ನಿಲ್ಲಿಸಿ ಸಾಕು, ಅಮಿತ್ ಶಾ ದ್ವೇಷ ತೀರಿಸಿಕೊಳ್ಳುತ್ತಿಲ್ಲ ! ಬೇಜವಾಬ್ದಾರಿ ಹೇಳಿಕೆ ಬೇಡ

ನಿಲ್ಲಿಸಿ ಸಾಕು, ಅಮಿತ್ ಶಾ ದ್ವೇಷ ತೀರಿಸಿಕೊಳ್ಳುತ್ತಿಲ್ಲ ! ಬೇಜವಾಬ್ದಾರಿ ಹೇಳಿಕೆ ಬೇಡ

ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ರವರು ಐಎನ್ಎಕ್ಸ್ ಹಗರಣದಲ್ಲಿ ಬಹುತೇಕ ಜೈಲಿಗೆ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು ಪಿ ಚಿದಂಬರಂ ರವರು 20 ಬಾರಿ ಜಾಮೀನು ಪಡೆದು, ಕುಖ್ಯಾತ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಹೀಗಿರುವಾಗ ಇದೀಗ ಜಾಮೀನು ಕೈತಪ್ಪಿ ಚಿದಂಬರಂ ರವರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇಂತಹ ಸಮಯದಲ್ಲಿ ಮಾಧ್ಯಮಗಳು ಸೇರಿದಂತೆ ಹಲವಾರು ಪ್ರಜೆಗಳು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸಲು ಪ್ರಯತ್ನ ಪಡುತ್ತಿದ್ದಾರೆ. ವಿಷಯದ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕೆಲವು ವರ್ಷಗಳ ಹಿಂದೆ ಪಿ ಚಿದಂಬರಂ ರವರು ಕೇಂದ್ರ ಸಚಿವರಾಗಿರುವ ಸಂದರ್ಭದಲ್ಲಿ ಅಮಿತ್ ಶಾ ಅವರ ಮೇಲೆ ನಕಲಿ ಎನ್ ಕೌಂಟರ್ ನಡೆದಿದೆ ಎಂದು ಪ್ರಕರಣ ದಾಖಲಾಗಿತ್ತು. ಸಿಬಿಐ ಸಂಸ್ಥೆಯು ಅಮಿತ್ ಶಾ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬಂಧನದಲ್ಲಿರಿಸಿತು, ಆದರೆ ತಪ್ಪು ಮಾಡಿಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಅಮಿತ್ ಶಾ ಅವರು ಯಾವುದೇ ಅಂಜಿಕೆ ಇಲ್ಲದೆ ವಿಚಾರಣೆಯನ್ನು ಎದುರಿಸಿ, ನಿರಪರಾಧಿ ಎಂದು ಸಾಬೀತುಪಡಿಸಿದರು. ಇದೇ ವಿಚಾರವನ್ನು ಇದೀಗ ಕೆದಕಿರುವ ಸಾಮಾನ್ಯ ಜನ ಅಮಿತ್ ಶಾ ರವರು ದ್ವೇಷ ರಾಜಕಾರಣ ಮಾಡಲು ಈ ರೀತಿ ಬಂಧಿಸಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ, ಕೆಲವು ಮಾಧ್ಯಮಗಳು ಸಹ ಹಾವಿನ ದ್ವೇಷ ಹನ್ನೆರಡು ವರುಷ, ಅಮಿತ್ ಶಾ ದ್ವೇಷ 9 ವರ್ಷ ಎಂದೆಲ್ಲಾ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ದ್ವೇಷ ರಾಜಕಾರಣದ ಬೀಜವನ್ನು ಸಾಮಾನ್ಯ ಜನರಲ್ಲಿ ಬಿತ್ತುತ್ತಿದ್ದಾರೆ.

ಅಲ್ಲ ಸ್ವಾಮಿ, ಕಳೆದ ನಾಲ್ಕು ವರ್ಷಗಳಿಂದ ಇದೇ ಹಗರಣದ ಕುರಿತು ತನಿಖೆ ನಡೆಯುತ್ತಿದೆ. ಹಲವಾರು ಬಾರಿ ಪಿ ಚಿದಂಬರಂ ರವರನ್ನು ಸಿಬಿಐ ಮತ್ತು ಈಡಿ ಅಧಿಕಾರಿಗಳು ಬಂಧಿಸಲು ಪ್ರಯತ್ನ ಪಟ್ಟಾಗ, ಜಾಮೀನು ತೆಗೆದುಕೊಂಡು ಬಚಾವ್ ಆಗುತ್ತಿದ್ದರು. ಈ ಬಾರಿಯೂ ಸಹ ಅದೇ ಪ್ರಯತ್ನ ಮಾಡಿದ್ದಾರೆ. ಆದರೆ ಪಿ ಚಿದಂಬರಂ ರವರಿಗೆ ಮತ್ತೊಮ್ಮೆ ನಿರೀಕ್ಷಣಾ ಜಾಮೀನು ನೀಡಲು, ನ್ಯಾಯಾಲಯ ಮುಂದಾಗಿಲ್ಲ. ಅವಕಾಶಕ್ಕಾಗಿ ಕಾದುಕುಳಿತಿದ್ದ ಅಧಿಕಾರಿಗಳು, ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಪಿಚಿದಂಬರಂ ರವರನ್ನು ವಿಚಾರಣೆ ನಡೆಸಲು ಬಂಧಿಸಲು ನಿರ್ಧಾರ ಮಾಡಿದ್ದಾರೆ. ಆದರೆ ಇದೇ ವಿಷಯವನ್ನು ಅಮಿತ್ ಶಾ ರವರ ಒಂಬತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಹೋಲಿಕೆ ಮಾಡಿ ದ್ವೇಷ ರಾಜಕಾರಣ ಎಂದು ಹೇಳಿದರೆ ಸಾಮಾನ್ಯ ಜ್ಞಾನ ಇಲ್ಲ ಎಂಬ ಅರ್ಥ ಬರುತ್ತದೆ.

ದಯವಿಟ್ಟು ಯಾರೂ ಸಹ ಯಾವುದೇ ಉದ್ವೇಗಕ್ಕೆ ಒಳಗಾಗದೆ, ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವುದೆಲ್ಲವು ಸತ್ಯ ಎಂದು ನಂಬಿ, ಬಿಜೆಪಿ ಪಕ್ಷದ ಬೆಂಬಲಿಗರು ಅಮಿತ್ ಶಾ ರವರು ಮಾಡುತ್ತಿರುವುದು ಸರಿ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಮಿತ್ ಶಾ ರವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದೆಲ್ಲಾ ಮನ ಬಂದಂತೆ ಸುದ್ದಿಗಳನ್ನು ಹಬ್ಬಿಸಬೇಡಿ. ಕೇವಲ ಸಾಮಾಜಿಕ ಜಾಲ ತಾಣಕ್ಕೆ ಸೀಮಿತವಾದದ್ದು ಬಹಳ ಇದೆ, ಬರುವ ಸುದ್ದಿಗಳೆಲ್ಲ ವನ್ನು ನಂಬಿ ನೀವು ನಿರ್ಧಾರ ಮಾಡುವುದು ಅಕ್ಷರಸಹ ತಪ್ಪು. ಇಂತಹ ಸಂದರ್ಭದಲ್ಲಿ ಜನರಿಗೆ ಸತ್ಯ ತಿಳಿಸಬೇಕಿದ್ದ ಹಲವಾರು ಟಿವಿ ಚಾನಲ್ ಗಳು ಸಹ ಇದೇ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ದಯವಿಟ್ಟು ಯಾವುದಕ್ಕೂ ಯಾರು ತಲೆ ಕೊಡಬೇಡಿ. ತಪ್ಪು ಮಾಡಿದ್ದರೆ ಎಂಥವರಿಗೂ ಶಿಕ್ಷೆಯಾಗಬೇಕು ತಪ್ಪು ಮಾಡದೇ ಇದ್ದರೆ ನ್ಯಾಯಾಲಯ ಬಿಡುಗಡೆ ಮಾಡೇ ಮಾಡುತ್ತದೆ. ಇದರಲ್ಲಿ ಯಾವುದೇ ದ್ವೇಷ ರಾಜಕಾರಣ, ಅಥವಾ ದ್ವೇಷಕ್ಕಾಗಿ ಮಾಡಿದ ಹಗರಣ ಇಲ್ಲ. ತಪ್ಪು ಮಾಡಿದರೆ ಶಿಕ್ಷೆ ಇಲ್ಲವಾದರೆ ಬಿಡುಗಡೆ.