ಭಾರತ-ಪಾಕ್ ಕಾಳಗದಲ್ಲಿ ಇಸ್ರೇಲ್ ದೇಶವನ್ನು ಎಳೆದುತಂದು ಪಾಕಿಸ್ತಾನ ಪಾಕಿಸ್ತಾನದ ಅಂತ್ಯ ಸನ್ನಿಹ??

ಪಾಕಿಸ್ತಾನ ದೇಶವು ತನ್ನ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದರೂ ಸಹ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುತ್ತದೆ, ಭಾರತದ ವಿರುದ್ಧ ಈ ರೀತಿ ಸದಾ ಕತ್ತಿ ಮಸೆಯುವ ಪಾಕಿಸ್ತಾನವು ಇದೀಗ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿ ಭಾರತದ ಆರ್ಥಿಕತೆಗೆ ಪೆಟ್ಟು ನೀಡಲು ಗಡಿಯಲ್ಲಿ ತನ್ನ ಯುದ್ಧ ವಿಮಾನಗಳನ್ನು ತಂದು ನಿಲ್ಲಿಸಿದೆ. ಆದರೆ,ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಕಳೆದ ಬಾರಿ ಗಡಿ ದಾಟಿ ಉಗ್ರಗಾಮಿಗಳನ್ನು ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಹೊಡೆಯುವ ವೇಳೆಯಲ್ಲಿ ಭಾರತೀಯ ಯುದ್ಧ ವಿಮಾನಗಳು ಎದುರಾದರೂ ಸಹ ಪಾಕಿಸ್ತಾನದ ಎರಡು ಯುದ್ಧವಿಮಾನಗಳು ಭಯಬಿದ್ದು ವಾಪಸ್ಸು ತೆರಳಿದ್ದವು. ಇಷ್ಟು ಭಯವನ್ನು ಹೊಂದಿರುವ ಪಾಕಿಸ್ತಾನವು ಇಂದು ಗಡಿಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ನಾಲ್ಕೈದು ಯುದ್ಧ ವಿಮಾನಗಳಿಂದ ಭಾರತವನ್ನು ಸಂಪೂರ್ಣ ನಾಶಮಾಡಿ ಬಿಡುವಂತೆ, ಗಡಿಯಲ್ಲಿ ಸುಖಾಸುಮ್ಮನೆ ಯುದ್ಧ ವಿಮಾನಗಳನ್ನು ತಂದು ನಿಲ್ಲಿಸಿದೆ.

ಇಷ್ಟಕ್ಕೆ ಸುಮ್ಮನಾಗದ ಪಾಕಿಸ್ತಾನ ದೇಶವು ಇದೀಗ ಭಾರತ ಹಾಗೂ ತನ್ನ ನಡುವಿನ ಕಾಳಗದಲ್ಲಿ ಭಾರತದ ಮಿತ್ರ ರಾಷ್ಟ್ರ ಹಾಗೂ ಉಗ್ರಗಾಮಿಗಳ ವಿರುದ್ಧ ಸದಾ ಕಿಡಿಕಾರುವ ಇಸ್ರೇಲ್ ದೇಶವನ್ನು ಎಳೆದು ತಂದಿದೆ. ಮೊದಲಿನಿಂದಲೂ ಎಂತಹ ಸಮಯದಲ್ಲಿಯೂ ನಾವು ಭಾರತ ದೇಶದ ಜೊತೆ ನಿಂತು ಕೊಳ್ಳುತ್ತೇವೆ ಎಂದು ಹಲವಾರು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಘೋಷಣೆ ಮಾಡಿರುವ ದೇಶದ ಬಗ್ಗೆ ಇದೀಗ ಪಾಕಿಸ್ತಾನವು ಹಗುರವಾಗಿ ಮಾತನಾಡುತ್ತಿದೆ ಹಾಗೂ ಸುಖಾಸುಮ್ಮನೆ ಇಸ್ರೇಲ್ ದೇಶದ ಮೇಲೆ ಗಂಭೀರ ಆರೋಪವನ್ನು ಮಾಡಿದೆ. ಇದರಿಂದ ಇಸ್ರೇಲ್ ದೇಶವು ಕೆರಳುವುದು ಖಚಿತ.

ವಿಶ್ವದ ಯಾವುದೇ ಬಲಾಢ್ಯ ದೇಶಗಳು ಇಸ್ರೇಲ್ ದೇಶವನ್ನು ಎದುರುಹಾಕಿಕೊಳ್ಳಲು ಕೊಂಚ ಹಿಂದೆ ಮುಂದೆ ನೋಡುತ್ತವೆ, ಅತ್ಯಾಧುನಿಕ ಯುದ್ಧ ವಿಮಾನಗಳು ಕ್ಷಿಪಣಿಗಳ ಬಾರಿ ದಾಸ್ತಾನು ಹೊಂದಿರುವ ಇಸ್ರೇಲ್ ದೇಶವನ್ನು ಇದೀಗ ಪಾಕಿಸ್ತಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕಿಸಿದೆ. ಕಾಶ್ಮೀರಕ್ಕೆ ಹಾಗೂ ಇಸ್ರೇಲ್ ದೇಶಕ್ಕೆ ಯಾವುದೇ ಸಂಬಂಧ ಇಲ್ಲವಾದರೂ ಸಹ ಭಾರತ ದೇಶವು ಈ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಿಂದೆ ಇಸ್ರೇಲ್ ದೇಶದ ಕುತಂತ್ರ ನೀತಿ ಅಡಗಿದೆ, ಮೋದಿ ನೇತೃತ್ವದ ಸರ್ಕಾರದ ಈ ಎಲ್ಲಾ ನಿರ್ಧಾರಗಳ ಹಿಂದೆ ಇಸ್ರೇಲ್ ದೇಶವು ಅಡಗಿ ಕೂತಿದೆ ಎಂದು ಇಸ್ರೇಲ್ ದೇಶದ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದೆ.

ಅದೇ ಕಾರಣಕ್ಕಾಗಿ ಇದೀಗ ಇಸ್ರೇಲ್ ಕೆರಳಿ ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ, ಯಾಕೆಂದರೆ ಇಸ್ರೇಲ್ ದೇಶದ ಬಗ್ಗೆ ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ, ತನ್ನ ವಿರುದ್ಧ ಕತ್ತಿ ಮಸೆಯುವ ಯಾವ ದೇಶವಾದರೂ ಸರಿ, ಮುಲಾಜಿಲ್ಲದೆ ತಕ್ಕ ತಿರುಗೇಟು ನೀಡಲು ಶಕ್ತವಾಗಿರುವ ದೇಶ ಇಸ್ರೇಲ್. ಮೊದಲಿನಿಂದಲೂ ಉಗ್ರವಾದದ ವಿರುದ್ಧ ಬಾರಿ ಕಠಿಣ ನಿಲುವನ್ನು ಹೊಂದಿರುವ ಇಸ್ರೇಲ್ ದೇಶವು ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಮಾಡಲು ತುದಿಗಾಲಲ್ಲಿ ಕಾದು ಕುಳಿತಿರುತ್ತದೆ, ಇಷ್ಟು ಸಾಲದು ಎಂಬಂತೆ ಇದೀಗ ಹೇಳಿಕೆಯಿಂದ ಪಾಕಿಸ್ತಾನವನ್ನು ದೂರಲು ಮತ್ತೊಂದು ಕಾರಣ ಇಸ್ರೇಲ್ ದೇಶಕ್ಕೆ ಸಿಕ್ಕಂತಾಗಿದೆ, ಕೇವಲ ಭಾರತದ ವಿರುದ್ಧ ಕತ್ತಿಮಸೆದರೆ ಪ್ರತಿಕಾರ ತೀರಿಸಿಕೊಳ್ಳುವ ಮಾತನಾಡುತ್ತಿದ್ದ ಇಸ್ರೇಲ್ ದೇಶವು ಇದೀಗ ತನ್ನ ತಂಟೆಗೆ ಬಂದಿರುವ ಪಾಕಿಸ್ತಾನಕ್ಕೆ ಯಾವ ರೀತಿಯ ಉತ್ತರ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav