ಗ್ರೇಟ್ ನ್ಯೂಸ್: ಅಖಾಡಕ್ಕೆ ಹರೀಶ್ ಪೂಂಜಾ ! ಪ್ರವಾಹ ಮುಗಿದ ಮೂರೇ ದಿನಗಳಲ್ಲಿ ಸಾಧಿಸಿದ್ದೇನು ಗೊತ್ತಾ??

ಗ್ರೇಟ್ ನ್ಯೂಸ್: ಅಖಾಡಕ್ಕೆ ಹರೀಶ್ ಪೂಂಜಾ ! ಪ್ರವಾಹ ಮುಗಿದ ಮೂರೇ ದಿನಗಳಲ್ಲಿ ಸಾಧಿಸಿದ್ದೇನು ಗೊತ್ತಾ??

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕರಾಗಿರುವ ಹರೀಶ್ ಪೂಂಜಾ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ, ಸಾಮಾನ್ಯ ಜೀವನದಿಂದ ಸದ್ದು ಮಾಡುತ್ತಿದ್ದ ಹರೀಶ್ ಪೂಂಜಾ ರವರು ಇತ್ತೀಚೆಗೆ ಪ್ರವಾಹ ಸಂತ್ರಸ್ತರಿಗಾಗಿ ಗಂಜಿ ಕೇಂದ್ರದ ಬದಲು ಕಾಳಜಿ ಕೇಂದ್ರ ಎಂಬ ಕೇಂದ್ರವನ್ನು ತೆರೆದು ಜನರ ಕಾಳಜಿಗಾಗಿ ತಾನು ಇದ್ದೇನೆ ಎಂಬುದನ್ನು ಸಾರಿ ಹೇಳಿದ್ದರು. ಈ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದ ಹರೀಶ್ ಪೂಂಜಾ ಅವರು ಇದೀಗ ಪ್ರವಾಹ ಮುಗಿದ ಕೇವಲ ಮೂರೇ ಮೂರು ದಿನಗಳಲ್ಲಿ ತಮ್ಮ ಕಾರ್ಯ ವೈಖರಿಯ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಪ್ರವಾಹದಿಂದ ನಲುಗಿ ಹೋಗಿರುವ ಬೆಳ್ತಂಗಡಿಯ ಅಭಿವೃದ್ಧಿಗೆ ಪಣ ತೊಟ್ಟಿರುವ ಹರೀಶ್ ಪೂಂಜಾ ರವರು ಕೇವಲ ಮೂರು ದಿನಗಳಲ್ಲಿ ಮಹತ್ವದ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ.

ಹೌದು ಈ ಬಾರಿ ಸುರಿದ ಮಹಾಮಳೆಗೆ ಬೆಳ್ತಂಗಡಿಯ ಬಾಂಜಾರು ಸೇತುವೆ ಕೊಚ್ಚಿಕೊಂಡು ಹೋಗಿತ್ತು, 53 ವರ್ಷಗಳ ಹಿಂದಿನ ಈ ಸೇತುವೆ ಮಹಾ ಮಳೆಗೆ ಕೊಚ್ಚಿಕೊಂಡು ಹೋದ ನಂತರ ಹರೀಶ್ ಪೂಂಜಾ ರವರು ಸುಮ್ಮನೆ ಕೂರಲಿಲ್ಲ. ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕರ ದುಂಬಾಲು ಬಿದ್ದ ಹರೀಶ್ ಪೂಂಜಾ ರವರು ಕೇವಲ ಮೂರೇ ಮೂರು ದಿನಗಳ ಒಳಗಡೆ ಸೇತುವೆ ನಿರ್ಮಿಸಿದ್ದಾರೆ. 5 ಲಕ್ಷ ರೂಪಾಯಿ ವೆಚ್ಚದಲ್ಲಿ 42 ಅಡಿ ಉದ್ದ ಹಾಗೂ ನಾಲ್ಕು ಅಡಿ ಅಗಲದ ಕಬ್ಬಿಣದ ಸೇತುವೆ ಕಟ್ಟಲಾಗಿದ್ದು, ದ್ವಿಚಕ್ರ ವಾಹನಗಳು ಓಡಾಡುವಂತೆ ಅನುವು ಮಾಡಿಕೊಡಲಾಗಿದೆ. ಈ ಕಾರ್ಯದ ಮೂಲಕ ಮತ್ತೊಮ್ಮೆ ಹರೀಶ್ ಪೂಂಜಾ ರವರು ಭಾರಿ ಸದ್ದು ಮಾಡುತ್ತಿದ್ದು, ಶಾಸಕರು ಈ ರೀತಿಯ ತ್ವರಿತ ಕಾರ್ಯಗಳನ್ನು ಕೈಗೆತ್ತಿಕೊಂಡಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.