ಬಿಗ್ ನ್ಯೂಸ್: ಬಯಲಾಯಿತು ಅಸಲಿ ಸತ್ಯ, ತೇಜಸ್ವಿ ಅವರ ವಿರುದ್ಧ ಮಾಡಿದ ಕುತಂತ್ರ ವೇನು ಗೊತ್ತಾ??

ಬಿಗ್ ನ್ಯೂಸ್: ಬಯಲಾಯಿತು ಅಸಲಿ ಸತ್ಯ, ತೇಜಸ್ವಿ ಅವರ ವಿರುದ್ಧ ಮಾಡಿದ ಕುತಂತ್ರ ವೇನು ಗೊತ್ತಾ??

ಕಳೆದ ಎರಡು ದಿನಗಳಿಂದ ತೇಜಸ್ವಿ ಸೂರ್ಯ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬಹಳ ಆಕ್ರೋಶದ ಮಾತುಗಳನ್ನು ಹೊರ ಹಾಕುತ್ತಿದ್ದಾರೆ. ತೇಜಸ್ವಿ ಸೂರ್ಯ ರವರು ಕನ್ನಡದ ಹೋರಾಟಗಾರರನ್ನು ರೌಡಿ ಎಂದು ಕರೆದಿದ್ದಾರೆ, ಹಾಗೇ ಹೀಗೆ ಎಂದೆಲ್ಲಾ ತೇಜಸ್ವಿ ಸೂರ್ಯ ರವರ ವಿರುದ್ಧ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ. ಆದರೆ ಇದೀಗ ಅಸಲಿಗೆ ನಡೆದಿದ್ದೇನು, ಹಾಗೂ ತೇಜಸ್ವಿಸೂರ್ಯ ರವರ ವಾದವೇನು ಎಂಬುದರ ಸತ್ಯ ಬಯಲಾಗಿದೆ. ಈ ಕುರಿತು ನಮಗೆ ಸುದ್ದಿ ಪ್ರಕಟಣೆ ಮಾಡುವಂತೆ ಕೆಲವರಿಂದ ಮೆಸೇಜ್ ಗಳು ಸಹ ಬಂದಿದ್ದವು, ಇದೇ ಸಮಯದಲ್ಲಿ ನಾವು ಸತ್ಯವನ್ನು ಹುಡುಕುತ್ತಾ ಹೊರಟಾಗ ನಮಗೆ ಸಿಕ್ಕ ಮಾಹಿತಿ ಈ ಕೆಳಗಿನಂತಿದೆ. ದಯವಿಟ್ಟು ಈ ವಿಷಯವನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ತಲುಪಿಸಿ, ಸತ್ಯದ ಅರಿವು ಮೂಡಿಸಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಇತ್ತೀಚಿಗೆ ಮೊದಲ ಬಾರಿ ಚುನಾವಣೆಯನ್ನು ಎದುರಿಸಿದರೂ ಸಹ ಭರ್ಜರಿಯಾಗಿ ಗೆದ್ದು ಬಂದು, ತದನಂತರ ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ಧ್ವನಿಯೆತ್ತಿ, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲು ಇಡಬೇಕು ಎಂಬ ವಾದವನ್ನು ಮಂಡಿಸಿ, ತದನಂತರ ಅಕ್ರಮ ವಲಸೆಗಾರರು ಬೆಂಗಳೂರಿನಲ್ಲಿಯೂ ನೆಲೆಸಿದ್ದಾರೆ ಎಂಬ ಸುದ್ದಿಯನ್ನು ಕೇಂದ್ರದ ಗಮನಕ್ಕೆ ತಂದು, ಇಡೀ ಸಂಸತ್ತಿನಲ್ಲಿ ಇದೇ ವಿಷಯದ ಕುರಿತು ಗಮನವನ್ನು ಸೆಳೆದು, ಅಕ್ರಮ ವಲಸಿಗರನ್ನು ಹೊರ ಹಾಕಬೇಕು ಎಂಬ ಕಾನೂನನ್ನು ದೇಶದ ಎಲ್ಲೆಡೆ ಜಾರಿಗೊಳಿಸಬೇಕು ಎಂದು ಧ್ವನಿ ಎತ್ತಿ ಇಡೀ ದೇಶದ ಗಮನ ಸೆಳೆದಿದ್ದ ತೇಜಸ್ವಿಸೂರ್ಯ ರವರ ವರ್ಚಸ್ಸು ದಿನೇ ದಿನೇ ಗಣನೀಯವಾಗಿ ಬೆಳೆಯುತ್ತಿತ್ತು.

ಅಷ್ಟರಲ್ಲಿ ಕರ್ನಾಟಕದಲ್ಲಿ ನಡೆದ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುವ ತೇಜಸ್ವಿ ಸೂರ್ಯ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಸರಣಿ ಟ್ವೀಟ್ ಗಳನ್ನು ಮಾಡುತ್ತಾರೆ, ಆದರೆ ಇಲ್ಲಿ ಇದಕ್ಕಾಗಿಯೇ ಕಾಯುತ್ತಿದ್ದ ಕೆಲವು ಜನರು ತೇಜಸ್ವಿ ಸೂರ್ಯ ರವರ ಟ್ವೀಟ್ ಅನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಂಡು ತೇಜಸ್ವಿ ಸೂರ್ಯ ರವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ, ಜನರನ್ನು ರೊಚ್ಚಿಗೆಬ್ಬಿಸಿ, ತೇಜಸ್ವಿ ಸೂರ್ಯ ರವರ ವರ್ಚಸ್ಸಿಗೆ ಧಕ್ಕೆ ತರಬೇಕು ಎಂಬ ಪ್ರಯತ್ನ ಮಾಡುತ್ತಾರೆ. ಆ ಸತ್ಯಾ ಸತ್ಯತೆಯ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ

ಮೊದಲನೇ ಟ್ವೀಟ್ ನಲ್ಲಿ, ಜೈನರ ಖಾಸಗಿ ದೇವಸ್ಥಾನದ ಮೇಲೆ ನಡೆದಿರುವ ದಾಳಿಯನ್ನು ಖಂಡನೆ ಮಾಡಿರುವ ತೇಜಸ್ವಿಸೂರ್ಯ ರವರು, ದೇವಸ್ಥಾನದ ಹಿಂದಿ ಬ್ಯಾನರ್ ವಿಷಯದ ಕುರಿತು ಜೈನ್ ಸಹೋದರರ ಮೇಲೆ ಕೆಲವು ರೌಡಿಗಳು ದಾಳಿ ಮಾಡಿದ ಸುದ್ದಿ ಬೇಸರ ತರಿಸಿದೆ, ಆದರೆ ದಾಳಿ ಮಾಡಿದ ಯಾರು ಉರ್ದು ಭಾಷೆಯ ಕುರಿತು ಧ್ವನಿ ಎತ್ತುವುದಿಲ್ಲ. ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಶಾಂತಿಯುತ ಜೈನರ ಮೇಲೆ ಆಕ್ರಮಣ ಮಾಡುವುದು ನಿಜವಾದ ಕನ್ನಡ ಪ್ರಿಯರಿಗೆ ಹಾಗೂ ಕಾರ್ಯಕರ್ತರಿಗೆ ಅಪಚಾರ ತರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದಾದ ಕೆಲವೇ ಕೆಲವು ನಿಮಿಷಗಳಲ್ಲಿ ಇದೇ ವಿಷಯದ ಕುರಿತು ತೇಜಸ್ವಿ ಸೂರ್ಯ ರವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಎರಡನೇಯ ಟ್ವೀಟ್ ನಲ್ಲಿ ಅಸಲಿ ಕತೆಯೇ ಇದೆ.

ಆದರೆ ಇದನ್ನು ಗಮನಿಸಿದ ಕೆಲವು ಜನರು, ರಾಜಕೀಯ ದುರುದ್ದೇಶದಿಂದ ಮೊದಲೇ ಟ್ವೀಟ್ ಅನ್ನು ಮಾತ್ರ ಜನರಿಗೆ ತೋರಿಸಿ, ಅಷ್ಟೇ ಅಲ್ಲದೆ ಟ್ವೀಟ್ ನ ಮೂಲ ಉದ್ದೇಶವನ್ನು ತಿರುಚಿ ಪ್ರಚಾರ ಮಾಡಿ, ತೇಜಸ್ವಿಸೂರ್ಯ ರವರು ಕನ್ನಡ ಹೋರಾಟಗಾರರನ್ನು ರೌಡಿಗಳು ಎಂದು ಕರೆದಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಾರೆ. ಭಾಷೆ, ನೆಲ ಹಾಗೂ ಜಲ ಎಂದು ಬಂದಾಗ ಮುಗ್ದ ಕನ್ನಡಿಗರು ಮರು ಆಲೋಚನೆ ಮಾಡದೆ ಯಾರೇ ಆಗಲಿ ಅವರ ವಿರುದ್ಧ ಧ್ವನಿ ಎತ್ತುತ್ತಾರೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ವಿರೋಧ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತೇಜಸ್ವಿಸೂರ್ಯ ರವರ ಮೇಲೆ ಮತ್ತಷ್ಟು ಜನ ಆಕ್ರೋಶ ಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳ ಮೇಲೆ ಅಭಿಯಾನಗಳನ್ನು ನಡೆಸುತ್ತಾರೆ.

ಇಲ್ಲಿಯವರೆಗೂ ಎರಡನೇ ಟ್ವೀಟ್ ನಲ್ಲಿ ಏನಿದೆ ಎಂಬುದು ಜನರಿಗೆ ತಿಳಿದು ಕೂಡ ಇಲ್ಲ, ಮೊದಲ ಟ್ವೀಟ್ ನ ಅರ್ಥ ಕೂಡ ತಿರುಚಲಾಗಿದೆ. ಮೊದಲನೆಯ ಟ್ವೀಟ್ನಲ್ಲಿ ಗೂಂಡಾಗಿರಿಯ ಮೂಲಕ ಯಾವುದೇ ಭಾಷೆಯ ಅಭಿವೃದ್ಧಿ ಅಥವಾ ಸಂರಕ್ಷಣೆ ಆಗುವುದಿಲ್ಲ, ಜೈನರ ಹಿಂದಿಯ ಫಲಕದ ವಿರುದ್ಧ ಧ್ವನಿ ಎತ್ತುವವರು ಮಸೀದಿಗಳಲ್ಲಿ ಅವ್ಯಾಹತವಾಗಿ ಬಳಸುವ ಉರ್ದುವಿನ ವಿರುದ್ಧ ಏತಕ್ಕೆ ಮೌನವಾಗಿದ್ದಾರೆ ಎಂಬರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ. ಎರಡನೇಯ ಟ್ವೀಟಿನಲ್ಲಿ ಪಂಪ, ಪೊನ್ನ ಹಾಗೂ ರನ್ನ ರಂತಹ ಸಾಹಿತ್ಯಕಾರರು ಕನ್ನಡದ ಮೂರು ರತ್ನಗಳು ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ ಇವರೆಲ್ಲರೂ ಮೂಲತಹ ಜೈನ ಸಮುದಾಯದವರು. ಆದ ಕಾರಣದಿಂದ ಉತ್ತರದಿಂದ ಕರ್ನಾಟಕಕ್ಕೆ ಬರುವ ಯುವ ಜೈನ ಸಮುದಾಯ ದಯವಿಟ್ಟು ಇತಿಹಾಸವನ್ನು ತಿಳಿದುಕೊಂಡು ತಮ್ಮ ಪ್ರತಿನಿತ್ಯದ ವ್ಯವಹಾರದಲ್ಲಿ  ಕನ್ನಡ ಬಳಸಬೇಕು ಎಂದು ಮನವಿ ಮಾಡಿದ್ದಾರೆ.

ಎರಡನೇಯ ಟ್ವೀಟ್ ಅನ್ನು ನಿರ್ಲಕ್ಷಿಸಿ, ಕೆಲವು ಜನರು ತೇಜಸ್ವಿಸೂರ್ಯ ರವರ ವಿರುದ್ಧ ಜನರನ್ನು ಎತ್ತೀ ಕಟ್ಟಬೇಕು ಎಂಬ ದುರುದ್ದೇಶದಿಂದ ಮೊದಲನೇ ಟ್ವೀಟ್ ಅನ್ನು ತಿರುಚಿ, ಮನಬಂದಂತೆ ಅರ್ಥಮಾಡಿಕೊಂಡು ಜನರಿಗೆ ಅದೇ ವಿಷಯವನ್ನು ತಲುಪಿಸಿದ್ದಾರೆ. ಇದೇ ಕಾರಣಕ್ಕಾಗಿ ಇದೀಗ ತೇಜಸ್ವಿಸೂರ್ಯ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಆಕ್ರೋಶದ ಮಾತುಗಳು ಕೇಳಿ ಬಂದಿವೆ. ಆದರೆ ದಯವಿಟ್ಟು ವಿಷಯ ತಿಳಿಯದೆ ಯಾರು ಈ ರೀತಿಯ ಆಕ್ರೋಶಕ್ಕೆ ಒಳಗಾಗಬಾರದು ಎಂಬುದು ನಮ್ಮ ಮನವಿ. ಉತ್ತರದಿಂದ ವಲಸೆ ಬರುವ ಎಲ್ಲರಿಗೂ ಕನ್ನಡ ಕಲಿಸಿ, ನಮ್ಮವರನ್ನಾಗಿ ಮಾಡಿಕೊಂಡು ಶಾಂತಿ ಸೌಹಾರ್ದತೆಯಿಂದ ಬಾಳ್ವೆ ಮಾಡೋಣ. ಜೈ ಕರ್ನಾಟಕ ಮಾತೆ.