ಶಿವಕುಮಾರ ಸ್ವಾಮೀಜಿಗೆ ವಿಶೇಷ ರೀತಿಯ ಗೌರವ ಸಲ್ಲಿಸಲು ಅನುಮೋದನೆ ನೀಡಿದ ರಾಜ್ಯ ಸರ್ಕಾರ

ಶಿವಕುಮಾರ ಸ್ವಾಮೀಜಿಗೆ ವಿಶೇಷ ರೀತಿಯ ಗೌರವ ಸಲ್ಲಿಸಲು ಅನುಮೋದನೆ ನೀಡಿದ ರಾಜ್ಯ ಸರ್ಕಾರ

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದುಕೊಂಡಿದ್ದ ಸಿದ್ದಗಂಗಾ ಶ್ರೀಗಳು ಕೆಲವು ತಿಂಗಳುಗಳ ಹಿಂದೆ ಇಡೀ ಕರ್ನಾಟಕದ ಜನರನ್ನು ಅನಾಥರನ್ನಾಗಿ ಮಾಡಿ ಇಹಲೋಕ ತ್ಯಜಿಸಿದ್ದರು. ಲಕ್ಷಾಂತರ ಮಕ್ಕಳಿಗೆ ಆಶ್ರಯ ದಾತರಾಗಿದ್ದ ಶ್ರೀಗಳ ಸ್ಥಾನವನ್ನು ತುಂಬಲು ಮತ್ತೊಬ್ಬರಿಂದ ಸಾಧ್ಯವಿಲ್ಲ ಎಂಬುದು ಕಟುಸತ್ಯ. ಈ ನಡೆದಾಡುವ ದೇವರಿಗೆ ಇದೀಗ ರಾಜ್ಯ ಸರ್ಕಾರವು ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಅನುಮೋದನೆ ನೀಡಿದೆ, ಈ ವಿಷಯದ ಕುರಿತು ಬೆಂಗಳೂರು ಮಹಾನಗರಪಾಲಿಕೆಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

ಯಶವಂತಪುರ ಸರ್ಕಲ್ ನಲ್ಲಿ ಕೆನ್ನಮೆಟಲ್ ಕಾರ್ಖಾನೆಯ ವರೆಗಿನ ರಸ್ತೆಗೆ ಡಾಕ್ಟರ್ ಶಿವಕುಮಾರ ಮಹಾಸ್ವಾಮೀಜಿ ರಸ್ತೆ ಹಾಗೂ ಗೊರಗುಂಟೆಪಾಳ್ಯ ದಿಂದ ಕೆನ್ನಮೆಟಲ್ ಕಾರ್ಖಾನೆ ಬಳಿ ಕೊನೆಗೊಳ್ಳುವ ಮೇಲ್ಸೇತುವೆಗೆ ಡಾಕ್ಟರ್ ಶಿವಕುಮಾರ ಮಹಾಸ್ವಾಮೀಜಿ ಮೇಲ್ಸೇತುವೆ ಎಂದು ನಾಮಕರಣ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ವಿಶೇಷವೆಂದರೆ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಿಂದ ಹಿಡಿದು ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ನಾಯಕರಾಗಲಿ ಈ ನಡೆಯನ್ನು ವಿರೋಧ ಮಾಡಿಲ್ಲ. ಅವಿರೋಧವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.