನದ ಅಧ್ಯಕ್ಷ ಸೇರಿದಂತೆ ಹಲವಾರು ನಾಯಕರು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಾ ನಾಶಪಡಿಸುತ್ತೇವೆ ಎಂಬ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇತ್ತ ಭಾರತದ ಕೆಲವು ನಾಯಕರು ತಿರುಗೇಟು ನೀಡಿದರು ಸಹ ಮೋದಿ ಕೊಂಚ ಮೌನವಾಗಿದ್ದಾರೆ.

ಯಾಕೆಂದರೆ ಮೋದಿರವರು ಮಾತನಾಡುವ ಅವಶ್ಯಕತೆ ಇಲ್ಲ , ಪ್ರತಿ ಬಾರಿ ಭಾರತದ ವಿರುದ್ಧ ಪಾಕಿಸ್ತಾನ ಬೊಬ್ಬೆ ಹೊಡೆದ ನಂತರ ಮೋದಿ ಉತ್ತರ ನೀಡುವಷ್ಟರಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ಪಾಕಿಸ್ತಾನದ ಹಾರಾಟಕ್ಕೆ ತಕ್ಕ ಉತ್ತರ ನೀಡುತ್ತೀವೆ. ಇಷ್ಟಾದರೂ ಪಾಕಿಸ್ತಾನಕ್ಕೆ ಮಾತ್ರ ಬುದ್ಧಿ ಬಂದಿಲ್ಲ, ಪ್ರತಿಬಾರಿಯೂ ಮತ್ತೊಂದು ಕುತಂತ್ರಿ ರಾಷ್ಟ್ರವಾದ ಚೀನಾ ದೇಶದ ಬೆಂಬಲ ಮಾತ್ರ ಪಡೆದುಕೊಂಡು ಪಾಕಿಸ್ತಾನವು ತನ್ನ ಸಾಮರ್ಥ್ಯವನ್ನು ಮರೆತು ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಇದೇ ಕಾರಣಕ್ಕೆ, ಇದೀಗ ಮತ್ತೊಮ್ಮೆ ನರೇಂದ್ರ ಮೋದಿ ರವರು ಪಾಕಿಸ್ತಾನಕ್ಕೆ ಅತಿ ದೊಡ್ಡ ಹೊಡೆತವನ್ನು ನೀಡಿದ್ದಾರೆ. ದೆಹಲಿಯಲ್ಲಿ ಕೂತು ತಮ್ಮ ಚಾಣಕ್ಯ ರಾಜ ನೀತಿಗಳಿಂದ ಪಾಕಿಸ್ತಾನವನ್ನು ಅಕ್ಷರಸಹ ನಲುಗಿ ಹೋಗುವಂತೆ ಮಾಡಿದ್ದಾರೆ.

ಹೌದು, ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನ ದೇಶವು ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸುತ್ತಿದೆ ಎಂಬುದನ್ನು ನರೇಂದ್ರಮೋದಿ ರವರು ವಿಶ್ವ ಮಟ್ಟದಲ್ಲಿ ಸಾರಿ ಸಾರಿ ಹೇಳಿದ್ದರು. ಕೂಡಲೇ ಎಚ್ಚೆತ್ತುಕೊಂಡ ಏಷ್ಯಾ-ಪೆಸಿಫಿಕ್ ಗುಂಪು, ಉಗ್ರ ಸಂಘಟನೆಗಳಿಗೆ ಹರಿದು ಬರುತ್ತಿರುವ ವಿದೇಶಿ ಹಣ ಹಾಗೂ ಅಕ್ರಮ ನಗದು ವಹಿವಾಟಿಗೆ ಕಡಿವಾಣ ಹಾಕುವಂತೆ ಎಚ್ಚರಿಕೆ ನೀಡಿತು ಹಾಗೂ ವಿಫಲವಾದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿತು. ಮೋದಿ ರವರು ಅಂದು ಮತ್ತೊಮ್ಮೆ ಪಾಕಿಸ್ತಾನವನ್ನು ವಿಶ್ವದ ಮುಂದೆ ಬೆತ್ತಲು ಮಾಡಿದ್ದರು,ಇದೀಗ ಇದೇ ವಿಚಾರವಾಗಿ, ಮೋದಿ ರವರ ಆಟ ಆರಂಭವಾಗಿದ್ದು, ದೆಹಲಿಯಲ್ಲಿ ಕೂತು ನರೇಂದ್ರ ಮೋದಿರವರ ಆಡುತ್ತಿರುವ ಆಟಗಳಿಗೆ ಸಂಪೂರ್ಣ ಜಯ ದಕ್ಕಿದೆ.

ಇದೀಗ ಭಯೋತ್ಪಾದನೆಯನ್ನು ಹತ್ತಿಕ್ಕಲು ಸಂಪೂರ್ಣವಾಗಿ ಪಾಕಿಸ್ತಾನ ವಿಫಲವಾಗಿದೆ, ಅಷ್ಟೇ ಅಲ್ಲದೆ ಉಗ್ರರಿಗೆ ಹರಿದು ಬರುತ್ತಿರುವ ವಿದೇಶಿ ಹಣ ಹಾಗೂ ನಗದು ವಹಿವಾಟಿಗೆ ಬ್ರೇಕ್ ಹಾಕುವಲ್ಲಿ ವಿಫಲವಾಗಿದೆ, ಎಂಬುದು ಮತ್ತೊಮ್ಮೆ ವಿಶ್ವದ ಮುಂದೆ ಸಾಬೀತಾಗಿ, ಇದೇ ವಿಚಾರದಲ್ಲಿ ಒಟ್ಟು 11 ಅಂಶಗಳ ಪೈಕಿ 11ರಲ್ಲಿ ಪಾಕಿಸ್ತಾನ ವಿಫಲವಾಗಿರುವುದನ್ನು ಕಂಡ ಏಷ್ಯಾ-ಪೆಸಿಫಿಕ್ ಗುಂಪು (ಎಜಿಪಿ) ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ತೆಗೆದು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಬಾರಿ ಆಘಾತ ಎದುರಾಗಿದ್ದು, ಕಾಶ್ಮೀರದ ವಿಷಯದಲ್ಲಿ ಜಾಗತಿಕ ಬೆಂಬಲ ಪಡೆದುಕೊಳ್ಳಲು ಇನ್ನಿಲ್ಲದ ಕುತಂತ್ರಗಳನ್ನು ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಎಲ್ಲಾ ಬಾಗಿಲುಗಳು ಮುಚ್ಚಿ ದಂತಾಗಿದೆ. ಆಸ್ಟ್ರೇಲಿಯಾದ ಕ್ಯಾನ್ ಬೆರಾದಲ್ಲಿ ನಡೆಯುತ್ತಿರುವ ಎಪಿಜಿಯ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.