ಬಿಗ್ ನ್ಯೂಸ್: ಚಿದು ನಂತರ ಪುತ್ರನ ಸರದಿ! ಚಿದಂಬರಂ ವಿರುದ್ಧ ಮತ್ತೆ 4 ಕೇಸ್ ! ಚಿದು ಎಲ್ಲಾ ಪ್ಲಾನ್ ಟುಸ್ ! ಬಯಲಾಗುತ್ತಿವೆ ಒಂದೊಂದೇ ಮಾಸ್ಟರ್ ಪ್ಲಾನ್

ಬಿಗ್ ನ್ಯೂಸ್: ಚಿದು ನಂತರ ಪುತ್ರನ ಸರದಿ! ಚಿದಂಬರಂ ವಿರುದ್ಧ ಮತ್ತೆ 4 ಕೇಸ್ ! ಚಿದು ಎಲ್ಲಾ ಪ್ಲಾನ್ ಟುಸ್ ! ಬಯಲಾಗುತ್ತಿವೆ ಒಂದೊಂದೇ ಮಾಸ್ಟರ್ ಪ್ಲಾನ್

ಇದೀಗ ಕಳೆದ ಬಾರಿ ಬಿಜೆಪಿ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ, ಯಾವುದೇ ಪ್ರಭಾವಿ ನಾಯಕರಾಗಲಿ ತಪ್ಪು ಮಾಡಿದರೆ ಜೈಲಿಗೆ ಕಳುಹಿಸುತ್ತೇವೆ ಎಂದು ನೀಡಿದ ಭರವಸೆ ಸತ್ಯವಾಗುತ್ತದೆ. ಭಾರತ ದೇಶದ ಮಾಜಿ ಗೃಹ ಹಾಗೂ ಹಣಕಾಸು ಸಚಿವ ಚಿದಂಬರಂ ರವರು ಇದೀಗ ಬಂಧನವಾಗಿದ್ದಾರೆ. ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐ ಹಾಗೂ ಈ.ಡಿ ಅಧಿಕಾರಿಗಳು ಚಿದಂಬರಂ ರವರ ಬಂಧನಕ್ಕೆ ಕಾದುಕುಳಿತಿದ್ದರು. ಕೊನೆಗೂ ನಿನ್ನೆ ತಡರಾತ್ರಿ ಚಿದಂಬರಂ ರವರ ಬಂಧನ ಆಗಿದೆ. ಇದರಿಂದ ಬಾರಿ ಶಾಕ್ ಗೆ ಒಳಗಾಗಿದ್ದ ಚಿದಂಬರಂ ಹಾಗೂ ಅವರ ಕುಟುಂಬಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಚಿದಂಬರಂ ರವರ ಮೇಲೆ ಮತ್ತೆ 4 ಕೇಸ್ ದಾಖಲಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಷ್ಟಕ್ಕೂ ಆ ಕೇಸ್ ಗಳು ಯಾವುವು ಹಾಗೂ ಯಾವ ರೀತಿ ಚಿದಂಬರಂ ರವರು ಮಾಸ್ಟರ್ ಪ್ಲಾನ್ ಮಾಡಿ ಹಗರಣಗಳನ್ನು ನಡೆಸಿದ್ದಾರೆ ಎನ್ನಲಾಗುತ್ತಿರುವ ಸಂಪೂರ್ಣ ವಿವರಗಳಿಗೆ ಕೆಳಗಡೆ ಓದಿ.

ಐಎನ್ಎಕ್ಸ್ ಮೀಡಿಯ ಮತ್ತು ಏರ್ಸೆಲ್ ಪ್ರಕರಣಗಳಲ್ಲಿ ಮಾತ್ರವಲ್ಲದೆ ಇತರ ನಾಲ್ಕು ಕಂಪನಿಗಳಿಗೆ ಅಕ್ರಮವಾಗಿ ವಿದೇಶದಿಂದ ಹೂಡಿಕೆ ಪಡೆಯಲು ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅನುಮೋದನೆ ನೀಡಿದ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ಇದೀಗ ತನಿಖೆಯನ್ನು ತೀವ್ರಗೊಳಿಸಿದೆ. ದಿಯಾಜಿಯೋ ಸ್ಕಾಟ್ಲೆಂಡ್ ಲಿಮಿಟೆಡ್, ಕಟರ ಹೋಲ್ಡಿಂಗ್ಸ್, ಎಸ್ಸಾರ್ ಸ್ಟೀಲ್ ಲಿಮಿಟೆಡ್ ಹಾಗೂ ಏರ್ಪೋರ್ಟ್ ಲಿಮಿಟೆಡ್ ಸಂಸ್ಥೆಗಳಿಂದ ಚಿದಂಬರಂ ರವರು ಹಲವಾರು ಕೋಟಿ ಪಡೆದಿದ್ದಾರೆ ಎಂಬ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಹುಡುಕಿದ್ದು ಈ ಹಣವನ್ನು, ಖೊಟ್ಟಿ ಕಂಪನಿಗಳಲ್ಲಿ ಚಿದಂಬರಂ ರವರು ಹೂಡಿಕೆ ಮಾಡಿಸಿದ್ದಾರೆ ಎಂದು ಈ.ಡಿ ಮೂಲಗಳು ತಿಳಿಸಿವೆ.

ಇಷ್ಟೇ ಅಲ್ಲದೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಜಾಗತಿಕ ದತ್ತಾಂಶ ಸೋರಿಕೆ ವೇಳೆ ಸುದ್ದಿಯಾಗಿದ್ದ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಕಂಪನಿಯೊಂದು ರಿಂದಲೂ, ಚಿದಂಬರಂ ರವರ ಪುತ್ರ ಕಾರ್ತಿಕ್ ರವರು ಭಾರಿ ಮೊತ್ತದ ಹಣ ಪಡೆದಿರುವುದು ಇದೀಗ ಈ.ಡಿ ಮೂಲಗಳಿಗೆ ತಿಳಿದುಬಂದಿದೆ. ವಿವಿಧ ಕಂಪನಿಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಅಕ್ರಮವಾಗಿ ಅನುಮೋದನೆ ನೀಡಿ, ಇದರಿಂದ ಬಂದ ಹಣವನ್ನು ಚಿದಂಬರಂ ರವರ ಪುತ್ರ ಕಾರ್ತಿ ಚಿದಂಬರಂ ರವರಿಗೆ ಸೇರಿದ ಒಂದು ಖೊಟ್ಟಿ ಕಂಪನಿಯಲ್ಲಿ ತೊಡಗಿಸಿ, ಈ ಹಣವನ್ನು ವಿದೇಶಗಳಲ್ಲಿ ನೆಲೆಯೂರಿರುವ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುತ್ತಿತ್ತು.

ಈ ಹಣವನ್ನು ಪ್ರತಿಷ್ಠಿತ ರಾಷ್ಟ್ರಗಳಾದ ಮಲೇಷಿಯಾ, ಸ್ಪೇನ್ ಹಾಗೂ ಬ್ರಿಟನ್ ಗಳಲ್ಲಿ ಆಸ್ತಿಗಳನ್ನು ಖರೀದಿ ಮಾಡಲು ಚಿದಂಬರಂ ರವರು ಬಳಸಿದ್ದಾರೆ ಎನ್ನಲಾಗಿದೆ. ಸ್ಪೇನ್ನಲ್ಲಿ ಟೆನ್ನಿಸ್ ಕ್ಲಬ್ ಒಂದನ್ನು ಖರೀದಿ ಮಾಡಿರುವ ಚಿದಂಬರಂ ರವರು, ಬ್ರಿಟನ್ನಲ್ಲಿ ಕಾಟೇಜ್ ಗಳನ್ನು ಇದೇ ಹಣದಿಂದ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಖುದ್ದು ಈ.ಡಿ ಮೂಲಗಳು ಖಚಿತಪಡಿಸಿದ್ದು, ಇಷ್ಟೆಲ್ಲಾ ದಾಖಲೆಗಳ ನಂತರವೂ ಸಹ ಚಿದಂಬರಂ ರವರ ಬೆಂಬಲಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಶಶಿ ತರೂರ್, ಆನಂದ್ ಶರ್ಮಾ ಸೇರಿದಂತೆ ಹಲವಾರು ಕಾಂಗ್ರೆಸ್ ನ ಹಿರಿಯ ಮುಖಂಡರು ನಿಂತಿದ್ದಾರೆ. ಈಗಾಗಲೇ ಇದೇ ವಿಷಯವಾಗಿ ಭಾರತ ಮತ್ತು ವಿದೇಶದಲ್ಲಿ ಚಿದಂಬರಂ ರವರಿಗೆ ಸೇರಿದ 54 ಕೋಟಿಗೂ ಹೆಚ್ಚು ಆಸ್ತಿಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇಷ್ಟೆಲ್ಲ ದಾಖಲೆ ನಂತರವೂ ಬಹಿರಂಗವಾಗಿ ಈ ನಾಯಕರು ಇವರ ಬೆಂಬಲಕ್ಕೆ ನಿಂತಿರುವುದು ವಿಪರ್ಯಾಸವೇ ಸರಿ.